ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಡೇ-ನೈಟ್ ಪಂದ್ಯದ ಮೊದಲ ದಿನದ ವಿಶೇಷ ಕ್ಷಣಗಳು

ಭಾರತ ಬಾಂಗ್ಲಾದೇಶ ನಡುವೆ ಐತಿಹಾಸಿಕ ಪಂದ್ಯ ನಡೆಯುತ್ತಿದೆ. ಈ ಐತಿಹಾಸಿಕ ಪಂದ್ಯ ಭಾರತೀಯ ಕ್ರಿಕೆಟ್‌ನ ಮೈಲಿಗಲ್ಲು ಎಂದೇ ವಿಶ್ಲೇಶಿಸಲಾಗುತ್ತಿದೆ. ಇಂತಾ ಕ್ಷಣವನ್ನು ಕಣ್ತುಂಬಿಕೊಳ್ಳಲು ಇವರತ್ತು ಈಡನ್ ಗಾರ್ಡನ್ ತುಂಬೆಲ್ಲಾ ಕ್ರಿಕೆಟ್ ಅಭಿಮಾನಿಗಳು ನೆರೆದಿದ್ದಾರೆ. ಯಾವಾಗಲು ಟೆಸ್ಟ್‌ ಕ್ರಿಕೆಟ್‌ಗೆ ಸ್ಟೇಡಿಯಮ್ ಖಾಲಿಹೊಡೆಯುತ್ತಿದ್ದರೆ ಈ ಪಂದ್ಯಕ್ಕೆ ಮಾತ್ರ ಪ್ರೇಕ್ಷಕರು ತುಂಬಿ ತುಳುಕುತ್ತಿದ್ದಾರೆ.

ಈ ವಿಶೇಷ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕೇವಲ ಕೋಲ್ಕತ್ತಾದ ಅಭಿಮಾನಿಗಳು ಮಾತ್ರ ಸೇರಿಲ್ಲ. ಭಾರತದ ಎಲ್ಲಾ ಭಾಗಗಳಿಂದ ಸೇರಿದಂತೆ ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳು ಅಂಗಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು.

ಡೇ-ನೈಟ್‌ ಟೆಸ್ಟ್: ಕೀಪಿಂಗ್ ದಾಖಲೆ ನಿರ್ಮಿಸಿದ ಭಾರತದ ವೃದ್ಧಿಮಾನ್ ಸಹಾಡೇ-ನೈಟ್‌ ಟೆಸ್ಟ್: ಕೀಪಿಂಗ್ ದಾಖಲೆ ನಿರ್ಮಿಸಿದ ಭಾರತದ ವೃದ್ಧಿಮಾನ್ ಸಹಾ

ಭಾರತೀಯ ಕ್ರಿಕೆಟ್‌ನ ದಿಗ್ಗಜರೆಲ್ಲಾ ಈ ವಿಶೇಷ ಸಂದರ್ಭದಲ್ಲಿ ಹಾಜರಿದ್ದರು. ಇನ್ನು ಬಾಂಗ್ಲಾದೇಶದ ಪ್ರದಾನಮಂತ್ರಿ ಶೇಖ್ ಹಸೀನಾ ಪ್ರಾರಂಭದಲ್ಲೇ ಅಂಗಳಕ್ಕೆ ಆಗಮಿಸಿ ಆಟಗಾರರಿಗೆ ಶುಭಹಾರೈಸಿದ್ದಾರೆ. ಹಾಗಿದ್ದರೆ ಈ ವಿಶೇಷ ದಿನದಲ್ಲಿ ಏನೆಲ್ಲಾ ವಿಶೇಷತೆಗಳಿತ್ತು ಅನ್ನೋದನ್ನು ಗಮನಿಸಿಕೊಂಡು ಬರೋಣ:

ಭಾರತೀಯ ಕ್ರಿಕೆಟ್ ದಿಗ್ಗಜರ ಸಮಾಗಮ:

ಭಾರತೀಯ ಕ್ರಿಕೆಟ್ ದಿಗ್ಗಜರ ಸಮಾಗಮ:

ಇಂದಿನ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್‌ನ ಘಟಾನುಘಟಿ ಆಟಗಾರರೆಲ್ಲಾ ಭಾಗಿಯಾಗಿದ್ದರು. ಮೊದಲ ವಿಶ್ವಕಪ್‌ ವಿಜೇತ ತಂಡದ ನಾಯಕ ಕಪಿಲ್ ದೇವ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ಧೀನ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ಸೇರಿದಂತೆ ಅನೇಕ ಪ್ರಮುಖ ಮಾಜಿ ಆಟಗಾರರು ಭಾಗಿಯಾಗಿದ್ದಾರೆ.

