ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್‌ ಇಂಡಿಯಾದ ಬೌಲಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ಕನ್ನಡಿಗ

Venkatesh Prasad 2019

ಮುಂಬೈ, ಆಗಸ್ಟ್‌ 01: ಟೀಮ್‌ ಇಂಡಿಯಾದ ವಿವಿಧ ಕೋಚ್‌ಗಳ ಹುದ್ದೆಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಈಗಾಗಲೇ ಅರ್ಜಿ ಆಹ್ವಾನಿಸಿದ್ದು, ಮುಖ್ಯ ಕೋಚ್‌, ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಹುದ್ದೆಗಳಿಗೆ ನೂರಾರು ಅರ್ಜಿಗಳು ಹರಿದು ಬಂದಿರುವುದಾಗಿ ವರದಿಯಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ ಭಾರತ ತಂಡದ ಮಾಜಿ ವೇಗದ ಬೌಲರ್‌ ಕನ್ನಡಿಗ ವೆಂಕಟೇಶ್‌ ಪ್ರಸಾದ್‌ ಕೂಡ ಬೌಲಿಂಗ್‌ ಕೋಚ್‌ ಹುದ್ದಗೆ ಅರ್ಜಿ ಸಲ್ಲಿಸಿದ್ದಾರೆ. ವೆಂಕಟೇಶ್‌ ಪ್ರಸಾದ್‌ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಬಲಿಷ್ಠ ತಂಡಗಳಿಗೆ ಬೌಲಿಂಗ್‌ ತರಬೇತಿ ನೀಡಿದ ಅನುಭವ ಹೊಂದಿದ್ದಾರೆ.

ಟ್ವಿಟರ್‌ ಮೂಲಕ ದೇಶ ಪ್ರೇಮದ ಸಂದೇಶ ಸಾರಿದ ರೋಹಿತ್‌ ಶರ್ಮಾಟ್ವಿಟರ್‌ ಮೂಲಕ ದೇಶ ಪ್ರೇಮದ ಸಂದೇಶ ಸಾರಿದ ರೋಹಿತ್‌ ಶರ್ಮಾ

ಭಾರತ ತಂಡದ ಪರ 90ರ ದಶಕದಲ್ಲಿ 33 ಟೆಸ್ಟ್‌ ಹಾಗೂ 162 ಒಡಿಐ ಪಂದ್ಯಗಳನ್ನು ಆಡಿರುವ ಪ್ರಸಾದ್‌, ರಾಷ್ಟ್ರೀಯ ಕಿರಿಯರ ತಂಡದ ಮುಖ್ಯ ಆಯ್ಕೆದಾರನಾಗಿಯೂ ಕಾರ್ಯ ನಿರ್ವಹಿಸಿದ್ದರು. ಕಳೆದ ವರ್ಷ ಈ ಹುದ್ದೆಯಿಂದ ಕೆಳಗಿಳಿದ ಬಳಿಕ ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಪರ 2018ರಲ್ಲಿ ಬೌಲಿಂಗ್‌ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದರು.

ಲಸಿತ್‌ ಮಾಲಿಂಗ ಸ್ಥಾನ ತುಂಬಲು ಬಂದ ಛೋಟಾ ಮಾಲಿಂಗ! ವಿಡಿಯೊಲಸಿತ್‌ ಮಾಲಿಂಗ ಸ್ಥಾನ ತುಂಬಲು ಬಂದ ಛೋಟಾ ಮಾಲಿಂಗ! ವಿಡಿಯೊ

