ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಕಲಿ ಭಯೋತ್ಪಾದಕ ಸಂಚು: ಉಸ್ಮಾನ್ ಖವಾಜ ಸಹೋದರ ಜೈಲು ಪಾಲು

Usman Khawajas Brother Sentenced For Framing A Fake Terror Plot

ಆಸ್ಟ್ರೇಲಿಯಾದ ಕ್ರಿಕೆಟಿಗ ಉಸ್ಮಾನ್ ಖವಾಜಾ ಅವರ ಹಿರಿಯ ಸಹೋದರನನ್ನು ನಕಲಿ ಭಯೋತ್ಪಾದಕ ಸಂಚು ರೂಪಿಸಿದ ಕೃತ್ಯಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಉಸ್ಮಾನ್ ಸಹೋದರ ಅರ್ಸಲಾನ್ ತಾರಿಕ್ ಖವಾಜಾ ತನ್ನ ಸಹೋದ್ಯೋಗಿ ವಿರುದ್ಧ ರೂಪಿಸಿದ್ದ ಸಂಚಿಗೆ ಸಂಬಂಧಪಟ್ಟಂತೆ ಗುರುವಾರ ಜೈಲು ಪಾಲಾಗಿದ್ದಾರೆ.

ಆತ ಆಗಸ್ಟ್ 2018 ರಲ್ಲಿ ತಮ್ಮ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಸಹೋದ್ಯೋಗಿ ಕಮರ್ ನಿಜಾಮ್ದೀನ್ ಅವರ ರೆಕಾರ್ಡ್ ಪುಸ್ತಕದಲ್ಲಿ ನಕಲಿ ದಾಖಲೆಗಳನ್ನು ರಚಿಸಿದ್ದಾರೆ. ಪರಸ್ಪರ ಗೊತ್ತಿದ್ದ ಹುಡುಗಿಯೊಂದಿಗೆ ಸಹೋದ್ಯೋಗಿ ಸಂಪರ್ಕ ಹೊಂದಿರುವುದಾಗಿ ಅಸೂಯೆ ಪಟ್ಟ ಕಾರಣ ಅವರು ಈ ಕಾರ್ಯಗಳನ್ನು ಮಾಡಿದರು.

ಬೆನ್ ಸ್ಟೋಕ್ಸ್ ಒಬ್ಬ ಕ್ಲಾಸ್ ಪ್ಲೇಯರ್: ಆರ್‌ಆರ್‌‌‌ ನಾಯಕ ಸ್ಟೀವ್ ಸ್ಮಿತ್ಬೆನ್ ಸ್ಟೋಕ್ಸ್ ಒಬ್ಬ ಕ್ಲಾಸ್ ಪ್ಲೇಯರ್: ಆರ್‌ಆರ್‌‌‌ ನಾಯಕ ಸ್ಟೀವ್ ಸ್ಮಿತ್

ಅರ್ಸಲಾನ್‌ನ ಸಂಚಿಗೆ ಬಲಿಯಾಗಿದ್ದ, ನಿಜಾಮ್ದೀನ್‌ನನ್ನು ಪೊಲೀಸರು ಬಂಧಿಸಿದ್ರು ಮತ್ತು ನಾಲ್ಕು ವಾರಗಳ ಕಾಲ ಜೈಲಿನಲ್ಲಿ ಇಡಲಾಗಿತ್ತು, ಏಕೆಂದರೆ ಆತನನ್ನು ಮಾಧ್ಯಮದಲ್ಲಿ ಭಯೋತ್ಪಾದಕನೆಂದು ಹಣೆಪಟ್ಟಿ ಕಟ್ಟಲಾಗಿತ್ತು.

ಪ್ರೀತಿಯ ಪೈಪೋಟಿಯಿಂದ 2017 ರಲ್ಲಿ ಹಿರಿಯ ಅಧಿಕಾರಿಗಳನ್ನು ಕರೆಸಿ ಅವಮಾನ ಮಾಡಿಸಿದ್ದ ಕೃತ್ಯವನ್ನೂ ಖವಾಜಾ ಒಪ್ಪಿಕೊಂಡಿದ್ದಾನೆ. ತನ್ನ ಸಹೋದ್ಯೋಗಿಯ ಮೇಲೆ ಅಸೂಯೆ ಪಟ್ಟು 40 ವರ್ಷದ ಅರ್ಸಲಾನ್ ತಾರಿಕ್ ಖವಾಜಾ ಈ ಕೃತ್ಯ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರನ್ನು ನ್ಯೂ ಸೌತ್ ವೇಲ್ಸ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ರಾಬರ್ಟ್ ವೆಬರ್ ಜೈಲಿಗೆ ಹಾಕಿದ್ದಾರೆ.

Usman khawaza brother

ಎರಡು ವರ್ಷ ಮತ್ತು ಆರು ತಿಂಗಳ ಪೆರೋಲ್ ರಹಿತ ಅವಧಿಯೊಂದಿಗೆ ನಾಲ್ಕು ವರ್ಷ ಮತ್ತು ಆರು ತಿಂಗಳ ಅವಧಿಗೆ ಅವರನ್ನು ಜೈಲಿಗೆ ಕಳುಹಿಸಲಾಗಿದೆ.

ಖವಾಜಾ ಕನಿಷ್ಠ ಒಂದು ನೋಟ್‌ಬುಕ್‌ನ 22 ಪುಟಗಳಲ್ಲಿ ಉದ್ದೇಶಪೂರ್ವಕವಾಗಿ ಭಯೋತ್ಪಾದಕ ಕೃತ್ಯದ ಕುರಿತು ವಿಶ್ವವಿದ್ಯಾಲಯದ ಸಿಬ್ಬಂದಿಗೆ ನೀಡಿದರು. ನೋಟ್ಬುಕ್‌ನಲ್ಲಿ ಅಂದಿನ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ಮತ್ತು ಗವರ್ನರ್ ಜನರಲ್ ವಿರುದ್ಧ ದಾಳಿ ನಡೆಸಿ ಹತ್ಯೆ ಮಾಡುವುದರ ಜೊತೆಗೆ ಮೆಲ್ಬೋರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಕ್ರಿಕೆಟ್ ಪಂದ್ಯದ ಜೊತೆಗೆ ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡುವ ಬಗ್ಗೆ ನೋಟ್‌ಬುಕ್‌ನಲ್ಲಿ ಬರೆಯಲಾಗಿತ್ತು. ಖವಾಜಾ ಅವರ 'ಕ್ಷಮಿಸಲಾಗದ' ಕ್ರಮಗಳು ನಿಜಾಮ್ದೀನ್ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ನ್ಯಾಯಾಧೀಶ ವೆಬರ್ ಸ್ಪಷ್ಟವಾಗಿ ಹೇಳಿದ್ದಾರೆ.

Story first published: Thursday, November 5, 2020, 19:07 [IST]
Other articles published on Nov 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X