ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೈರಲ್ ಆಯ್ತು ದ್ರಾವಿಡ್ ಹೊಸ ಜಾಹೀರಾತು: ಈ ಮುಖ ನೋಡೇ ಇರ್ಲಿಲ್ಲ ಎಂದ ಕೊಹ್ಲಿ

Very uncharacteristic Rahul Dravid in Cred advertisement
Photo Credit: CRED ad screenshot

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ರೆಡಿಟ್ ಕಾರ್ಡ್ ಪೇಮೆಂಟ್ ಅಪ್ಲಿಕೇಶನ್‌ನ ಜಾಹಿರಾತಿನಲ್ಲಿ ರಾಹುಲ್ ದ್ರಾವಿಡ್ ಅದ್ಭುತ ನಟನೆಯ ಮೂಲಕ ಬೆರಗು ಮೂಡಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಈ ಜಾಹೀರಾತಿಗೆ ಮಾರು ಹೋಗಿದ್ದಾರೆ. ಐಪಿಎಲ್ ಆರಂಭದ ದಿನವೇ ಈ ಜಾಹೀರಾತು ಬಿಡುಗಡೆಯಾಗಿದ್ದು ಅಭಿಮಾನಿಗಳು ಆನಂದಿಸುತ್ತಿದ್ದಾರೆ

ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅಂಗಳದಲ್ಲಿನ ಆಟದ ಜೊತೆಗೆ ತಮ್ಮ ಅತ್ಯುತ್ತಮ ನಡತೆಯ ಕಾರಣದ ಮೂಲಕ ಹೆಚ್ಚು ಖ್ಯಾತರಾಗಿದ್ದಾರೆ. ಆದರೆ ಶುಕ್ರವಾರ ಬಿಡುಗಡೆಯಾದ ಹೊಸ ಜಾಹೀರಾತಿನಲ್ಲಿ ದ್ರಾವಿಡ್ ಅವರ ನೈಜ ವೈಕ್ತಿತ್ವಕ್ಕೆ ವಿರುದ್ಧವಾಗಿದೆ. ಹೀಗಾಗಿ ಅಭಿಮಾನಿಗಳಿಗೆ ಮತ್ತಷ್ಟು ಆಪ್ತವಾಗಿದೆ.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಈ ಜಾಹೀರಾತಿನಲ್ಲಿ ಸಮಚಿತ್ತದ ರಾಹುಲ್ ದ್ರಾವಿಡ್ ಸಂಪೂರ್ಣವಾಗಿ ತಮ್ಮ ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ಟ್ರಾಫಿಕ್ ಸಿಗ್ನಲ್‌ನಲ್ಲಿ ಸಿಲುಕಿರುವ ಸನ್ನಿವೇಶದಲ್ಲಿ ದ್ರಾವಿಡ್ ಹಾರ್ನ್ ಮಾಡುತ್ತಾ ಆಕ್ರೋಶದಿಂದ ಕಿರುಚಾಡುತ್ತಾ ಪಕ್ಕದ ವಾಹನಗಳಲ್ಲಿರುವವರಿಗೆ ತೊಂದರೆ ಕೊಡುತ್ತಾ, ಒಂದು ಹಂತದಲ್ಲಿ ಬ್ಯಾಟ್‌ನಿಂದ ಪಕ್ಕದ ವಾಹನಕ್ಕೆ ಹಾನಿ ಮಾಡುತ್ತಿರುವ ದೃಶ್ಯಗಳೂ ಇದೆ. ಬಳಿಕ ರಾಹುಲ್ ದ್ರಾವಿಡ್ "ನಾನು ಇಂದಿರಾನಗರದ ಗೂಂಡಾ" ಎಂದು ಚೀರಿ ಹೇಳುವ ದೃಶ್ಯವಂತೂ ಮತ್ತೂ ಮಜವಾಗಿದೆ.

ಅಂಗಳದಲ್ಲಿ ಕ್ರಿಕೆಟಿಗನಾಗಿ, ಮಾರ್ಗದರ್ಶಕನಾಗಿ ಪರಿಪೂರ್ಣ ವ್ಯಕ್ತಿ ಎನಿಸಿರುವ ರಾಹುಲ್ ದ್ರಾವಿಡ್ ನಟನಾಗಿಯೂ ಸೈ ಎನಿಸಿಕೊಂಡಿದ್ದಾರೆ. ಕ್ರಿಕೆಟಿಗನಾಗಿ ದ್ರಾವಿಡ್ ಸಾಕಷ್ಟು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ, ಆದರೆ ಆ ಎಲ್ಲಾ ಜಾಹೀರಾತಿಗೆ ಹೋಲಿಸಿದರೆ ಇದು ತೀರಾ ವಿಶೇಷವೆನಿಸುತ್ತದೆ.

ಇನ್ನು ಈ ಜಾಹೀರಾತಿನ ದೃಶ್ಯಗಳನ್ನು ನೋಡಿ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದು "ರಾಹುಲ್ ಅವರ ಈ ಮುಖವನ್ನು ನಾನು ನೋಡಿಯೇ ಇರಲಿಲ್ಲ" ಎಂದು ಬರೆದುಕೊಂಡಿದ್ದಾರೆ.

Story first published: Saturday, April 10, 2021, 10:36 [IST]
Other articles published on Apr 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X