ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಆಸ್ಟ್ರೇಲಿಯಾದ ಗುತ್ತಿಗೆ ಕಳೆದುಕೊಂಡ ಖವಾಜ, ಸ್ಟೋನಿಸ್

Usman Khawaja and Marcus Stoinis lose Cricket Australia contracts

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಇಬ್ಬರು ಅನುಭವಿ ಕ್ರಿಕೆಟಿಗರು ಈ ಸಾಲಿನ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದಿದ್ದಾರೆ. 20 ಗುತ್ತಿಗೆ ಪಡೆದ ಆಟಗಾರರ ಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟ ಮಾಡಿದೆ. ಕೆಲ ಅನುಭವಿ ಆಟಗಾರರಿಗೆ ಕೊಕ್ ಸಿಕ್ಕಿದ್ದು ಯುವ ಆಟಗಾರರು ಅವಕಾಶವನ್ನು ಪಡೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ಅಗ್ರ ಕ್ರಮಾಂಕದ ಆಟಗಾರ ಉಸ್ಮಾನ್ ಖವಾಜ ಈ ಪಟ್ಟಿಯಿಂದ ಹೊರಬಿದ್ದಿರುವ ಪ್ರಮುಖ ಆಟಗಾರನಾಗಿದ್ದಾರೆ. 33 ವರ್ಷದ ಉಸ್ಮಾನ್ ಖವಾಜ ಕಳೆದ ಆಗಸ್ಟ್ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಬಳಿಕ ತಂಡಕ್ಕೆ ಆಯ್ಕೆಯಾಗಿರಲಿಲ್ಲ.

ಪಾಕ್‌ ಮಾಜಿ ಕ್ರಿಕೆಟರ್ ಶೋಯೆಬ್ ಅಖ್ತರ್ ವಿರುದ್ಧ ಮಾನನಷ್ಟ ಮೊಕದ್ದಮೆಪಾಕ್‌ ಮಾಜಿ ಕ್ರಿಕೆಟರ್ ಶೋಯೆಬ್ ಅಖ್ತರ್ ವಿರುದ್ಧ ಮಾನನಷ್ಟ ಮೊಕದ್ದಮೆ

ಈ ಬಾರಿಯ ಗುತ್ತಿಗೆಯಲ್ಲಿ ಖವಾಜ ಜೊತೆಗೆ ಸಹ ಬ್ಯಾಟ್ಸ್‌ಮನ್‌ಗಳಾದ ಪೀಟರ್ ಹ್ಯಾಂಡ್ಸ್‌ಕಾಂಬ್, ಮಾರ್ಕಸ್ ಹ್ಯಾರಿಸ್ , ಶಾನ್ ಮಾರ್ಷ್, ವೇಗದ ಬೌಲರ್ ನಾಥನ್ ಕೌಲ್ಟರ್-ನೈಲ್ ಮತ್ತು ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದಿರುವ ಇತರ ಆಟಗಾರರಾಗಿದ್ದಾರೆ.

ಈ ಆಟಗಾರ ಸ್ಥಾನಕ್ಕೆ ಹೊಸ ಆಟಗಾರರು ಗುತ್ತಿಗೆ ಪಟ್ಟಿಯಲ್ಲಿ ಅವಕಾಶವನ್ನು ಪಡೆದುಕೊಂಡಿದ್ದಾರೆ. ಮಾರ್ನಸ್ ಲಾಬುಶೈನ್, ಆಷ್ಟನ್ ಅಗರ್, ಜೋ ಬರ್ನ್ಸ್, ಮಿಚೆಲ್ ಮಾರ್ಷ್, ಕೇನ್ ರಿಚರ್ಡ್ಸನ್ ಮತ್ತು ಮ್ಯಾಥ್ಯೂ ವೇಡ್ ಹೊಸದಾಗಿ ಗುತ್ತಿಗೆ ಪಟ್ಟಿಗೆ ಸೇರ್ಪಡೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

33ನೇ ವರ್ಷಕ್ಕೆ ಕಾಲಿಟ್ಟ 3 ದ್ವಿಶತಕ ವೀರ: ರೋಹಿತ್ ಸಿಡಿಸಿದ ದ್ವಿಶತಕಗಳ ನೆನಪು33ನೇ ವರ್ಷಕ್ಕೆ ಕಾಲಿಟ್ಟ 3 ದ್ವಿಶತಕ ವೀರ: ರೋಹಿತ್ ಸಿಡಿಸಿದ ದ್ವಿಶತಕಗಳ ನೆನಪು

ಹೊಸ ಗುತ್ತಿಗೆ ಪಟ್ಟಿ ಹೀಗಿದೆ:
ಆಷ್ಟನ್ ಅಗರ್, ಜೋ ಬರ್ನ್ಸ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮ್ಮಿನ್ಸ್, ಆರನ್ ಫಿಂಚ್, ಜೋಶ್ ಹ್ಯಾಸಲ್‌ವುಡ್, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಪೈನ್, ಜೇಮ್ಸ್ ಪ್ಯಾಟಿನ್ಸನ್, ಝೇ ರಿಚರ್ಡ್‌ಸನ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್ , ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಜಂಪಾ

Story first published: Thursday, April 30, 2020, 18:15 [IST]
Other articles published on Apr 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X