ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚಾಹಲ್ ಬದಲಿಗೆ ಯುವ ಸ್ಪಿನ್ನರ್‌ನನ್ನು ಟಿ20 ವಿಶ್ವಕಪ್‌ನಲ್ಲಿ ಆಡಿಸಬೇಕು ಎಂದ ಮಾಜಿ ಕ್ರಿಕೆಟಿಗ

Varun Chakravarthy should be considered for the T20 World Cup

ಟಿ20 ವಿಶ್ವಕಪ್‌ಗೆ ಕೆಲವೇ ತಿಂಗಳು ಇರುವಾಗ ಟಿ20 ವಿಶ್ವಕಪ್‌ನ ತಂಡದ ಬಗ್ಗೆಯೂ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಹಾಲಿ ಕಾಮೆಂಟೇಟರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಟೀಮ್ ಇಂಡಿಯಾದ ಆಡುವ ಬಳಗದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲೂ ಭಾರತೀಯ ತಂಡದಲ್ಲಿ ಯಾವ ಸ್ಪಿನ್ನರ್‌ನ್ನು ವಿಶ್ವಕಪ್ ತಂಡದಲ್ಲಿ ಆಡಿಸಬೇಕು ಎಂಬ ಬಗ್ಗೆ ಹೇಳಿಕೆ ನೀಡಿದ್ದಾರೆ.

ಭಾರತ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಯುವ ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಹೆಚ್ಚಿನ ಅವಕಾಶವನ್ನು ನೀಡುವ ಮೂಲಕ ವಿಶ್ವಕಪ್ ಟೂರ್ನಿಗೆ ಬಳಸಿಕೊಳ್ಳಲು ಪ್ರಯತ್ನವನ್ನು ಮಾಡಬೇಕಿದೆ ಎಂದು ಲಕ್ಷ್ಮಣ್ ಶಿವರಾಮಕೃಷ್ಣನ್ ಹೇಳಿದ್ದಾರೆ. ಯುಜುವೇಂದ್ರ ಚಾಹಲ್ ಪ್ರದರ್ಶನ ಗಮನಾರ್ಹವಾಗಿಲ್ಲದ ಕಾರಣ ಈ ಸಾಧ್ಯತೆಯತ್ತ ಚಿತ್ತ ಹರಿಸಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ಗೆ ತೆರಳುವ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಸಂವಾದಟೋಕಿಯೋ ಒಲಿಂಪಿಕ್ಸ್‌ಗೆ ತೆರಳುವ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಸಂವಾದ

"ವರುಣ್ ಚಕ್ರವರ್ತಿ ಟಿ20 ವಿಶ್ವಕಪ್‌ನಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ. ಕಳೆದ ಕೆಲ ವರ್ಷಗಳಿಂದ ಯುಜವೇಂದ್ರ ಚಾಹಲ್ ಪರಿಣಾಮಕಾರಿಯಾಗಿಲ್ಲದಿರುವುದನ್ನು ನಾವು ಗಮನಿಸಿದ್ದೇವೆ. ಕುಲ್‌ದೀಪ್ ಯಾದವ್ ಸಂಪೂರ್ಣವಾಗಿ ಬದಿಗೆ ಸರಿದಿದ್ದಾರೆ. ಆತ ಕೆಕೆಆರ್‌ಗೆ ಕೂಡ ಆಡುತ್ತಿಲ್ಲ. ಹೀಗಾಗಿ ವರುಣ್ ಚಕ್ರವರ್ತಿಯನ್ನು ಬಳಸಿಕೊಳ್ಳಬೇಕು" ಎಂದು ಲಕ್ಷ್ಮಣ್ ಶಿವರಾಮಕೃಷ್ಣನ್ ಹೇಳಿದ್ದಾರೆ.

"ಶ್ರೀಲಂಕಾದಲಲ್ಇ ನೀವು ಆಡುತ್ತಿರುವಾಗ ಇಡೀ ಜಗತ್ತು ನಿಮ್ಮನ್ನು ಗಮನಿಸುತ್ತದೆ. ಇತರ ಸಾಂಪ್ರದಾಯಿಕ ಬೌಲರ್‌ಗಳಿಂದ ವರುಣ್ ಚಕ್ರವರ್ತಿ ಬೌಲರ್ ಉತ್ತಮ ಮತ್ತು ಸಂಪೂರ್ಣವಾಗಿ ಭಿನ್ನವಾಗಿದ್ದಾರೆ. ಅವರಿಗೆ ಕೆಲ ಅವಕಾಶವನ್ನು ನೀಡುವ ಮೂಲಕ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಾ ಕೆಲಸವನ್ನು ನೀವು ಮಾಡಬೇಕಿದೆ" ಎಂದಿದ್ದಾರೆ ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್.

ಮೊದಲ ಬಾರಿಗೆ ಬ್ಲೂ ಜೆರ್ಸಿ ತೊಡಲು ಉತ್ಸುಕನಾದ ಕನ್ನಡಿಗ | Oneindia Kannada

"ಗಾಯದ ಸಮಸ್ಯೆಯನ್ನು ಆತ ಎದುರಿಸಿದ್ದರು. ಹೀಗಾಘಿ ಫಿಟ್‌ನೆಸ್ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕಿದೆ. ಈ ಪ್ರವಾಸದಲ್ಲಿ ಅವರು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕಿದೆ. ಅವರು ಅದನ್ನು ಮಾಡಿದರೆ ತಂಡ ಬಯಸುವಂತಾ ಆಟಗಾರನಾಗಿ ಅವರು ಬೆಳೆಯುವ ಅವಕಾಶವವಿದೆ" ಎಂದಿದ್ದಾರೆ ಲಕ್ಷ್ಮಣ್ ಶಿವರಾಮ ಕೃಷ್ಣನ್.

Story first published: Wednesday, July 14, 2021, 23:58 [IST]
Other articles published on Jul 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X