ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ ವೇಣುಗೋಪಾಲ್ ರಾವ್

Venugopal Rao announces retirement from cricket

ನವದೆಹಲಿ, ಜುಲೈ 31: ಈಚಿನ ದಿನಗಳಲ್ಲಿ ಕ್ರಿಕೆಟ್‌ ರಂಗದಲ್ಲಿ ವೇಣುಗೋಪಾಲ್ ರಾವ್ ಹೆಸರು ಕೇಳಿಬಂದಿದ್ದೇ ಕಡಿಮೆ. ಆದರೆ ಸುಮಾರು ಐದು ವರ್ಷಗಳಿಗೂ ಹಿಂದೆ ಐಪಿಎಲ್‌ನಲ್ಲೂ ಬ್ಯಾಟ್‌ಬೀಸಿದ್ದ ವೇಣುಗೋಪಾಲ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಬುಧವಾರ (ಜುಲೈ 31) ನಿವೃತ್ತಿ ಘೋಷಿಸಿದ್ದಾರೆ.

ಭಾರತೀಯ ವಧುವನ್ನು ವರಿಸಲಿರುವ ಪಾಕಿಸ್ತಾನದ ವೇಗದ ಬೌಲರ್‌ಭಾರತೀಯ ವಧುವನ್ನು ವರಿಸಲಿರುವ ಪಾಕಿಸ್ತಾನದ ವೇಗದ ಬೌಲರ್‌

37ರ ಹರೆಯದ ವೇಣುಗೋಪಾಲ್ 16 ಏಕದಿನ ಕ್ರಿಕೆಟ್‌ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2006ರ ಮೇನಲ್ಲಿ ಸೇಂಟ್ ಕಿಟ್‌ನಲ್ಲಿ ರಾವ್, ವೆಸ್ಟ್ ಇಂಡೀಸ್ ವಿರುದ್ಧ ಕಡೆಯ ಏಕದಿನ ಪಂದ್ಯವನ್ನಾಡಿದ್ದರು. ಐದು ವರ್ಷಗಳಿಂದೀಚೆಗೆ ವೇಣುಗೋಪಾಲ್ ಯಾವುದೇ ಗಮನಾರ್ಹ ಕ್ರಿಕೆಟ್ ಪಂದ್ಯಗಳಲ್ಲಿ ಪಾಲ್ಗೊಂಡಿಲ್ಲ.

ಆಂಧ್ರಪ್ರದೇಶ ಮೂಲದ ವೇಣುಗೋಪಾಲ್ ರಾವ್, ಮೆನ್‌ಇನ್ ಬ್ಲೂ ಪರ 11 ಇನ್ನಿಂಗ್ಸ್‌ಗಳಲ್ಲಿ ಕೇವಲ 218 ರನ್ ಮಾತ್ರ ಗಳಿಸಿದ್ದಾರೆ. 2005ರ ಜುಲೈನಲ್ಲಿ ಶ್ರೀಲಂಕಾದ ಡಂಬುಲ್ಲಾದಲ್ಲಿ ಆತಿಥೇಯ ಲಂಕಾ ವಿರುದ್ಧ ರಾವ್ ಟೀಮ್ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದ್ದರು. ರಣಜಿಯಲ್ಲಿ ಆಂಧ್ರ ತಂಡದಲ್ಲಿ ಆಡಿದ್ದರು.

ಡೋಪಿಂಗ್‌ಗಾಗಿ ನಿಷೇಧಕ್ಕೊಳಗಾದ ಬಳಿಕ ಪ್ರತಿಕ್ರಿಯಿಸಿದ ಪೃಥ್ವಿ ಶಾಡೋಪಿಂಗ್‌ಗಾಗಿ ನಿಷೇಧಕ್ಕೊಳಗಾದ ಬಳಿಕ ಪ್ರತಿಕ್ರಿಯಿಸಿದ ಪೃಥ್ವಿ ಶಾ

ಏಕದಿನದಲ್ಲಿ ಅಂಥ ಸಾಧನೆ ಇಲ್ಲದಿದ್ದರೂ ರಾವ್, ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆ ಹೊಂದಿದ್ದಾರೆ. 121 ಪ್ರಥಮದರ್ಜೆ ಪಂದ್ಯಗಳಲ್ಲಿ ರಾವ್ 7,081 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 17 ಶತಕಗಳು ಮತ್ತು 30 ಅರ್ಧ ಶತಕಗಳು ಸೇರಿವೆ. ಅಲ್ಲದೆ 2008ರಿಂದ 2014ರ ವರೆಗೆ ವೇಣುಗೋಪಾಲ್ ಐಪಿಎಲ್‌ನಲ್ಲಿ ಡೆಕನ್ ಚಾರ್ಜರ್ಸ್, ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದರು.

Story first published: Wednesday, July 31, 2019, 15:14 [IST]
Other articles published on Jul 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X