ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಆಡುತ್ತಿದ್ದವರಿಗೆ ದುಬಾರಿ ಫೈನ್ ಹಾಕಿದ ವಿಕ್ಟೋರಿಯಾ ಪೊಲೀಸರು!

Victoria Police fine group of friends playing cricket for breaching social distancing rules

ಸಿಡ್ನಿ, ಏಪ್ರಿಲ್ 8: ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರಿಗೆ ಅಲ್ಲಿನ ಪೊಲೀಸರು ದುಬಾರಿ ಶುಲ್ಕ ವಿಧಿಸಿರುವ ಘಟನೆ ನಡೆದಿದೆ. ಕೊರೊನಾವೈರಸ್ ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆನ್ನುವ ನಿಯಮ ಮೀರಿ ನಡೆದುಕೊಂಡಿದ್ದಕ್ಕಾಗಿ ಕ್ರಿಕೆಟ್ ಆಡುತ್ತಿದ್ದ ಯುವಕರು ಬೆಲೆ ತೆತ್ತಿದ್ದಾರೆ.

'ಕನಸು ಕಾಣುತ್ತಿರಿ' ಎಂದು ಮುಂಬೈ ಇಂಡಿಯನ್ಸ್‌ಗೆ ತಿರುಗೇಟು ನೀಡಿದ ಚಾಹಲ್ !'ಕನಸು ಕಾಣುತ್ತಿರಿ' ಎಂದು ಮುಂಬೈ ಇಂಡಿಯನ್ಸ್‌ಗೆ ತಿರುಗೇಟು ನೀಡಿದ ಚಾಹಲ್ !

ಇದೇನೂ ದೊಡ್ಡ ಕ್ರಿಕೆಟ್ ಟೂರ್ನಿಯಲ್ಲ. ಮೈದಾನದಲ್ಲೂ ಯುವಕರು ಕ್ರಿಕೆಟ್ ಆಡುತ್ತಿರಲಿಲ್ಲ. ನಮ್ಮಲ್ಲಿ ಗಲ್ಲಿ ಕ್ರಿಕೆಟ್ ಅಂತೀವಲ್ಲ? ಆ ರೀತಿಯ ಕ್ರಿಕೆಟ್ ಆಡಿದ್ದಕ್ಕಾಗಿ ಯುವಕರಿಗೆ ಭಾರೀ ದಂಡ ವಿಧಿಸಲಾಗಿದೆ. ಯುವಕರಿಗೆ ಪೊಲೀಸರು ದಂಡ ವಿಧಿಸುತ್ತಿರುವ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕ್ಲಾರ್ಕ್‌ರ ಶ್ರೇಷ್ಠ 7 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನಕ್ಲಾರ್ಕ್‌ರ ಶ್ರೇಷ್ಠ 7 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ

ಮಾರಕ ಕೊರೊನಾವೈರಸ್‌ನಿಂದಾಗಿ ವಿಶ್ವದ ಬಹುತೇಕ ದೇಶಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ನಿಷೇಧದ ಪ್ರಕಾರ ಪಬ್ಲಿಕ್, ಪಾರ್ಕ್ ಇಂಥ ಜಾಗಗಳಲ್ಲಿ ಜನ ಒಟ್ಟುಸೇರುವಂತಿಲ್ಲ. ಕ್ರಿಕೆಟ್ ಆಟದಲ್ಲಿ ಐದಾರು ಮಂದಿ ಆಡುತ್ತಿದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆನ್ನುವ ನಿಯಮ ಮೀರಿದಂತಾಗಿದೆ. ಹೀಗಾಗಿ ಕ್ರಿಕೆಟ್ ಪ್ರಿಯ ಯುವಕರಿಗೆ ದಂಡ ಹಾಕಲಾಗಿದೆ.

ಕ್ರಿಕೆಟ್‌ ಆಟದಲ್ಲಿ ಎಷ್ಟು ಯುವಕರು ತೊಡಗಿದ್ದರು ಎಂಬುದು ಸ್ಪಷ್ಟಗೊಂಡಿಲ್ಲ. ಒಬ್ಬಬ್ಬರು ಎಷ್ಟು ದಂಡ ತೆತ್ತಿದ್ದಾರೆ ಅನ್ನೋದೂ ಗೊತ್ತಿಲ್ಲ. ಆದರೆ ಒಟ್ಟಾರೆ ಆ ಯುವಕರಿಗೆ ಪೊಲೀಸರು ಬರೋಬ್ಬರಿ $1,652 ( ಸುಮಾರು 1,25,506 ರೂ.) ದಂಡ ಹಾಕಿದ್ದಾರೆ. ಕಾನೂನು ಉಲ್ಲಂಘನೆಗೆ ವಿಕ್ಟೋರಿಯಾದಲ್ಲಿ ಕಟ್ಟುನಿಟ್ಟಿನ ಕ್ರಮವಿದೆ.

Story first published: Wednesday, April 8, 2020, 12:18 [IST]
Other articles published on Apr 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X