ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶಹಬಾಝ್‌ಗೆ 10 ವಿಕೆಟ್, ವೆಸ್ಟ್ ಇಂಡೀಸ್ 'ಎ' ವಿರುದ್ಧ ಗೆಲುವಿನತ್ತ ಭಾರತ 'ಎ'

Unofficial Test: India A on course for big win against West Indies A

ಆ್ಯಂಟಿಗುವಾ, ಜುಲೈ 27: ಎಡಗೈ ಸ್ಪಿನ್ನರ್ ಶಹಬಾಝ್ ನದೀಮ್ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಆ್ಯಂಟಿಗುವಾದ ನಾರ್ತ್‌ಸೌಂಡ್‌ನಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 'ಎ' ವಿರುದ್ಧ ಭಾರತ 'ಎ' ತಂಡ ಭರ್ಜರಿ ಗೆಲುವನ್ನಾಚರಿಸುವುದರಲ್ಲಿದೆ.

ಕೊಹ್ಲಿ-ರೋಹಿತ್ ನಡುವೆ ಏನೋ ಸರಿಯಿಲ್ಲ ಎನ್ನುತ್ತಿವೆ ಈ ನಿದರ್ಶನಗಳು!ಕೊಹ್ಲಿ-ರೋಹಿತ್ ನಡುವೆ ಏನೋ ಸರಿಯಿಲ್ಲ ಎನ್ನುತ್ತಿವೆ ಈ ನಿದರ್ಶನಗಳು!

ವಿಂಡೀಸ್‌ 'ಎ'ಯ ದ್ವಿತೀಯ ಇನ್ನಿಂಗ್ಸ್‌ ವೇಳೆ 47 ರನ್ನಿಗೆ ಶಹಬಾಝ್ ಬರೋಬ್ಬರಿ 5 ವಿಕೆಟ್, ಮೊಹಮ್ಮದ್ ಸಿರಾಜ್ 38 ರನ್ನಿಗೆ 3, ಶಿವಂ ದೂಬೆ 1 ವಿಕೆಟ್ ಉರುಳಿಸಿದ್ದರಿಂದ ಆತಿಥೇಯರು 77 ಓವರ್‌ಗಳಲ್ಲಿ 180 ರನ್ ಬಾರಿಸಿ ಆಲ್ ಔಟ್ ಆದಗಿದ್ದಾರೆ.

ಆಗಸ್ಟ್‌ 16ರಿಂದ ಕರ್ನಾಟಕ ಪ್ರೀಮಿಯರ್‌ ಲೀಗ್‌, ಫೈನಲ್‌ ಎಲ್ಲಿ ಗೊತ್ತಾ?ಆಗಸ್ಟ್‌ 16ರಿಂದ ಕರ್ನಾಟಕ ಪ್ರೀಮಿಯರ್‌ ಲೀಗ್‌, ಫೈನಲ್‌ ಎಲ್ಲಿ ಗೊತ್ತಾ?

ದ್ವಿತೀಯ ಮತ್ತು ಅಂತಿಮ ಇನ್ನಿಂಗ್ಸ್ ಆಡುತ್ತಿರುವ ಭಾರತ 'ಎ', ಶುಕ್ರವಾರ 3ನೇ ದಿನದಾಟದ ಅಂತ್ಯದ ವೇಳೆಗೆ 10.3ನೇ ಓವರ್‌ಗೆ 1 ವಿಕೆಟ್ ಕಳೆದು 29 ರನ್ ಗಳಿಸಿದೆ. ಗೆಲುವಿಗೆ ಕೇವಲ 68 ರನ್ ಬೇಕಿದೆ.

