ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಡಿಯೋ: ಧೋನಿ, ಸುರೇಶ್ ರೈನಾ ಮತ್ತು ವಿರಾಟ್ ಕೊಹ್ಲಿ ಜೊತೆ ನಟಿಸಿದ್ದ ಉನ್ಮುಕ್ತ್ ಚಂದ್

Unmukt Chand featured in a PEPSI ad alongside MS Dhoni Virat Kohli and Suresh Raina

ಶುಕ್ರವಾರ ( ಆಗಸ್ಟ್ 13 ) ಭಾರತೀಯ ಕ್ರಿಕೆಟ್‌ಗೆ 28 ವರ್ಷ ಹರೆಯದ ಉನ್ಮುಕ್ತ್ ಚಂದ್ ನಿವೃತ್ತಿಯನ್ನು ಘೋಷಿಸುವುದರ ಮೂಲಕ ಕ್ರಿಕೆಟ್ ಜಗತ್ತು ಬೇಸರಕ್ಕೊಳಗಾಗುವ ಇಂತಹ ನಿರ್ಣಯವನ್ನು ಉನ್ಮುಕ್ತ್ ಚಂದ್ ತೆಗೆದುಕೊಂಡಿದ್ದಾರೆ.

ಅಜಿಂಕ್ಯಾ ರಹಾನೆ ಬದಲು ಭಾರತ ಟೆಸ್ಟ್ ತಂಡದ ಉಪನಾಯಕನಾಗುವ ಸಾಧ್ಯತೆಯಿರುವ 3 ಆಟಗಾರರು!ಅಜಿಂಕ್ಯಾ ರಹಾನೆ ಬದಲು ಭಾರತ ಟೆಸ್ಟ್ ತಂಡದ ಉಪನಾಯಕನಾಗುವ ಸಾಧ್ಯತೆಯಿರುವ 3 ಆಟಗಾರರು!

ಟೀಮ್ ಇಂಡಿಯಾದಲ್ಲಿ ಅವಕಾಶವನ್ನು ಹರಸಿ ಹಲವಾರು ವರ್ಷಗಳಿಂದ ಕಾಯುತ್ತಿದ್ದ ಉನ್ಮುಕ್ ಚಂದ್ ಯಾವುದೇ ರೀತಿಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಅವಕಾಶ ಗಳನ್ನು ಪಡೆದುಕೊಳ್ಳಲೇ ಇಲ್ಲ. ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಾಯಕನಾಗಿ 111 ರನ್ ಬಾರಿಸಿ ಅತ್ಯದ್ಭುತ ಪ್ರದರ್ಶನವನ್ನು ನೀಡಿ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದರು. ಹೀಗೆ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನವನ್ನು ತೋರಿದ ಉನ್ಮುಕ್ತ್ ಚಂದ್ ಶೀಘ್ರದಲ್ಲಿಯೇ ಟೀಮ್ ಇಂಡಿಯಾಗೆ ಆಯ್ಕೆಯಾಗಲಿದ್ದಾರೆ ಎಂಬ ವಿಶ್ವಾಸವನ್ನು ಹಲವಾರು ಮಾಜಿ ಕ್ರಿಕೆಟಿಗರು ವ್ಯಕ್ತಪಡಿಸಿದ್ದರು.

ತಂಡದಿಂದ ಕೈ ಬಿಟ್ಟಿದ್ದರು, ಅವಕಾಶವಿರಲಿಲ್ಲ; ಲಾರ್ಡ್ಸ್ ಶತಕದ ಬಳಿಕ ಮನಬಿಚ್ಚಿ ಮಾತನಾಡಿದ ಕೆಎಲ್ ರಾಹುಲ್ತಂಡದಿಂದ ಕೈ ಬಿಟ್ಟಿದ್ದರು, ಅವಕಾಶವಿರಲಿಲ್ಲ; ಲಾರ್ಡ್ಸ್ ಶತಕದ ಬಳಿಕ ಮನಬಿಚ್ಚಿ ಮಾತನಾಡಿದ ಕೆಎಲ್ ರಾಹುಲ್

