ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ 2021: ಮಹಾರಾಷ್ಟ್ರ ತಂಡವನ್ನ ಮುನ್ನಡೆಸಲಿರುವ ರುತುರಾಜ್ ಗಾಯಕ್ವಾಡ್

Ruturaj Gaikwad

ನಾಳೆಯಿಂದ ಪ್ರಾರಂಭಗೊಳ್ಳುವ ವಿಜಯ್ ಹಜಾರೆ ಟ್ರೋಫಿಗಾಗಿ ಮಹಾರಾಷ್ಟ್ರ ಕ್ರಿಕೆಟ್ ತಂಡದ 20 ಸದಸ್ಯರ ತಂಡದ ನಾಯಕರಾಗಿ ರುತುರಾಜ್ ಗಾಯಕ್ವಾಡ್ ಅವರನ್ನು ಆಯ್ಕೆಮಾಡಲಾಗಿದ್ದು, ರಾಹುಲ್ ತ್ರಿಪಾಠಿ ಅವರು ಉಪನಾಯಕರಾಗಿರುತ್ತಾರೆ.

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಹಾರಾಷ್ಟ್ರ ಪರ ನಾಕೌಟ್ ಪಂದ್ಯದಲ್ಲಿ ಮಿಸ್ ಆಗಿದ್ದ ರುತುರಾಜ್ ಗಾಯಕ್ವಾಡ್ ಗ್ರೂಪ್‌ ಸ್ಟೇಜ್‌ ಪಂದ್ಯಗಳಲ್ಲಿ ಐದು ಇನ್ನಿಂಗ್ಸ್‌ಗಳಲ್ಲಿ 51, 80, 81, 3 ಮತ್ತು 44 ಸ್ಕೋರ್‌ ದಾಖಲಿಸಿದರು.

ಅಜಾಜ್ ಪಟೇಲ್ 10 ವಿಕೆಟ್ ಸಾಧನೆ: ಅನಿಲ್ ಕುಂಬ್ಳೆ, ಜಿಮ್ ಲೇಕರ್‌ಗಿಂತ ಗ್ರೇಟ್ ಎಂದ ದೀಪಕ್ ಪಟೇಲ್ಅಜಾಜ್ ಪಟೇಲ್ 10 ವಿಕೆಟ್ ಸಾಧನೆ: ಅನಿಲ್ ಕುಂಬ್ಳೆ, ಜಿಮ್ ಲೇಕರ್‌ಗಿಂತ ಗ್ರೇಟ್ ಎಂದ ದೀಪಕ್ ಪಟೇಲ್

ಕಳೆದ ಐಪಿಎಲ್ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಚಾಂಪಿಯನ್ ಆಗಲು ರುತುರಾಜ್ ಗಾಯಕ್ವಾಡ್ ಪ್ರಮುಖ ಪಾತ್ರವಹಿಸಿದ್ರು, ಹೀಗಾಗಿ ಇವರನ್ನ ಸಿಎಸ್‌ಕೆ 6 ಕೋಟಿ ರೂಪಾಯಿಗೆ ರೀಟೈನ್ ಮಾಡಿದೆ.

ಐಪಿಎಲ್ 2021ರ ಪೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಅಂತಿಮ ಪಂದ್ಯದಲ್ಲಿ, ರುತುರಾಜ್ ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್ ರಾಹುಲ್ ಅವರ 626 ರನ್‌ಗಳ ಮೊತ್ತವನ್ನು ಮೀರಿಸಿದರು ಮತ್ತು ಪಂದ್ಯಾವಳಿಯ ಇತಿಹಾಸದಲ್ಲಿ ಆರೆಂಜ್ ಕ್ಯಾಪ್ ಅನ್ನು ಗೆದ್ದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ರುತುರಾಜ್ 16 ಇನ್ನಿಂಗ್ಸ್‌ಗಳಿಂದ 136.26 ರ ಸ್ಟ್ರೈಕ್ ರೇಟ್‌ನಲ್ಲಿ ನಾಲ್ಕು 50 ಪ್ಲಸ್ ಸ್ಕೋರ್‌ಗಳ ಸಹಾಯದಿಂದ 635 ರನ್ ಗಳಿಸಿದರು. ಇವರ ಒಟ್ಟಾರೆ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅವರ ಶತಕ ಹೈಲೈಟ್ ಆಗಿತ್ತು.

ರಾಜ್‌ಕೋಟ್‌ನಲ್ಲಿ ನಡೆಯಲಿರುವ ಎಲೈಟ್ ಗ್ರೂಪ್ ಡಿಯಲ್ಲಿ ಮಹಾರಾಷ್ಟ್ರ ತಂಡವು ಮಧ್ಯಪ್ರದೇಶ, ಛತ್ತೀಸ್‌ಗಢ, ಕೇರಳ, ಉತ್ತರಾಖಂಡ ಮತ್ತು ಚಂಡೀಗಢ ತಂಡಗಳೊಂದಿಗೆ ಕಣಕ್ಕಿಳಿದಿದೆ. ಮಹಾರಾಷ್ಟ್ರ ಬುಧವಾರ (ಡಿಸೆಂಬರ್ 8) ಮಧ್ಯಪ್ರದೇಶ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದೆ.

ವಿಜಯ್ ಹಜಾರೆ ಟೂರ್ನಿ 2021: ನಾಳೆ ಚಾಲನೆ, ಕರ್ನಾಟಕ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ?ವಿಜಯ್ ಹಜಾರೆ ಟೂರ್ನಿ 2021: ನಾಳೆ ಚಾಲನೆ, ಕರ್ನಾಟಕ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ?

ವಿಚಿತ್ರ ರೀತಿಯಲ್ಲಿ ಅಂಪೈರಿಂಗ್ ! | Oneindia Kannada

ವಿಜಯ್ ಹಜಾರೆ ಟೂರ್ನಿಗೆ ಮಹಾರಾಷ್ಟ್ರ ತಂಡ:
ರುತುರಾಜ್ ಗಾಯಕ್ವಾಡ್ (ನಾಯಕ), ರಾಹುಲ್ ತ್ರಿಪಾಠಿ (ಉಪನಾಯಕ), ಯಶ್ ನಹರ್, ನೌಶಾದ್ ಶೇಖ್, ಅಜೀಮ್ ಕಾಜಿ, ಅಂಕೀತ್ ಬವಾನೆ, ಶಂಶುಜಾಮ ಕಾಜಿ, ಮುಖೇಶ್ ಚೌಧರಿ, ಪ್ರದೀಪ್ ದಾಧೆ, ಮನೋಜ್ ಇಂಗಳೆ, ಆಶಯ್ ಪಾಲ್ಕರ್, ದಿವ್ಯಾಂಗ್ ಹಿಂಗನೇಕರ್, ಜಗದೀಶ್ ಝೋಪ್, ಸ್ವಪ್ನಿಲ್ ಫುಲ್ಪಗರ್, ಅವಧೂತ್ ದಾಂಡೇಕರ್, ತರಂಜಿತ್ ಸಿಂಗ್ ಧಿಲ್ಲೋನ್, ಸಿದ್ಧೇಶ್ ವೀರ್, ಯಶ್ ಕ್ಷೀರಸಾಗರ್, ಪವನ್ ಶಾ, ಧನರಾಜ್ ಪರದೇಶಿ.

Story first published: Wednesday, December 8, 2021, 9:00 [IST]
Other articles published on Dec 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X