ವಿಂಡೀಸ್ ಮೊದಲ ಇನ್ನಿಂಗ್ಸ್

ವಿಂಡೀಸ್ ಮೊದಲ ಇನ್ನಿಂಗ್ಸ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ 'ಎ' ತಂಡ, ರೋಸ್ಟನ್ ಚೇಸ್ 25, ಜೆರ್ಮೈನ್ ಬ್ಲ್ಯಾಕ್‌ವುಡ್ 53 ರಹಕೀಮ್ ಕಾರ್ನ್‌ವಾಲ್ 59, ಜೋಮೆಲ್ ವಾರ್ರಿಕನ್ 21 ಗಮನಾರ್ಹ ರನ್ ಸೇರ್ಪಡೆಯೊಂದಿಗೆ 66.5 ಓವರ್‌ಗೆ 228 ರನ್ ಬಾರಿಸಿತ್ತು. ಈ ವೇಳೆ ಭಾರತದ ಶಹಬಾಝ್ 62 ರನ್ನಿಗೆ 5 ವಿಕೆಟ್ ಮುರಿದಿದ್ದರು.

ಸಾಹ, ದೂಬೆ ಸೊಗಸಾದ ಆಟ

ಸಾಹ, ದೂಬೆ ಸೊಗಸಾದ ಆಟ

ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್ಮನ್ ಪ್ರಿಯಾಂಕ್ ಪಾಂಚಲ್ 49, ಅಭಿಮನ್ಯು ಈಶ್ವರನ್ 28, ಶುಭ್‌ಮಾನ್‌ಗಿಲ್ 40, ನಾಯಕ ಹನುಮ ವಿಹಾರಿ 31, ವೃದ್ಧಿಮಾನ್ ಸಾಹ 66, ಶಿವಂ ದೂಬೆ 71 ರನ್ ಸೇರಿಸಿದ್ದರಿಂದ ಭಾರತ 104.3 ಓವರ್‌ನಲ್ಲಿ 312 ರನ್ ನೊಂದಿಗೆ 84 ರನ್ ಮುನ್ನಡೆ ಸಾಧಿಸಿತು.

ಶಮರ್ ಬ್ರೂಕ್ಸ್ ಅರ್ಧ ಶತಕ

ಶಮರ್ ಬ್ರೂಕ್ಸ್ ಅರ್ಧ ಶತಕ

ವೆಸ್ಟ್ ಇಂಡೀಸ್ 'ಎ' ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ವಿಭಾಗ ಇನ್ನೂ ಕೆಟ್ಟ ಆಟ ನೀಡಿತು. ಮಾಂಟ್ಸಿನ್ ಹಾಡ್ಜ್ 36, ಶಮರ್ ಬ್ರೂಕ್ಸ್ 53, ರೋಸ್ಟನ್ ಚೇಸ್ 32, ಜೆರ್ಮೈನ್ ಬ್ಲ್ಯಾಕ್‌ವುಡ್ 25 ರನ್ ಮಾತ್ರ ಗಣನೀಯವೆನಿಸಿತು. ವಿಂಡೀಸ್ 77 ಓವರ್‌ಗೆ 180 ರನ್ ಬಾರಿಸಿತು.

ಶಹಬಾಝ್ 10 ವಿಕೆಟ್ ಸಾಧನೆ

ಶಹಬಾಝ್ 10 ವಿಕೆಟ್ ಸಾಧನೆ

2018ರಲ್ಲೂ ಬೌಲಿಂಗ್ ಗಾಗಿ ದಾಖಲೆ ಬರೆದಿದ್ದ ಶಹಬಾಝ್ ನದೀಮ್ ಈ ಬಾರಿಯೂ ಒಟ್ಟು 109 ರನ್‌ಗೆ 10 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದಾರೆ. ನದೀಮ್ ಐಪಿಎಲ್‌ನಲ್ಲಿ ಸದ್ಯ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾರೆ. ಈ ಟೆಸ್ಟ್ ಪಂದ್ಯವನ್ನು ಭಾರತ ಬಹುತೇಕ ಗೆದ್ದುಕೊಳ್ಳುವುದರಲ್ಲಿದ್ದು, ಇನ್ನೆರಡು ಟೆಸ್ಟ್ ಪಂದ್ಯಗಳಿವೆ. 2ನೇ ಟೆಸ್ಟ್ ಜುಲೈ 31ರಿಂದ ಆರಂಭಗೊಳ್ಳಲಿದೆ.

Story first published: Saturday, July 27, 2019, 13:25 [IST]
Other articles published on Jul 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X