ಪಿಂಕ್ ಮಯವಾದ ಕೊಲ್ಕತ್ತಾ

ಪಿಂಕ್ ಮಯವಾದ ಕೊಲ್ಕತ್ತಾ

ಪಿಂಕ್ ಬಾಲ್‌ನಲ್ಲಿ ಆಡುತ್ತಿರುವ ಕಾರಣ ಇಡೀ ವಾತಾವರಣವೆ ಪಿಂಕ್ ಮಯವಾಗಿದೆ. ಜೊತೆಗೆ ಕೊಲ್ಕತ್ತಾ ನಗರ ಪೂರ್ತಿ ಪಿಂಕ್ ಬಣ್ಣದಿಂದ ಕಂಗೊಳಿಸುತ್ತಿದೆ. ಮೈದಾನದ ಸುತ್ತಲಿನ ಕಟ್ಟಡಗಳು ರಸ್ತೆಗಳು ಎಲ್ಲಾಕಡೆಗಳಲ್ಲೂ ಈ ವಿಶೇಷ ಪಂದ್ಯಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

ಭಾರತ vs ಬಾಂಗ್ಲಾ, 2ನೇ ಟೆಸ್ಟ್, Live: ಇರುಳಿನ ಗುಮ್ಮನಿಗೆ ಬೆದರಿದ ಬಾಂಗ್ಲಾ

2003ರ ಪಂದ್ಯವನ್ನು ಸ್ಮರಿಸಿದ ವಿವಿಎಸ್ ಲಕ್ಷ್ಮಣ್:

2003ರ ಪಂದ್ಯವನ್ನು ಸ್ಮರಿಸಿದ ವಿವಿಎಸ್ ಲಕ್ಷ್ಮಣ್:

ಊಟದ ವಿರಾಮದ ವೇಳೆ ಪಂದ್ಯ ಪ್ರಸಾರ ಮಾಡುವ ಸ್ಟಾರ್ ಸ್ಪೋರ್ಟ್‌ನ ಕಾರ್ಯಕ್ರಮದಲ್ಲಿ ಸಚಿನ್ ತೆಂಡೂಲ್ಕರ್, ಲಕ್ಷ್ಮಣ್, ರಾಹುಲ್ ದ್ರಾವಿಡ್, ಹರ್ಭಜನ್ ಸಿಂಗ್ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ವಿವಿಎಸ್ ಲಕ್ಷ್ಮಣ್ ಆಸ್ಟ್ರೇಲಿಯಾ ವಿರುದ್ಧ 2003ರಲ್ಲಿ ಬಲಿಷ್ಠ ಆಸ್ಟ್ರೇಲಿಯಾದಿಂದ ಗೆಲುವನ್ನು ಕಸಿದುಕೊಂಡ ರೀತಿಯನ್ನು ಹಾಗೂ ಪಂದ್ಯದ ರೋಚಕ ಕ್ಷಣಗಳನ್ನು ನೆನಪಿಸಿಕೊಂಡರು.

ಗೌರವ ವಂದನೆ ಸ್ವೀಕರಿಸಿದ ದಿಗ್ಗಜ ಆಟಗಾರರು:

ಗೌರವ ವಂದನೆ ಸ್ವೀಕರಿಸಿದ ದಿಗ್ಗಜ ಆಟಗಾರರು:

ಇಂದಿನ ಪಂದ್ಯದಲ್ಲಿ ಕ್ರಿಕೆಟ್‌ನ ದಿಗ್ಗಜರು ಭಾಗಿಯಾಗಿದ್ದರು. ಈ ವಿಶೇಷ ಸಂದರ್ಭದಲ್ಲಿ ಕಪಿಲ್‌ದೇವ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಮಾಜಿ ಕ್ರಿಕೆಟಿಗರು ಈಡನ್ ಗಾರ್ಡನ್ ಮೈದಾನಕ್ಕೆ ವಾಹನದ ಮೂಲಕ ಸುತ್ತುಹಾಕಿ ಅಭಿಮಾನಿಗಳಿಂದ ಗೌರವ ವಂದನೆ ಸ್ವೀಕಾರ ಮಾಡಿದರು.

ಪ್ರೇಕ್ಷಕರ ಜೊತೆ ಗಂಗೂಲಿ ಸೆಲ್ಫಿ:

ಪ್ರೇಕ್ಷಕರ ಜೊತೆ ಗಂಗೂಲಿ ಸೆಲ್ಫಿ:

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಭಿಮಾನಿಗಳನ್ನು ಸೆಳೆಯಲು ಡೇ ನೈಟ್ ಪಂದ್ಯ ಆಯೋಜನೆ ಮಾಡಲಾಗಿದೆ. ಈ ಪಂದ್ಯಕ್ಕೆ ಅಭಿಮಾನಿಗಳು ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ ಈ ಸಂತಸವವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿಮಾನಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ. ಈ ಸಂತಸವನ್ನು ಗಂಗೂಲಿ ತಮ್ಮ ಟ್ವಿಟರ್‌ನಲ್ಲೂ ಹಂಚಿಕೊಂಡರು.

Story first published: Friday, November 22, 2019, 20:21 [IST]
Other articles published on Nov 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X