ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟೂರ್ನಿ: ರುತುರಾಜ್ ಗಾಯಕ್ವಾಡ್ ಭರ್ಜರಿ ಸೆಂಚುರಿ ಹೊಡೆದ್ರೂ, ಗೆಲ್ಲಲಿಲ್ಲ ಮಹಾರಾಷ್ಟ್ರ

Ruturaj Gaikwad

ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್‌ನಲ್ಲಿ ಅದ್ಭುತ ಆಟವಾಡಿದ್ದ ರುತುರಾಜ್ ಗಾಯಕ್ವಾಡ್ , ದೇಶೀಯ ಟೂರ್ನಿ ವಿಜಯ್ ಹಜಾರೆಯಲ್ಲೂ ಭರ್ಜರಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.

ಮಹಾರಾಷ್ಟ್ರ ತಂಡದ ನಾಯಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಇಂದು ಸಿಡಿಸಿದ ಶತಕ ಗೆಲುವಿನ ಕಡೆಗೆ ಸಾಗದೆ, ಸೋಲಿನೊಂದಿಗೆ ಕೊನೆಗೊಂಡಿದೆ. ಸದ್ಯ ಟೂರ್ನಿಯಲ್ಲಿ ಮೂರನೇ ಶತಕ ಸಿಡಿಸಿದ ರುತುರಾಜ್ 129 ಎಸೆತಗಳಲ್ಲಿ 124 ರನ್ ಗಳಿಸಿದ್ರು. ಮಹಾರಾಷ್ಟ್ರವು ಆರು ಓವರ್‌ಗಳ ಒಳಗೆ 22 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಾಗ ಶತಕ ಸಿಡಿಸಿ ತಂಡ ಚೇತರಿಸಿಕೊಳ್ಳಲು ಸಹಾಯ ಮಾಡಿದರು.

ವಿರಾಟ್‌ನನ್ನ ನಾಯಕತ್ವದಿಂದ ಕೆಳಗಿಳಿಸಿದ್ದಕ್ಕೆ ಗರಂ ಆದ ಕೊಹ್ಲಿ ಬಾಲ್ಯದ ಕೋಚ್!ವಿರಾಟ್‌ನನ್ನ ನಾಯಕತ್ವದಿಂದ ಕೆಳಗಿಳಿಸಿದ್ದಕ್ಕೆ ಗರಂ ಆದ ಕೊಹ್ಲಿ ಬಾಲ್ಯದ ಕೋಚ್!

ಆದ್ರೆ ಎದುರಾಳಿ ಕೇರಳದ ಪರ ಕೇರಳದ ವಿಷ್ಣು ವಿನೋದ್ ಮತ್ತು ಸಿಜೋಮನ್ ಜೋಸೆಫ್ ಅವರ ದಾಖಲೆಯ ಜೊತೆಯಾಟದ ಆಧಾರದ ಮೇಲೆ ಕೇರಳ ನಾಲ್ಕು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಒಂದು ಹಂತದಲ್ಲಿ ಮಹಾರಾಷ್ಟ್ರದ ಗೆಲುವು ಬಹುತೇಕ ಖಚಿತ ಎನಿಸಿತು ಆದರೆ ವಿನೋದ್ ಮತ್ತು ಜೋಸೆಫ್ ಪಂದ್ಯಕ್ಕೆ ತಿರುವು ನೀಡಿದರು. ಇದರ ಜೊತೆಗೆ ಇವರಿಬ್ಬರ ಜೊತೆಯಾಟ ಮಹೇಂದ್ರ ಸಿಂಗ್ ಧೋನಿ ಅವರ ಹಳೆಯ ದಾಖಲೆಯನ್ನು ಮುರಿದಿದೆ.

