ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಶಸ್ ಟೆಸ್ಟ್‌: ಎರಡೂ ಇನ್ನಿಂಗ್ಸ್‌ನಲ್ಲಿ ಸೆಂಚುರಿ ಸಿಡಿಸಿದ ಉಸ್ಮಾನ್ ಖವಾಜ, ಭರ್ಜರಿ ಕಂಬ್ಯಾಕ್

Usman Khawaza

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಆ್ಯಶಸ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜ ದಾಖಲೆ ಬರೆದಿದ್ದಾರೆ. ಟೆಸ್ಟ್ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ದಾಖಲಿಸುವ ಮೂಲಕ ಉಸ್ಮಾನ್ ಸಾಧಕರ ಪಟ್ಟಿ ಸೇರಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಶತಕದ ಸರದಾರ ಉಸ್ಮಾನ್ ಖವಾಜ 260 ಎಸೆತಗಳಲ್ಲಿ 137 ರನ್ ಕಲೆಹಾಕುವ ಮೂಲಕ ಕಂಬ್ಯಾಕ್ ಪಂದ್ಯದಲ್ಲಿ ಶತಕ ದಾಖಲಿಸಿದ್ರು. ಆದ್ರೀಗ ಎರಡನೇ ಇನ್ನಿಂಗ್ಸ್‌ನಲ್ಲೂ ತಂಡದ ಪರ ಭರ್ಜರಿ ಆಟವಾಡಿ ಅಜೇಯ 101ರನ್ ಕಲೆಹಾಕಿದ್ದಾರೆ. ಉಸ್ಮಾನ್ 2019ರಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಪರ ಆಡಿದ್ರು, ಆದ್ರೀಗ ಕಂಬ್ಯಾಕ್ ಪಂದ್ಯದಲ್ಲಿ ಅಮೋಘ ಆಟವಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಕೆಲವೇ ಕೆಲವು ಆಟಗಾರರಲ್ಲಿ ಉಸ್ಮಾನ್ ಖವಾಜ ಕೂಡ ಒಬ್ಬರು. ಕೋವಿಡ್ ಸೋಂಕಿನಿಂದಾಗಿ ಹೊರಗುಳಿದ ಟ್ರಾವಿಡ್ ಹೆಡ್ ಬದಲು ಸ್ಥಾನ ಪಡೆದ ಉಸ್ಮಾನ್ ಖವಾಜ ಸಿಕ್ಕ ಅವಕಾಶವನ್ನ ಎರಡೂ ಕೈನಲ್ಲಿ ಬಾಚಿಕೊಂಡಿದ್ದಾರೆ. ಎರಡೂ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ತನ್ನ ಆಯ್ಕೆಯನ್ನ ಸಮರ್ಥಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ 3ನೇ ಟೆಸ್ಟ್ ಪಂದ್ಯ ಆಡಿದ್ರೆ, ಈ ಮೂವರಲ್ಲಿ ಒಬ್ಬರಿಗೆ ಕೊಕ್!ವಿರಾಟ್ ಕೊಹ್ಲಿ 3ನೇ ಟೆಸ್ಟ್ ಪಂದ್ಯ ಆಡಿದ್ರೆ, ಈ ಮೂವರಲ್ಲಿ ಒಬ್ಬರಿಗೆ ಕೊಕ್!

ಅದ್ರಲ್ಲೂ 1950ರ ಬಳಿಕ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ನಾಲ್ಕನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಆ ಸಾಧಕರ ಹೆಸರುಗಳು ಈ ಕೆಳಗಿನಂತಿದೆ

ಸ್ಟೀವ್ ವ್ಹಾ, ಮ್ಯಾಂಚೆಸ್ಟರ್ (1997)
ಮ್ಯಾಥ್ಯೂ ಹೇಡನ್, ಬ್ರಿಸ್ಬೇನ್ (2002)
ಸ್ಟೀವ್ ಸ್ಮಿತ್, ಬರ್ಮಿಂಗ್‌ಹ್ಯಾಮ್ (2019
ಉಸ್ಮಾನ್ ಖವಾಜ, ಸಿಡ್ನಿ (2021)

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ 2 ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಆಟಗಾರರು
ಡೌಗ್ ವಾಲ್ಟರ್ಸ್
ರಿಕಿ ಪಾಂಟಿಂಗ್
ಉಸ್ಮಾನ್ ಖವಾಜ

ಈಗಾಗಲೇ ಸಿಡ್ನಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 387 ರನ್‌ಗಳ ಭಾರೀ ಲೀಡ್ ಪಡೆದಿದ್ದು, ಎರಡನೇ ಇನ್ನಿಂಗ್ಸ್‌ 5ವಿಕೆಟ್ ನಷ್ಟಕ್ಕೆ 265ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿದೆ. ಈ ಮೂಲಕ ಇಂಗ್ಲೆಂಡ್‌ಗೆ 388ರನ್‌ಗಳ ಗುರಿ ನೀಡಿದೆ.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 8 ವಿಕೆಟ್ ನಷ್ಟಕ್ಕೆ 416 ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ 294 ರನ್‌ಗಳಿಗೆ ಆಲೌಟ್ ಆಗುವ ಮೂಲಕ 122ರನ್‌ಗಳ ಹಿನ್ನಡೆ ಅನುಭವಿಸಿತ್ತು. ಇಂಗ್ಲೆಂಡ್ ಪರ 113 ರನ್ ಕಲೆಹಾಕಿದ ಜಾನಿ ಬೈಸ್ಟ್ರೋವ್ ಏಕಾಂಗಿ ಹೋರಾಟ ನಡೆಸಿದ್ರು. ಇದೀಗ ಖವಾಜ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ಬೃಹತ್ ಲೀಡ್ ಪಡೆಯಲು ಸಾಧ್ಯವಾಗಿದ್ದು, ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

ಈಗಾಗಲೇ ಐದು ಪಂದ್ಯ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 3-0 ಅಂತರದಲ್ಲಿ ಸರಣಿ ಜಯಿಸಿದ್ದು, ಪ್ರವಾಸಿ ಇಂಗ್ಲೆಂಡ್ ತಂಡವನ್ನ ವೈಟ್‌ ವಾಶ್ ಮಾಡು ಗುರಿ ಹೊಂದಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ XI: ಮಾರ್ಕಸ್ ಹ್ಯಾರಿಸ್, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಉಸ್ಮಾನ್ ಖವಾಜಾ, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಝೈ ರಿಚರ್ಡ್ಸನ್, ಮಿಚೆಲ್ ಸ್ವೆಪ್ಸನ್, ಮೈಕೆಲ್ ನೆಸರ್

Modi ಕೇವಲ 15 ನಿಮಿಷ ಕಾದಿದ್ದು ಆದ್ರೆ ರೈತರು ಕಷ್ಟ ಅನುಭವಿಸಿದ್ದು ಒಂದು ವರ್ಷ | Oneindia Kannada

ಇಂಗ್ಲೆಂಡ್ ತಂಡ ಪ್ಲೇಯಿಂಗ್ XI: ಹಸೀಬ್ ಹಮೀದ್, ಝಾಕ್ ಕ್ರಾಲಿ, ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋ, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮಾರ್ಕ್ ವುಡ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್ ಬೆಂಚ್: ರೋರಿ ಬರ್ನ್ಸ್, ಕ್ರಿಸ್ ವೋಕ್ಸ್, ಡೇನಿಯಲ್ ಲಾರೆನ್ಸ್

Story first published: Saturday, January 8, 2022, 12:16 [IST]
Other articles published on Jan 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X