ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಈ ಐದು ದಾಖಲೆಯನ್ನು ಮುರಿಯುವುದು ತುಂಬಾ ಕಠಿಣ

Very Hard To Break 5 Records Held By Virat Kohli

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತೀ ಪಂದ್ಯದಲ್ಲೂ ಒಂದಲ್ಲಾ ಒಂದು ದಾಖಲೆಯನ್ನು ಬರೆಯುತ್ತಿದ್ದಾರೆ. ಬ್ಯಾಟಿಂಗ್‌ನಲ್ಲಿ ಎಲ್ಲಾ ಮಾದರಿಗಳಲ್ಲೂ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ವಿಶ್ವ ಕ್ರಿಕೆಟ್‌ನ ದಿಗ್ಗಜ ಆಟಗಾರರು ವಿರಾಟ್ ಕೊಹ್ಲಿಯ ಬ್ಯಾಟಿಂಗನ್ನು ಮುಕ್ತಕಂಠದಿಂದ ಹೊಗಳುತ್ತಿದ್ದಾರೆ.

ವಿರಾಟ್ ಕೊಹ್ಲಿ ದೊಡ್ಡ ದೊಡ್ಡ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯುತ್ತಾ ಮುಂದುವರಿಯುತ್ತಿದ್ದಾರೆ. ಈ ಮಧ್ಯೆ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಕೆಲ ದಾಖಲೆಗಳು ಮುರಿಯುವುದು ಅಸಾಧ್ಯವೇನೋ ಎನಿಸುವಂತಿದೆ. ದಾಖಲೆಗಳಿರುವುದೇ ಮುರಿಯುವುದಕ್ಕಾಗಿ ಎಂಬ ಮಾತಿದೆ. ಆದರೆ ಈ ದಾಖಲೆಗಳನ್ನು ಮುರಿಯುವುದು ಇತರ ಆಟಗಾರರ ಪಾಲಿಗೆ ಖಂಡಿತಾ ಸುಲಭ ಸವಾಲಲ್ಲ.

ರೋಹಿತ್‌ಗೆ ಟಿ20 ನಾಯಕನ ಪಟ್ಟ ಕೂಗು: ಈಗ ಬೇಡ ಎಂದ ಚೇತನ್ ಶರ್ಮಾರೋಹಿತ್‌ಗೆ ಟಿ20 ನಾಯಕನ ಪಟ್ಟ ಕೂಗು: ಈಗ ಬೇಡ ಎಂದ ಚೇತನ್ ಶರ್ಮಾ

ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಐದು ಮುರಿಯಲು ಅಸಾಧ್ಯವೆನಿಸುವ ದಾಖಲೆಗಳು ಯಾವುದು ಮುಂದೆ ಓದಿ..