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಉನ್ಮುಕ್ತ್ ಚಂದ್ ಅತ್ಯುತ್ತಮ ಆಟವನ್ನಾಡಿದ ಕಾರಣ ಟೀಮ್ ಇಂಡಿಯಾ ಎ ತಂಡದ ನಾಯಕನ ಪಟ್ಟವನ್ನು ಸಹ ನೀಡಲಾಯಿತು. ಹೀಗೆ ಹಂತ ಹಂತವಾಗಿ ಕ್ರಿಕೆಟ್ ಜೀವನದಲ್ಲಿ ಮೇಲೇರುತ್ತಿದ್ದ ಉನ್ಮುಕ್ತ್ ಚಂದ್ ಟೀಮ್ ಇಂಡಿಯಾ ಹಿರಿಯರ ತಂಡದ ಪರ ಆಡುವ ಕನಸನ್ನು ಹೊತ್ತಿದ್ದರು. ಅದರಲ್ಲಿಯೂ ಟೀಮ್ ಇಂಡಿಯಾ ಎ ತಂಡದ ನಾಯಕನಾಗಿ ಆಯ್ಕೆಯಾದ ಉನ್ಮುಕ್ತ್ ಚಂದ್ ಆದಷ್ಟು ಬೇಗ ಹಿರಿಯರ ತಂಡಕ್ಕೆ ಆಯ್ಕೆಯಾಗಲಿದ್ದೇನೆ ಎಂಬ ಭರವಸೆಯನ್ನು ಇಟ್ಟುಕೊಂಡಿದ್ದರು. ಆದರೆ ಆ ನಂಬಿಕೆ ಮತ್ತು ಭರವಸೆ ಇಂದಿಗೂ ಸಹ ನಿಜವಾಗಲೇ ಇಲ್ಲ, ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಉನ್ಮುಕ್ತ್ ಚಂದ್ ಯಾವುದೇ ಅವಕಾಶಗಳಿಲ್ಲದೆ ವರ್ಷಾನುಗಟ್ಟಲೆ ಕಾಯ್ದು ಇದೀಗ ನಿವೃತ್ತಿ ಘೋಷಿಸುವ ತೀರ್ಮಾನವನ್ನು ಕೈಗೆತ್ತಿಕೊಂಡುಬಿಟ್ಟಿದ್ದಾರೆ.

ಸದ್ಯ ಉನ್ಮುಕ್ ಚಂದ್ ಭಾರತೀಯ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಿಸಿದ ಬೆನ್ನಲ್ಲೇ ಉನ್ಮುಕ್ ಚಂದ್ ನಟಿಸಿದ್ದ ಹಳೆಯ ಪೆಪ್ಸಿ ಸಂಸ್ಥೆಯ ಜಾಹೀರಾತೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಆಗಿನ್ನೂ ಅಂಡರ್ 19 ಭಾರತ ತಂಡದ ನಾಯಕನಾಗಿದ್ದ ಉನ್ಮುಕ್ತ್ ಚಂದ್ ಪೆಪ್ಸಿ ಜಾಹೀರಾತಿನಲ್ಲಿ ತನ್ನ ಹಿರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗರ ಕೋಣೆಗೆ ನುಗ್ಗಿ ಪೆಪ್ಸಿ ಕುಡಿಯುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಈ ದೃಶ್ಯದಲ್ಲಿ ಮಾಜಿ ನಾಯಕ ಎಂಎಸ್ ಧೋನಿ, ಸುರೇಶ್ ರೈನಾ ಮತ್ತು ಭಾರತದ ನಾಯಕ ವಿರಾಟ್ ಕೊಹ್ಲಿ ಕೂಡ ಅಭಿನಯಿಸಿದ್ದರು. ಉನ್ಮುಕ್ತ್ ಚಂದ್ ಅಂಡರ್ 19 ಭಾರತೀಯ ಕ್ರಿಕೆಟಿಗನ ಪಾತ್ರವನ್ನು ನಿರ್ವಹಿಸಿದ್ದರೆ ಎಂಎಸ್ ಧೋನಿ, ಸುರೇಶ್ ರೈನಾ ಮತ್ತು ವಿರಾಟ್ ಕೊಹ್ಲಿ ಹಿರಿಯರ ತಂಡದ ಆಟಗಾರರಾಗಿ ಆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