ಟಾಸ್ ಸೋತ ಕೇರಳ ತಂಡ ಮಹಾರಾಷ್ಟ್ರವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ನಾಯಕ ರಿತುರಾಜ್ ಗಾಯಕ್ವಾಡ್ ಅವರ 124 ಮತ್ತು ರಾಹುಲ್ ತ್ರಿಪಾಠಿ ಅವರ 99 ರನ್‌ಗಳ ಹಿನ್ನಲೆಯಲ್ಲಿ ಮಹಾರಾಷ್ಟ್ರ 50 ಓವರ್‌ಗಳಲ್ಲಿ 291 ರನ್ ಗಳಿಸಿತು. ಕೇರಳ ಪರ ನಿದ್ಧೇಶ್ ಐದು ವಿಕೆಟ್ ಪಡೆದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕೇರಳ ಪರ ರೋಹನ್ ಕುನ್ನುಮ್ಮಲ್ ಮತ್ತು ಮೊಹಮ್ಮದ್ ಅಜರುದ್ದೀನ್ 11 ರನ್ ಗಳಿಸಿ ಔಟಾದರು. ನಾಯಕ ಸಂಜು ಸ್ಯಾಮ್ಸನ್ (42) ಮತ್ತು ಜಲಜ್ ಸಕ್ಸೇನಾ (44) ರನ್‌ಗಳಿಸಿ ಔಟಾದ್ರು. 26ನೇ ಓವರ್ ವೇಳೆಗೆ ಕೇರಳ ಆರು ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿತ್ತು. ಆದರೆ, ಇದಾದ ಬಳಿಕ ವಿಷ್ಣು ವಿನೋದ್ ಮತ್ತು ಸಿಜೋಮನ್ ಜೋಸೆಫ್ ಏಳನೇ ವಿಕೆಟ್‌ಗೆ ಅಜೇಯ 174 ರನ್‌ಗಳ ಜೊತೆಯಾಟ ನಡೆಸಿ ಒಂದು ಓವರ್ ಬಾಕಿ ಇರುವಂತೆಯೇ ತಂಡಕ್ಕೆ ಜಯ ತಂದುಕೊಟ್ಟರು.

ಮೂರನೇ ಶತಕ ಸಿಡಿಸಿದ್ರೂ ರುತುರಾಜ್ ಇನ್ನಿಂಗ್ಸ್ ವ್ಯರ್ಥವಾಗಿದೆ. ಟೂರ್ನಿಯಲ್ಲಿ ರುತುರಾಜ್ ಇದುವರೆಗೆ ಮೂರು ಇನ್ನಿಂಗ್ಸ್‌ಗಳಲ್ಲಿ 37 ಬೌಂಡರಿ ಮತ್ತು 12 ಸಿಕ್ಸರ್‌ಗಳನ್ನು ಹೊಡೆದು 414 ರನ್ ಗಳಿಸಿದ್ದಾರೆ. ಬರೋಬ್ಬರಿ 207ರಷ್ಟು ಸರಾಸರಿ ಹೊಂದಿರುವ ರುತುರಾಜ್ ಗಾಯಕ್ವಾಡ್ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸರಣಿಗೆ ಇನ್ನೂ ಟೀಂ ಸೆಲೆಕ್ಷನ್ ಗೊಂದಲದಲ್ಲಿರುವ ಆಯ್ಕೆಗಾರರ ಗಮನ ಸೆಳೆದಿದ್ದಾರೆ.

ಸ್ಕೋರ್‌ಕಾರ್ಡ್‌
ಮಹಾರಾಷ್ಟ್ರ 291/8; 50 ಓವರ್‌ಗಳು (ರುತುರಾಜ್ ಗಾಯಕ್‌ವಾಡ್ 124, ರಾಹುಲ್ ತ್ರಿಪಾಠಿ 99; ಎಂ.ಡಿ. ನಿಧೀಶ್ 5/49, ಬಾಸಿಲ್ ಥಂಪಿ 2/56) ಕೇರಳಕ್ಕೆ 294/6; 48.5 ಓವರ್‌ಗಳು (ವಿಷ್ಣು ವಿನೋದ್ ಔಟಾಗದೆ 100, ಸಿಜೋಮನ್ ಜೋಸೆಫ್ ಔಟಾಗದೆ 71, ಜಲಜ್ ಸಕ್ಸೇನಾ 44, ಸಂಜು ಸ್ಯಾಮ್ಸನ್ 42

Story first published: Saturday, December 11, 2021, 23:03 [IST]
Other articles published on Dec 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X