ರಿಷಭ್ ಪಂತ್‌ ಪೋಸ್ಟ್‌ಗೆ ತಿರುಗೇಟು ನೀಡಿದ ಊರ್ವಶಿ ರೌಟೇಲಾ: 'ಸಹೋದರ ಅಡ್ವಾಂಟೇಜ್ ತೆಗೆದುಕೊಳ್ಳಬೇಡ' ಎಂದ ಬಾಲಿವುಡ್ ನಟಿ

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸಖತ್‌ ಆಗಿಯೇ ಉತ್ತರ ನೀಡಿದ್ದಾರೆ. ಊರ್ವಶಿ ಸಂರ್ದಶವೊಂದರಲ್ಲಿ ಹೇಳಿಕೆಯನ್ನ ಉದ್ದೇಶಿಸಿ ರಿಷಭ್ ಪಂತ್ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಪೋಸ್ಟ್‌ ಮಾಡಿದ್ದರು. ಇದಕ್ಕ ಸಂಬಂಧಿಸಿದಂತೆ ಊರ್ವಶಿ ತಿರುಗೇಟು ನೀಡಿದ್ದಾರೆ.

ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರ "ಮೇರಾ ಪಿಚಾ ಛೋರೋ ಬೆಹೆನ್" ಗೆ ಪ್ರತಿಕ್ರಿಯಿಸಿರುವ ಊರ್ವಶಿ ರಿಷಭ್ ಪಂತ್‌ಗೆ ಚಿಕ್ಕ ಸಹೋದರ ಎಂದು ಕರೆಯುವುದರ ಜೊತೆಗೆ ರಕ್ಷಾಬಂಧನದ ಶುಭಾಶಯಗಳನ್ನ ಸಹ ತಿಳಿಸಿದ್ದು, ಸೈಲೆಂಟ್ ಆಗಿದ್ದೀನಿ ಎಂದು ಅಡ್ವಾಂಟೇಜ್ ತಗೆದುಕೊಳ್ಳದಿರಿ ಎಂದಿದ್ದಾರೆ.

ಹೋಟೆಲ್‌ನಲ್ಲಿ ಊರ್ವಶಿಗಾಗಿ ಸಾಕಷ್ಟು ಸಮಯ ಕಾದಿದ್ದ ರಿಷಭ್ ಪಂತ್!

ಹೋಟೆಲ್‌ನಲ್ಲಿ ಊರ್ವಶಿಗಾಗಿ ಸಾಕಷ್ಟು ಸಮಯ ಕಾದಿದ್ದ ರಿಷಭ್ ಪಂತ್!

ಬಾಲಿವುಡ್‌ನ ಉದಯೋನ್ಮುಖ ನಟಿ ಊರ್ವಶಿ ರೌಟೇಲಾ ಅವರು ಇತ್ತೀಚೆಗೆ ನೀಡಿರುವ ಟಿವಿ ಸಂದರ್ಶನವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡಿತು. ಇದರಲ್ಲಿ ಹೆಸರನ್ನು ಪೂರ್ಣವಾಗಿ ಘೋಷಿಸದೇ RP ಹೆಸರಿನ ವ್ಯಕ್ತಿ ನನಗಾಗಿ ಹೋಟೆಲ್‌ನಲ್ಲಿ ಸಾಕಷ್ಟು ಸಮಯ ಕಾದಿದ್ದರು ಎಂದು ಕಾಮೆಂಟ್ ಮಾಡಿದ್ದರು.

ಬಾಲಿವುಡ್ ಹಂಗಾಮಾ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಊರ್ವಶಿ ರೌಟೇಲಾ ಅವರು ಒಮ್ಮೆ ದೆಹಲಿಯಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಾಗ 10 ಗಂಟೆಗಳಿಗೂ ಹೆಚ್ಚು ಕಾಲ ಶೂಟಿಂಗ್ ನಡೆದಿತ್ತು. ಆದರೆ 'ಆರ್‌ಪಿ' ಅಕ್ಷರದಿಂದ ಹೆಸರು ಪ್ರಾರಂಭವಾಗುವ ಸೆಲೆಬ್ರಿಟಿಗಳು ಗಂಟೆಗಟ್ಟಲೆ ಹೋಟೆಲ್‌ನಲ್ಲಿ ನನಗಾಗಿ ಕಾಯುತ್ತಿದ್ದರು. ನನ್ನೊಂದಿಗೆ ಮಾತನಾಡಲು ಹರಸಾಹಸ ಪಟ್ಟಿದ್ದಾರೆ ಎಂದರು.

