ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಷಸ್‌: ಮೊದಲ ಟೆಸ್ಟ್‌ನಲ್ಲಿ ಆಸೀಸ್‌ ಪರ ಕಣಕ್ಕಿಳಿಯಲಿರುವ ಸ್ಟಾರ್ಸ್‌

Usman Khawaja Test

ಬರ್ಮಿಂಗ್‌ಹ್ಯಾಮ್‌, ಜುಲೈ 30: ಪ್ರವಾಸಿ ಆಸ್ಟ್ರೇಲಿಯಾ ತಂಡ ಇದೇ ಗುರುವಾರ ಆರಂಭವಾಗಲಿರುವ ಪ್ರತಿಷ್ಠಿತ ಆ್ಯಷಸ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ತನ್ನ ಸ್ಟಾರ್‌ ಆಟಗಾರರಾದ ಉಸ್ಮಾನ್‌ ಖವಾಜ ಮತ್ತು ಜೇಮ್ಸ್‌ ಪ್ಯಾಟಿನ್ಸನ್‌ ಅವರನ್ನು ಕಣಕ್ಕಿಳಿಸಲಿದೆ ಎಂದು ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಹೇಳಿದ್ದಾರೆ.

"ಉಸ್ಮಾನ್‌ ಖವಾಜ ಖಂಡಿತಾ ಆಡಲಿದ್ದಾರೆ. ಅವರು ಸಂಪೂರ್ಣ ಫಿಟ್‌ ಆಗಿದ್ದು ಪಂದ್ಯವನ್ನಾಡಲು ಸಂಪೂರ್ಣ ಸಜ್ಜಾಗಿದ್ದಾರೆ," ಎಂದು ಆಸ್ಟ್ರೇಲಿಯಾ ಕ್ರಿಕೆಟ್‌ ಸಂಸ್ಥೆಯ ವೆಬ್‌ಸೈಟ್‌ ಮೂಲಕ ಲ್ಯಾಂಗರ್‌ ತಿಳಿಸಿದ್ದಾರೆ.

ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದ ಟೀಮ್‌ ಇಂಡಿಯಾದ ಯಂಗ್‌ ಬ್ಯಾಟ್ಸ್‌ಮನ್‌ ಅಮಾನತುಡೋಪಿಂಗ್‌ನಲ್ಲಿ ಸಿಕ್ಕಿಬಿದ್ದ ಟೀಮ್‌ ಇಂಡಿಯಾದ ಯಂಗ್‌ ಬ್ಯಾಟ್ಸ್‌ಮನ್‌ ಅಮಾನತು

"ಉಸ್ಮಾನ್‌ ನಮ್ಮ ತಂಡದ ಅನುಭವಿ ಆಟಗಾರ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರ ಬ್ಯಾಟಿಂಗ್‌ ಸರಾಸರಿ 40ರಲ್ಲಿದೆ. ಅವರ ಸ್ನಾಯು ಸೆಳೆತದ ಸಮಸ್ಯೆ ಈಗ ಸರಿಹೋಗಿದೆ. ಉತ್ತಮವಾಗಿ ಓಡುತ್ತಿದ್ದಾರೆ. ಎಲ್ಲಾ ರೀತಿಯ ಫಿಟ್ನೆಸ್‌ ಪರೀಕ್ಷೆಗಳಲ್ಲಿ ಅವರು ಯಶಸ್ವಿಯಾಗಿ ಪಾಲ್ಗೊಂಡಿದ್ದಾರೆ. ಪಂದ್ಯವನ್ನಾಡಲು ಅವರು ಸಜ್ಜಾಗಿದ್ದು, 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲಿದ್ದಾರೆ," ಎಂದು ಲ್ಯಾಂಗರ್‌ ಹೇಳಿದ್ದಾರೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿ

ಇದೇ ವೇಳೆ ಅನುಭವಿ ವೇಗದ ಬೌಲರ್‌ ಹಾಗೂ ಟೆಸ್ಟ್‌ ತಂಡಕ್ಕೆ ಮರಳುವುದನ್ನು ಎದುರು ನೋಡುತ್ತಿರುವ ಜೇಮ್ಸ್‌ ಪ್ಯಾಟಿನ್ಸನ್‌ ಅವರ ಕುರಿತಾಗಿ ಮಾತನಾಡಿದ ಲ್ಯಾಂಗರ್‌, "ಇದು ನಿಜಕ್ಕೂ ಅದ್ಭುತ ಕಥೆ. ಯುವ ಬೌಲರ್‌ ಆಗಿ ಆಸ್ಟ್ರೇಲಿಯಾ -ಪರ ಆಡಿ ಬಳಿಕ ಬೆನ್ನಿನ ಶಸ್ತ್ರ ಚಿಕಿತ್ಸೆಗೆ ಒಳಪಟ್ಟರೂ, ಇದೀಗ ಮರಳಿ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದೊಂದು ಅದ್ಭುತ ಕಥೆ," ಎಂದಿದ್ದಾರೆ.

ಭಾರತೀಯ ವಧುವನ್ನು ವರಿಸಲಿರುವ ಪಾಕಿಸ್ತಾನದ ವೇಗದ ಬೌಲರ್‌ಭಾರತೀಯ ವಧುವನ್ನು ವರಿಸಲಿರುವ ಪಾಕಿಸ್ತಾನದ ವೇಗದ ಬೌಲರ್‌

ಆದರೆ, ತಂಡದ ಅನುಭವಿ ವೇಗದ ಬೌಲರ್‌ ಹಾಗೂ ಆಸೀಸ್‌ ಪ್ರಮುಖ ಅಸ್ತ್ರವಾಗಿರುವ ಮಿಚೆಲ್‌ ಸ್ಟಾರ್ಕ್‌ ಗಾಯದ ಸಮಸ್ಯೆ ಎದುರಿಸಿರುವ ಕಾರಣ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಆ್ಯಷಸ್‌ ಟೆಸ್ಟ್‌ ಸರಣಿಯೊಂದಿಗೆ ಐಸಿಸಿಯ ಮಹತ್ವಾಕಾಂಕ್ಷೀಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಕೂಡ ಆರಂಭವಾಗಲಿದೆ.

Story first published: Tuesday, July 30, 2019, 22:21 [IST]
Other articles published on Jul 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X