ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ವಿರುದ್ಧ ಆಡೋದೇ ಅದೃಷ್ಟ: ವಿಲಿಯಮ್ಸನ್

very fortunate to play against Virat Kohli and Steve Smith: Kane Williamson

ವೆಲ್ಲಿಂಗ್ಟನ್: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ಟೆಸ್ಟ್‌ ಕ್ರಿಕೆಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್ ಕೆಳಗಿಳಿಸಿ ನಂ.1 ಸ್ಥಾನ ಅಲಂಕರಿಸಿರುವ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಕೊಹ್ಲಿ ಮತ್ತು ಸ್ಮಿತ್ ಅವರನ್ನು ಹೊಗಳಿದ್ದಾರೆ.

ಸಿಡ್ನಿ ಟೆಸ್ಟ್‌ನಲ್ಲಿ ಡೇವಿಡ್ ವಾರ್ನರ್ ಕಣಕ್ಕಿಳಿಯುವ ಬಗ್ಗೆ ಪ್ರತಿಕ್ರಿಯೆ ನೀಡಿದ ಗಿಲ್‌ಕ್ರಿಸ್ಟಸಿಡ್ನಿ ಟೆಸ್ಟ್‌ನಲ್ಲಿ ಡೇವಿಡ್ ವಾರ್ನರ್ ಕಣಕ್ಕಿಳಿಯುವ ಬಗ್ಗೆ ಪ್ರತಿಕ್ರಿಯೆ ನೀಡಿದ ಗಿಲ್‌ಕ್ರಿಸ್ಟ

ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಇಬ್ಬರೂ ಬೆಸ್ಟ್ ಬ್ಯಾಟ್ಸ್‌ಮನ್‌ಗಳು. ಅವರ ವಿರುದ್ಧ ಆಡೋದೇ ಅದೃಷ್ಟ. ತಾನು ತಂಡಕ್ಕೆ ನನ್ನ ಬೆಸ್ಟ್ ಪ್ರದರ್ಶನ ನೀಡಲು ಯತ್ನಿಸುತ್ತಿದ್ದೇನೆ ಅಷ್ಟೇ. ಅದು ರ್‍ಯಾಂಕಿಂಗ್‌ನಲ್ಲಿ ಪ್ರತಿಫಲಿಸುತ್ತಿದೆ ಎಂದು ಗುರುವಾರ (ಡಿಸೆಂಬರ್ 31) ವಿಲಿಯಮ್ಸನ್ ಹೇಳಿಕೊಂಡಿದ್ದಾರೆ.

ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ವಿಲಿಯಮ್ಸನ್ 129 ರನ್ ಬಾರಿಸಿದ್ದರು. ಹೀಗಾಗಿ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ವಿಲಿಯಮ್ಸನ್ ಸದ್ಯ ನಂ.1 ಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಕೊಹ್ಲಿ ಮತ್ತು ತೃತೀಯ ಸ್ಥಾನದಲ್ಲಿ ಸ್ಮಿತ್ ಇದ್ದಾರೆ.

ಅಜಿಂಕ್ಯ ರಹಾನೆ ನಾಯತ್ವದ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಗೆಲ್ಲಬೇಕು: ಶೋಯೆಬ್ ಅಖ್ತರ್ಅಜಿಂಕ್ಯ ರಹಾನೆ ನಾಯತ್ವದ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಗೆಲ್ಲಬೇಕು: ಶೋಯೆಬ್ ಅಖ್ತರ್

ಐಸಿಸಿ ಟ್ವಿಟರ್‌ನ ವಿಡಿಯೋದಲ್ಲಿ ಮಾತನಾಡಿರುವ ವಿಲಿಯಮ್ಸನ್, 'ತಂಡಕ್ಕಾಗಿ ನಮ್ಮಿಂದ ಸಾಧ್ಯವಾಗಿದ್ದನ್ನೆಲ್ಲ ಪ್ರಯತ್ನಿಸುವುದರಲ್ಲಿ ಇದೆಲ್ಲ ಇದೆ. ತಂಡಕ್ಕಾಗಿ ನೀವು ಸಾಧ್ಯವಾಗಿದ್ದನ್ನೆಲ್ಲಾ ನೀಡಲು ಪ್ರಯತ್ನಿಸಿದರೆ ಅದು ರ್‍ಯಾಂಕಿಂಗ್‌ನಲ್ಲಿ ಪ್ರತಿಫಲಿಸುತ್ತದೆ. ಅದು ನಿಜಕ್ಕೂ ಖುಷಿ ನೀಡುತ್ತಿದೆ,' ಎಂದಿದ್ದಾರೆ.

Story first published: Friday, January 1, 2021, 12:13 [IST]
Other articles published on Jan 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X