ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದ.ಆಫ್ರಿಕಾ ವೇಗಿ ವೆರ್ನಾನ್ ಫಿಲಾಂಡರ್ ನಿವೃತ್ತಿ

Vernon Philander announces international retirement

ಕೇಪ್‌‌ಟೌನ್, ಡಿಸೆಂಬರ್ 23: ದಕ್ಷಿಣ ಆಫ್ರಿಕಾದ ವೇಗಿ ವೆರ್ನಾನ್ ಫಿಲಾಂಡರ್ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ದಿನಾಂಕ ನಿಗದಿಪಡಿಸಿದ್ದಾರೆ. ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಫಿಲಾಂಡರ್ ಅವರ ಕೊನೆಯ ಅಂತಾರಾಷ್ಟ್ರೀಯ ಸರಣಿಯಾಗಲಿದೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ರೋಹಿತ್ ಶರ್ಮಾ ಡೌಟ್!ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ರೋಹಿತ್ ಶರ್ಮಾ ಡೌಟ್!

ದಕ್ಷಿಣ ಆಫ್ರಿಕಾ ತಂಡದಲ್ಲಿದ್ದ ಮಾಜಿ ಆಟಗಾರರಾದ ಡೇಲ್ ಸ್ಟೇನ್ ಮತ್ತು ಮಾರ್ನೆ ಮಾರ್ಕೆಲ್‌ರಂತೆ ಫಿಲಾಂಡರ್ ಕೂಡ ಪ್ರಮುಖ ಆಟಗಾರರಾಗಿದ್ದರು. ಈಗ 34ರ ಹರೆಯದವರಾಗಿರುವ ವೆರ್ನಾನ್, ಸೋಮವಾರ (ಡಿಸೆಂಬರ್ 23) ತಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿರುವ ವಿಚಾರವನ್ನು ತಿಳಿಸಿದ್ದಾರೆ.

ಅಂತಿಮ ಪಂದ್ಯದಲ್ಲಿ ವಿಂಡೀಸ್ ಆರಂಭಿಕಕಾರ ಶಾಯ್ ಹೋಪ್ ದಾಖಲೆ!ಅಂತಿಮ ಪಂದ್ಯದಲ್ಲಿ ವಿಂಡೀಸ್ ಆರಂಭಿಕಕಾರ ಶಾಯ್ ಹೋಪ್ ದಾಖಲೆ!

ಫಿಲಾಂಡರ್ ದಕ್ಷಿಣ ಆಫ್ರಿಕಾ ತಂಡವನ್ನು ಮುಖ್ಯವಾಗಿ ಟೆಸ್ಟ್‌ನಲ್ಲಿ ಹೆಚ್ಚು ಕಾಲ ಪ್ರತಿನಿಧಿಸಿದ್ದಾರೆ. ಒಟ್ಟಿಗೆ 60 ಟೆಸ್ಟ್‌, 30 ಏಕದಿನ ಕ್ರಿಕೆಟ್ ಮತ್ತು 7 ಅಂತಾರಾಷ್ಟ್ರೀಯ ಟಿ20ಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಆಡಿದ್ದಾರೆ. ಒಟ್ಟಾರೆ 22.16ರ ಸರಾಸರಿಯಂತೆ 216 ವಿಕೆಟ್ ದಾಖಲೆ ಫಿಲಾಂಡರ್ ಹೆಸರಿನಲ್ಲಿದೆ. ಒಟ್ಟು 13 ಬಾರಿ 5 ವಿಕೆಟ್ ಪಡೆದ ದಾಖಲೆಯೂ ಇದರಲ್ಲಿ ಸೇರಿದೆ.

ಅಂತಿಮ ಪಂದ್ಯದಲ್ಲಿ ವಿಂಡೀಸ್ ಆರಂಭಿಕಕಾರ ಶಾಯ್ ಹೋಪ್ ದಾಖಲೆ!ಅಂತಿಮ ಪಂದ್ಯದಲ್ಲಿ ವಿಂಡೀಸ್ ಆರಂಭಿಕಕಾರ ಶಾಯ್ ಹೋಪ್ ದಾಖಲೆ!

'2020ರ ಜನವರಿಯಲ್ಲಿ ಮುಕ್ತಾಯಗೊಳ್ಳುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ವೆರ್ನಾನ್ ಫಿಲಾಂಡರ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ,' ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಧಿಕೃತ ಟ್ವಿಟರ್ ಖಾತೆ ಟ್ವೀಟ್ ಮಾಡಿದೆ.

Story first published: Monday, December 23, 2019, 22:31 [IST]
Other articles published on Dec 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X