ಇನ್ನು ಉನ್ಮುಕ್ತ್ ಚಂದ್ ಆ ಜಾಹೀರಾತಿನಲ್ಲಿಯೂ ಸಹ ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಳ್ಳಬೇಕೆಂಬ ಆಸೆಯನ್ನು ವ್ಯಕ್ತ ಪಡಿಸುತ್ತಾ ನಟಿಸಿದ್ದರು. ಉನ್ಮುಕ್ತ್ ಚಂದ್ ಎಂ ಎಸ್ ಧೋನಿ, ಸುರೇಶ್ ರೈನಾ ಮತ್ತು ವಿರಾಟ್ ಕೊಹ್ಲಿ ಜೊತೆ ಒಟ್ಟಿಗೆ ಕಾಣಿಸಿಕೊಂಡಿರುವ ಈ ಜಾಹೀರಾತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಉನ್ಮುಕ್ತ್ ಚಂದ್ ಅಂಡರ್ 19 ತಂಡದ ನಾಯಕನಾಗಿ ಇಷ್ಟೆಲ್ಲಾ ಹೆಸರು ಮಾಡಿದ್ದರೂ ಸಹ ಟೀಮ್ ಇಂಡಿಯಾಗೆ ಆಯ್ಕೆಯಾಗದೆ ಇರುವುದು ನಿಜಕ್ಕೂ ಬೇಸರದ ಸಂಗತಿ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಭಾರತದ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿರುವ ಉನ್ಮುಕ್ತ್ ಚಂದ್ ಯುನೈಟೆಡ್ ಸ್ಟೇಟ್ಸ್ ಕ್ರಿಕೆಟ್ ಜೊತೆ 3 ವರ್ಷಗಳ ಒಪ್ಪಂದವನ್ನೂ ಮಾಡಿಕೊಂಡಿದ್ದು ಯುನೈಟೆಡ್ ಸ್ಟೇಟ್ಸ್‌ನ ಮೇಜರ್ ಲೀಗ್ ಕ್ರಿಕೆಟ್‍ನಲ್ಲಿ ಆಟವಾಡಲಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಉನ್ಮುಕ್ತ್ ಚಂದ್ ತನಗಿನ್ನೂ 28 ವರ್ಷ, ಇನ್ನೂ 10 ವರ್ಷಗಳ ಕಾಲ ಕ್ರಿಕೆಟ್ ಆಡಬಹುದಾದ ಶಕ್ತಿ ತನ್ನಲ್ಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕ್ರಿಕೆಟ್‍ನಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತೇನೆ ಎಂದು ಉನ್ಮುಕ್ತ್ ಚಂದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಭಾರತೀಯ ಕ್ರಿಕೆಟ್‍ಗೆ ತಾವು ನಿವೃತ್ತಿ ಘೋಷಿಸಿದ್ದರ ಹಿಂದಿನ ಕಾರಣವನ್ನು ಬಿಚ್ಚಿಟ್ಟ ಉನ್ಮುಕ್ತ್ ಚಂದ್ ಅಸೋಸಿಯೇಶನ್‌ನ ವಿವಿಧ ರಾಜಕೀಯಗಳಿಂದಲೇ ತನ್ನಂಥ ಎಷ್ಟೋ ಪ್ರತಿಭಾವಂತ ಕ್ರಿಕೆಟಿಗರಿಗೆ ಅವಕಾಶಗಳು ಲಭಿಸುತ್ತಿಲ್ಲ, ಹೀಗಾಗಿ ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಉನ್ಮುಕ್ತ್ ಚಂದ್ ಹೇಳಿಕೆ ನೀಡಿದ್ದರು.

Story first published: Saturday, August 14, 2021, 13:54 [IST]
Other articles published on Aug 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X