ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಸರಣಿಯ ವೇಳೆ ವಿರಾಟ್ ತಂಟೆಗೆ ಹೋಗಲಾರೆ ಎಂದ ಆಸಿಸ್ ಆಟಗಾರ!

Very Positive About Playing In Ipl: David Warner

ಕೊರೊನಾ ವೈರಸ್ ಕಾರಣದಿಂದಾಗಿ ವಿಶ್ವಕಪ್ ಮುಂದೂಡಿದರೆ ಖಂಡಿತವಾಗಿಯೂ ಐಪಿಎಲ್‌ನಲ್ಲಿ ಆಡಲು ಸಿದ್ದ ಎಂದು ಆಸ್ಟ್ರೇಲಿಯಾದ ಸ್ಪೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹೇಳಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ 16 ತಂಡಗಳನ್ನು ಕರೆಸಿ ವಿಶ್ವಕಪ್ ನಡೆಸುವುದು ಸದ್ಯದ ಮಟ್ಟಿಗೆ ಅಸಾಧ್ಯ ಎಂದು ಹೇಳಿದ್ದರು.

ಇದೇ ಸಂದರ್ಭದಲ್ಲಿ ಭಾರತದ ವಿರುದ್ಧದ ಸರಣಿಯ ಬಗ್ಗೆಯೂ ಕೆಲ ಕುತೂಹಲಕಾರಿ ಮಾತುಗಳನ್ನು ಆಸ್ಟ್ರೇಲಿಯಾದ ಸ್ಪೋಟಕ ಆಟಗಾರ ಡೇವಿಡ್ ವಾರ್ನರ್ ಹೇಳಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾ ನಾಯಕನನ್ನು ಯಾವ ಕಾರಣಕ್ಕೂ ಪ್ರಚೋದಿಸಲು ಹೋಗಲಾರೆ ಎಂದು ವಾರ್ನರ್ ಹೇಳಿದ್ದಾರೆ.

1996ರಲ್ಲೇ ಗವಾಸ್ಕರ್ ಭವಿಷ್ಯ: ಸಚಿನ್ 'ಅಂದು' ಮತ್ತು 'ಇಂದಿನ' ಪ್ರತಿಕ್ರಿಯೆ ಹೇಗಿದೆ ನೋಡಿ!1996ರಲ್ಲೇ ಗವಾಸ್ಕರ್ ಭವಿಷ್ಯ: ಸಚಿನ್ 'ಅಂದು' ಮತ್ತು 'ಇಂದಿನ' ಪ್ರತಿಕ್ರಿಯೆ ಹೇಗಿದೆ ನೋಡಿ!

ಐಪಿಎಲ್‌ಅನ್ನು ಪ್ರೀತಿಸುತ್ತೇವೆ

ಐಪಿಎಲ್‌ಅನ್ನು ಪ್ರೀತಿಸುತ್ತೇವೆ

ಟಿ20 ವಿಶ್ವಕಪ್‌ ನಡೆಯದಿದ್ದರೆ ಆ ಸಂದರ್ಭದಲ್ಲಿ ಐಪಿಎಲ್ ನಡೆಯಲು ಅವಕಾಶ ದೊರೆಯಬಹುದು. ಹಾಗಾದಾಗ ಐಪಿಎಲ್‌ನಲ್ಲಿ ಆಡಲು ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ನೀಡಿದರೆ ನಾವು ಐಪಿಎಲ್‌ನಲ್ಲಿ ಆಡಲು ಉತ್ಸುಕರಾಗಿದ್ದೇವೆ. ಯಾಕೆಂದರೆ ನಾವು ಅದನ್ನು ಪ್ರೀತಿಸುತ್ತೇವೆ ಎಂದು ವಾರ್ನರ್ ಹೇಳಿದ್ದಾರೆ.