ಟಿ20 ಯಲ್ಲಿ

ಟಿ20 ಯಲ್ಲಿ "0" ಎಸೆತಕ್ಕೆ ವಿಕೆಟ್ ಪಡೆದ ಏಕೈಕ ಬೌಲರ್

ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಅಚ್ಚರಿಯ ದಾಖಲೆಯಿದು. 0 ಎಸೆತಕ್ಕೆ ವಿರಾಟ್ ಕೊಹ್ಲಿ ವಿಕೆಟ್ ಪಡೆದಿದ್ದರು. 2011ರಲ್ಲಿ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೆವಿನ್ ಪೀಟರ್ಸನ್ ಅವರನ್ನು ಸೊನ್ನೆ ಎಸೆತಕ್ಕೆ ಔಟ್ ಮಾಡಿದ್ದಾರೆ. ಆ ಪಂದ್ಯದಲ್ಲಿ ನಾಯಕ ಧೋನಿ ಬೌಲಿಂಗ್ ಮಾಡಲು ವಿರಾಟ್ ಕೊಹ್ಲಿಗೆ ಸೂಚಿಸುತ್ತಾರೆ. ಹೀಗೆ ಮೊದಲ ಎಸೆತವನ್ನು ಬೌಲ್ ಮಾಡಿದ ಕೋಹ್ಲಿ ಚೆಂಡನ್ನು ಲೆಗ್‌ಸ್ಟಂಪ್‌ನ ಆಚೆ ವೈಡ್‌ಗೆ ಎಸೆಯುತ್ತಾರೆ. ಆದರೆ ಈ ಚೆಂಡನ್ನು ಮುನ್ನುಗ್ಗಿ ಬಾರಿಸಲು ಪ್ರಯತ್ನಿಸಿದ ಪೀಟರ್ಸನ್ ಕ್ರೀಸ್ ಬಿಟ್ಟಿದ್ದರು. ಸ್ಟಂಪ್ ಎಗರಿಸಿದ ಧೋನಿ ಔಟ್ ಮಾಡಿದರು. ಹೀಗೆ ತಾಂತ್ರಿಕವಾಗಿ ಬೌಲ್ ಮಾಡದೆಯೇ ವಿರಾಟ್ ಕೊಹ್ಲಿ ವಿಕೆಟ್ ಪಡೆದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಐಪಿಎಲ್ ಒಂದು ಆವೃತ್ತಿಯಲ್ಲಿ 973 ರನ್

ಐಪಿಎಲ್ ಒಂದು ಆವೃತ್ತಿಯಲ್ಲಿ 973 ರನ್

ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ನಾಯಕನಾಗಿ ಯಶಸ್ಸನ್ನು ಗಳಿಸಲು ಸಾಧ್ಯವಾಗದಿರಬಹುದು, ಆದರೆ ಬ್ಯಾಟಿಂಗ್‌ನಲ್ಲಿ ತಮ್ಮ ಅಬ್ಬರವನ್ನು ಮುಂದುವರಿಸಿದ್ದಾರೆ. ಪ್ರತೀ ವರ್ಷವೂ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನವನ್ನು ನಿಡುವ ವಿರಾಟ್ ಕೊಹ್ಲಿ ಪಾಲಿಗೆ 2016ರ ಆವೃತ್ತಿ ಮತ್ತ‍ಷ್ಟು ವಿಶೇಷವಾಗಿತ್ತು. ಆ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಬರೊಬ್ಬರಿ 973 ರನ್ ಗಳಿಸಿದ್ದರು. 81.08ರಷ್ಟು ಅದ್ಭುತ ಸರಾಸರಿಯನ್ನು ಹೊಂದಿದ್ದರು. ಅದಾದ ಬಳಿಕ ಈವರೆಗೂ 900ರ ಗಡಿಯನ್ನು ಯಾವ ಬ್ಯಾಟ್ಸ್‌ಮನ್‌ನಿಂದಲೂ ತಲುಪಲು ಸಾಧ್ಯವಾಗಲಿಲ್ಲ.

ಏಕದಿನ ರನ್‌ಚೇಸಿಂಗ್‌ನಲ್ಲಿ ಅತಿ ಹೆಚ್ಚು ಶತಕ

ಏಕದಿನ ರನ್‌ಚೇಸಿಂಗ್‌ನಲ್ಲಿ ಅತಿ ಹೆಚ್ಚು ಶತಕ

ವಿರಾಟ್ ಕೊಹ್ಲಿಯನ್ನು ಚೇಸಿಂಗ್ ಮಾಸ್ಟರ್ ಎಂದೇ ಕರೆಯಲಾಗುತ್ತದೆ. ರನ್ ಬೆನ್ನತ್ತುವ ಸಂದರ್ಭದಲ್ಲಿ ವಿರಾಟ್ ತಮ್ಮ ಶ್ರೇಷ್ಠ ಆಟವನ್ನು ಪ್ರದರ್ಶಿಸುತ್ತಾರೆ. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಈವರೆಗೂ 43 ಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ ಬರೊಬ್ಬರಿ 26 ಶತಕಗಳು ರನ್ ಬೆನ್ನಟ್ಟುವ ಸಂದರ್ಭದಲ್ಲೇ ಬಂದಿದೆ. ಇದು ಕ್ರಿಕೆಟ್ ಇತಿಹಾಸದಲ್ಲಿನ ದಾಖಲೆಯಾಗಿದೆ. ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ಹೊಂದಿರುವ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಹೊಂದಿದ್ದು ಎರಡನೇ ಇನ್ನಿಂಗ್ಸ್‌ನಲ್ಲಿ ಸಚಿನ್ ಸಿಡಿಸದ ಶತಕಗಳ ಸಂಖ್ಯೆ 17.

ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ 10,000 ರನ್

ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ 10,000 ರನ್

ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಮತ್ತೊಂದು ಅಸಾಧಾರಣ ದಾಖಲೆಯೆಂದರೆ ಅತಿ ವೇಗವಾಗಿ 10 ಸಾವಿರ ರನ್‌ಗಳ ಗಡಿದಾಟಿರುವುದು. ಈ ಬೃಹತ್ ಮೈಲಿಗಲ್ಲಿ ತಲುಪಲು ಸಚಿನ್ ತೆಂಡೂಲ್ಕರ್ 259 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ಆದರೆ ವಿರಾಟ್ ಕೊಹ್ಲಿ 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ 205ನೇ ಇನ್ನಿಂಗ್ಸ್‌ನಲ್ಲಿ ಈ ದಾಖಲೆಯನ್ನು ಮಾಡಿದರು. ವಿರಾಟ್ ಹೆಸರಿನಲ್ಲಿ ಈಗ 8000, 9000 ಮತ್ತು 11,000 ರನ್‌ಗಳ ಗಡಿಯನ್ನು ಕಡಿಮೆ ಇನ್ನಿಂಗ್ಸ್‌ನಲ್ಲಿ ಸಾಧಿಸಿದ ದಾಖಲೆಯೂ ಇದೆ.

ನಾಯಕನಾಗಿ ಟೆಸ್ಟ್‌ನಲ್ಲಿ 7 ದ್ವಿಶತಕ

ನಾಯಕನಾಗಿ ಟೆಸ್ಟ್‌ನಲ್ಲಿ 7 ದ್ವಿಶತಕ

ಈ ದಾಖಲೆಯನ್ನು ಮುರಿಯುವುದು ಕೂಡ ಇತರೆ ಆಟಗಾರರಿಗೆ ಸುಲಭ ಸಾಧ್ಯವಿಲ್ಲ. ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಳ್ಳುವವರೆಗೆ ವಿರಾಟ್ ಕೊಹ್ಲಿ ಹೆಸರಿನಲ್ಲಿ ಒಂದೂ ಟೆಸ್ಟ್ ದ್ವಿಶತಕಗಳು ಇರಲಿಲ್ಲ. ಆದರೆ ಅದಾದ ಬಳಿಕ ಕೊಹ್ಲಿ ಬರೊಬ್ಬರಿ 7 ದ್ವಿಶತಕಗಳನ್ನು ದಾಖಲಿಸಿದ್ದಾರೆ. ಭಾರತದ ಯಾವ ಕ್ರಿಕೆಟಿಗನೂ ಇಷ್ಟು ದ್ವಿಶತಕಗಳನ್ನು ದಾಖಲಿಸಿಲ್ಲ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಈ ಸಾಧನೆ ಯಾರಿಂದಲೂ ಸಾಧ್ಯವಾಗಿಲ್ಲ. ವೆಸ್ಟ್ ಇಂಡೀಸ್‌ನ ದಿಗ್ಗಜ ಮಾಜಿ ನಾಯಕ ಬ್ರ್ಯಾನ್ ಲಾರಾ ಹೆಸರಿನಲ್ಲಿ ಐದು ದ್ವಿಶತಕಗಳಿವೆ. ಹೀಗಾಗಿ ಇದೂ ಕೂಡ ಇತರ ಆಟಗಾರರ ಪಾಲಿಗೆ ಮುರಿಯಲು ಅಸಾಧ್ಯವಾಗಿರುವ ದಾಖಲೆಯಾಗಿಯೇ ಉಳಿಯುವ ಸಾಧ್ಯತೆಗಳಿವೆ.

Story first published: Monday, June 1, 2020, 16:59 [IST]
Other articles published on Jun 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X