ಅಂದಹಾಗೆ 49 ವರ್ಷದ ಮಾಜಿ ಕ್ರಿಕೆಟಿಗ ಈ ಹಿಂದೆಯೂ ಭಾರತ ತಂಡಕ್ಕೆ ಬೌಲಿಂಗ್‌ ತರಬೇತಿ ನೀಡಿದ್ದಾರೆ. 2007ರಿಂದ 2009ರ ಅವಧಿಯಲ್ಲಿ ಭಾರತ ತಂಡದ ಬೌಲಿಂಗ್‌ ತರಬೇತುದಾರರಾಗಿದ್ದರು. ಈ ಅವಧಿಯಲ್ಲಿ ಭಾರತ ತಂಡ 2007ರಲ್ಲಿ ಇಂಗ್ಲೆಂಡ್‌ ಪ್ರವಾಸದಲ್ಲಿ 1986ರ ಬಳಿಕ ಮೊತ್ತ ಮೊದಲ ಬಾರಿ 1-0 ಅಂತರದಲ್ಲಿ ಟೆಸ್ಟ್‌ ಸರಣಿ ಗೆದ್ದು ಬೀಗಿತ್ತು. ವೆಂಕಟೇಶ್‌ ಪ್ರಸಾದ್‌ ಬೌಲಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿರುವುದಾಗಿ ಖಾತ್ರಿ ಪಡಿಸಿದ್ದಾರೆ. ಆದರೆ, ಈ ವಿಚಾರವಾಗಿ ಹೆಚ್ಚಿನದ್ದೇನನ್ನೂ ಹೇಳಲು ಬಯಸುವುದಿಲ್ಲ ಎಂದು ಹೇಳಿರುವುದಾಗಿ ಟೈಮ್ಸ್‌ ಇಂಟರ್‌ನೆಟ್‌ ವರದಿ ಮಾಡಿದೆ.

ಐಪಿಎಲ್‌ 2020: ಮುಂಬೈ ಇಂಡಿಯನ್ಸ್‌ಗೆ ತೆಕ್ಕೆಗೆ ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ಐಪಿಎಲ್‌ 2020: ಮುಂಬೈ ಇಂಡಿಯನ್ಸ್‌ಗೆ ತೆಕ್ಕೆಗೆ ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌

ಭಾರತ ತಂಡದ ಮಾಜಿ ವೇಗದ ಬೌಲರ್‌ ಭರತ್‌ ಅರುಣ್‌ ಸಧ್ಯ ಟೀಮ್‌ ಇಂಡಿಯಾದ ಬೌಲಿಂಗ್‌ ಕೋಚ್‌ ಹುದ್ದೆಯಲ್ಲಿದ್ದು, ಪ್ರಸಕ್ತ ವೆಸ್ಟ್‌ ಇಂಡೀಸ್ ಪ್ರವಾಸದ ಬಳಿಕ ಅವರೊಟ್ಟಿಗಿನ ಒಪ್ಪಂದ ಅಂತ್ಯಗೊಳ್ಳಲಿದೆ. ಆಗಸ್ಟ್‌ 13ರ ಒಳಗಾಗಿ ವಿವಿಧ ಕೋಚ್‌ ಹುದ್ದೆಗಳಿಗೆ ಬಂದಿರುವ ಅರ್ಜಿಗಳನ್ನು ಪರಿಶೀಲಿಸಲಿದೆ.

ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐನ ಆಡಳಿತ ಸಮಿತಿ (ಸಿಒಎ) ನೂತನ ಕೋಚ್‌ ಆಯ್ಕೆ ಜವಾಬ್ದಾರಿಯನ್ನು ಭಾರತ ತಂಡದ ಮಾಜಿ ನಾಯಕ ಹಾಗೂ ಚೊಚ್ಚಲ ವಿಶ್ವಕಪ್‌ ಗೆದ್ದುಕೊಟ್ಟ ಕಪಿಲ್‌ ದೇವ್‌ ಅವರ ನೇತೃತ್ವದ ಕ್ರಿಕೆಟ್‌ ಸಲಹಾ ಸಮಿತಿಗೆ ಒಪ್ಪಿಸಿದೆ.

Story first published: Thursday, August 1, 2019, 14:19 [IST]
Other articles published on Aug 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X