ಐಸಿಸಿ ನಿರ್ಧಾರಕ್ಕೆ ಕಾಯುತ್ತಿದ್ದೇವೆ

ಐಸಿಸಿ ನಿರ್ಧಾರಕ್ಕೆ ಕಾಯುತ್ತಿದ್ದೇವೆ

ಆಡುವ ತಂಡಗಳ ಸಂಖ್ಯೆಯನ್ನು ಗಮನಿಸಿದಾಗ ಟಿ20 ವಿಶ್ವಕಪ್ ಆಯೋಜನೆ ಮಾಡುವುದು ಕಠಿಣ ಸವಾಲು ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ. ಈ ವಿಚಾರವಾಗಿ ಎಲ್ಲರೂ ಕೂಡ ಐಸಿಸಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಕಾಯುತ್ತಿದ್ದಾರೆ ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.

ಆಸಿಸ್‌ನ ಹೆಚ್ಚಿನ ಆಟಗಾರರು ಪಾಳ್ಗೊಳ್ಳಲಿದ್ದಾರೆ

ಆಸಿಸ್‌ನ ಹೆಚ್ಚಿನ ಆಟಗಾರರು ಪಾಳ್ಗೊಳ್ಳಲಿದ್ದಾರೆ

ಟಿ20 ವಿಶ್ವಕಪ್ ಮತ್ತು ಏಷ್ಯಾ ಕಪ್ ಮುಂದೂಡಲ್ಪಟ್ಟರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಐಪಿಎಲ್‌ನಲ್ಲಿ ಆಸ್ಟ್ರೇಲಿಯಾದ ಹೆಚ್ಚಿನ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ವಾರ್ನರ್ ಹೇಳಿದ್ದಾರೆ. ಐಪಿಎಲ್‌ಗೆ ಆಯ್ಕೆಯಾಗಿರುವ ಎಲ್ಲಾ ಆಟಗಾರರು ಸರ್ಕಾರದಿಂದ ಅನುಮತಿ ದೊರೆತ ನಂತರ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿದ್ದಾರೆ ಎಂದಿದ್ದಾರೆ.

ಕೊಹ್ಲಿಯನ್ನು ಪ್ರಚೋದಿಸಲಾರೆ

ಕೊಹ್ಲಿಯನ್ನು ಪ್ರಚೋದಿಸಲಾರೆ

ಇದೇ ಸಂದರ್ಭದಲ್ಲಿ ಮುಂದಿನ ಭಾರತದ ವಿರುದ್ಧದ ಸರಣಿಯ ಬಗ್ಗೆಯೂ ಮಾತನಾಡಿದ ವಾರ್ನರ್, ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ಈ ಸರಣಿಯಲ್ಲಿ ಪ್ರಚೋದಿಸುವುದಿಲ್ಲ ಎಂದಿದ್ದಾರೆ. ಈ ಹಿಂದಿನ 2018-19ರ ಭಾರತ ಪ್ರವಾಸದ ಸಂದರ್ಭದಲ್ಲಿ ಡೇವಿಡ್ ವಾರ್ನರ್ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಲುಕಿ ನಿಶೇಧಕ್ಕೆ ಒಳಗಾಗಿದ್ದ ಕಾರಣ ಪಾಲ್ಗೊಂಡಿರಲಿಲ್ಲ

ಭಾರತದ ಅಭಿಮಾನಿಗಳು ಕಾಯುತ್ತಿದ್ದಾರೆ

ಭಾರತದ ಅಭಿಮಾನಿಗಳು ಕಾಯುತ್ತಿದ್ದಾರೆ

ಭಾರತ ಅತ್ಯುತ್ತಮ ಬ್ಯಾಟಿಂಗ್ ಲೈನ್‌ಅಪ್ ಹೊಂದಿದೆ. ನಮ್ಮ ತಂಡದ ಬೌಲರ್‌ಗಳು ಅವರನ್ನು ಗುರಿಯಾಗಿಸಿ ಕಾಯುತ್ತಿದ್ದಾರೆ. ಈ ಹೋರಾಟವನ್ನು ನೋಡಲು ಭಾರತದ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.

Story first published: Monday, June 22, 2020, 9:51 [IST]
Other articles published on Jun 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X