17ಕ್ಕೂ ಹೆಚ್ಚು ಮಿಸ್‌ ಕಾಲ್‌ ಕೊಟ್ಟಿದ್ದ ಪಂತ್

17ಕ್ಕೂ ಹೆಚ್ಚು ಮಿಸ್‌ ಕಾಲ್‌ ಕೊಟ್ಟಿದ್ದ ಪಂತ್

ರಿಷಭ್ ಪಂತ್ 17ಕ್ಕೂ ಹೆಚ್ಚು ಬಾರಿ ಊರ್ವಶಿ ರೌಟೇಲಾಗೆ ಕರೆ ಮಾಡಿದ್ದರು ಎಂಬುದು ತಿಳಿದುಬಂದಿದೆ. ಈ ಕುರಿತಾಗಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಊರ್ವಶಿ, ನಾನು ಯಾರಿಗೂ ಕಾಯಿಸಲು ಇಷ್ಟಪಡುವುದಿಲ್ಲ. ಆದ್ರೆ ನನ್ನ ಭೇಟಿಯಾಗಲು ಹೊಟೇಲ್ ಲಾಬಿಯಲ್ಲಿ ಗಂಟೆಗಟ್ಟಲೆ ಕಾದು ಕುಳಿತಿದ್ದ, ಆರ್.ಪಿ. ಯಿಂದ 16-17 ಫೋನ್ ಕರೆಗಳು ಬಂದಿದ್ದವು ಎಂದಿದ್ದಾರೆ.

ಆರ್‌ಪಿ ಎಂದು ಕರೆಯುವ ಸೆಲೆಬ್ರಿಟಿ ಭಾರತೀಯ ಕ್ರಿಕೆಟಿಗ ರಿಷಬ್ ಪಂತ್. 2018 ರಲ್ಲಿ, ರಿಷಬ್ ಪಂತ್ ಮತ್ತು ಊರ್ವಶಿ ಪ್ರೀತಿಸುತ್ತಿದ್ದಾರೆ ಎಂದು ವರದಿಯಾಗಿದೆ. ಮತ್ತು ಹಲವು ಬಾರಿ ಇಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಿಗೆ ನಡೆದಾಡುತ್ತಿರುವ ಫೋಟೋಗಳೂ ಪ್ರಕಟವಾಗಿವೆ. ಆದರೆ 2019ರಲ್ಲಿ ರಿಷಬ್ ಪಂತ್ ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದರು. ನಟಿ ಇಶಾ ನೇಗಿ ತನ್ನ ಗೆಳತಿ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡರು.

ಮತ್ತೊಂದೆಡೆ ಊರ್ವಶಿ ರೌಟೇಲಾ ಕೂಡ ನಾನು ಹಾಗೂ ರಿಷಭ್ ಪಂತ್ ಡೇಟಿಂಗ್ ಮಾಡುತ್ತಿಲ್ಲ, ಆ ತರಹದ ಯಾವುದೇ ಸಂಬಂಧಗಳಿಲ್ಲ ಎಂದಿದ್ದರು. ಕಾರ್ಯಕ್ರಮವೊಂದರಲ್ಲಿ ಎರಡು ಮೂರು ಸಲ ಒಟ್ಟಾಗಿ ಕಾಣಿಸಿಕೊಂಡಿದ್ದವು. ನಮ್ಮಿಬ್ಬರ ಡೇಟಿಂಗ್ ವಿಚಾರ ಸುಳ್ಳು ಎಂದು ಸ್ಪಷ್ಟಪಡಿಸಿದ್ದರು.

ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್‌ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!

ಊರ್ವಶಿ ಕುರಿತು ರಿಷಭ್ ಪಂತ್ ಪೋಸ್ಟ್ ಏನು?

ಊರ್ವಶಿ ಕುರಿತು ರಿಷಭ್ ಪಂತ್ ಪೋಸ್ಟ್ ಏನು?

ಭಾರತದ ಖ್ಯಾತ ಕ್ರಿಕೆಟಿಗ ಬಹಳ ಸಮಯ ಹೋಟೆಲ್‌ನಲ್ಲಿ ಕಾದು ನಟಿಯೊಂದಿಗೆ ಮಾತನಾಡಿದ್ದಾರಾ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಲೇವಡಿ ಮಾಡುವುದನ್ನ ಸಹಿಸಲಾಗದೆ ರಿಷಭ್ ಪಂತ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಊರ್ವಶಿ ಕುರಿತು ಕಿಡಿಕಾರಿದ್ದರು.

ಜನಪ್ರಿಯತೆ ಪಡೆಯಲು ಕೆಲವರು ಸಂದರ್ಶನದಲ್ಲಿ ಹೇಗೆ ಸುಳ್ಳು ಹೇಳುತ್ತಾರೆ ಎಂಬುದು ತಮಾಷೆಯಾಗಿದೆ. ಮತ್ತೊಂದೆಡೆ, ಯಾರಾದರೂ ಖ್ಯಾತಿಗಾಗಿ ಈ ರೀತಿ ಅಲೆದಾಡುವುದು ಬೇಸರದ ಸಂಗತಿ. ದೇವರು ಅವರಿಗೆ ಸರಿಯಾದ ದಾರಿ ತೋರಿಸಲಿ ಎಂದು ಪೋಸ್ಟ್ ಮಾಡಿದ್ದಾರೆ. ಜೊತೆಗೆ "ಮೇರಾ ಪಿಚಾ ಛೋರೋ ಬೆಹೆನ್" ಹ್ಯಾಶ್‌ಟ್ಯಾಗ್ ಮೂಲಕ ಪೋಸ್ಟ್‌ ಹಾಕಿದ್ರು.

ಪೋಸ್ಟ್ ಮಾಡಿದ 10 ನಿಮಿಷಗಳಲ್ಲಿ ರಿಷಬ್ ಪಂತ್ ಅದನ್ನು ಡಿಲೀಟ್ ಮಾಡಿದ್ದಾರೆ. ಆದರೆ, ಇದರ ಸ್ಕ್ರೀನ್‌ಶಾಟ್‌ ತೆಗೆದುಕೊಂಡ ಅಭಿಮಾನಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪಂತ್‌ಗೆ ಕುರಿತು ಚರ್ಚೆ ಮಾಡಿದ್ದರು.

CSA T20 League: ಪಾರ್ಲ್ ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್, ಡೇವಿಡ್ ಮಿಲ್ಲರ್ ಸೇರ್ಪಡೆ

ರಿಷಭ್ ಪಂತ್‌ ಪೋಸ್ಟ್‌ಗೆ ಊರ್ವಶಿ ಉತ್ತರ

ಏತನ್ಮಧ್ಯೆ, ರಿಷಭ್‌ ಟೀಕೆಗೆ ಊರ್ವಶಿ ಇನ್‌ಸ್ಟಾಗ್ರಾಮ್ ಪೋಸ್ಟ್‌ ಮೂಲಕವೇ ಉತ್ತರಿಸಿದ್ದು, ಅವರನ್ನು 'ಚೋಟು ಭಯ್ಯಾ' ಎಂದು ಹೈಲೈಟ್‌ ಮಾಡಿದ್ದಾರೆ. ಜೊತೆಗೆ ಆಕೆ ಪಂತ್‌ನನ್ನು 'ಕೂಗರ್ ಹಂಟರ್' ಎಂದು ಕರೆದಿದ್ದು, ಹುಡುಗಿ ಸೈಲೆಂಟ್ ಆಗಿದ್ದಾಳೆ ಎಂದು ಲಾಭವನ್ನ ಪಡೆಯಬಾರದು' ಎಂದು ಎಚ್ಚರಿಸಿದಳು.

ಆದ್ರೆ ಇಬ್ಬರ ನಡುವೆ ಏನೋ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಊರ್ವಶಿ ರೌಟೇಲಾ ರಿಷಬ್ ಪಂತ್‌ ಬಗ್ಗೆ ಆ ರೀತಿಯಾದ ಕಾಮೆಂಟ್ ಮಾಡಿದ್ದಾರೆ. ಭಾರತದ ಖ್ಯಾತ ಕ್ರಿಕೆಟಿಗ ಬಹಳ ಸಮಯ ಹೋಟೆಲ್‌ನಲ್ಲಿ ಕಾದು ನಟಿಯೊಂದಿಗೆ ಮಾತನಾಡಿರುವುದು ಹಾಗಿದ್ರೆ ನಿಜವೇ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಲೇವಡಿ ಮಾಡುತ್ತಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, August 13, 2022, 12:27 [IST]
Other articles published on Aug 13, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X