ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ: ಪಂದ್ಯ, ಪ್ರಸಾರ, ತಂಡಗಳ ಬಗ್ಗೆ ಪೂರ್ಣ ವಿವರ

ಬೆಂಗಳೂರು, ಸೆ. 25: ದೇಶಿ ಏಕದಿನ ಕ್ರಿಕೆಟ್ ಪಂದ್ಯಾವಳಿ ವಿಜಯ್ ಹಜಾರೆ ಟ್ರೋಫಿಯ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕವು ತನ್ನ ಅಭಿಯಾನವನ್ನು ಸೆಪ್ಟೆಂಬರ್ 24ರಿಂದ ಆರಂಭಿಸಿದ್ದು, ಹೈದರಾಬಾದ್ ವಿರುದ್ಧ ಕರ್ನಾಟಕದ ಮೊದಲ ಪಂದ್ಯ ಮಳೆಗೆ ಆಹುತಿಯಾಗಿದೆ.

18ನೇ ಆವೃತ್ತಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ 169 ಪಂದ್ಯಗಳು ನಡೆಯಲಿದ್ದು, ಒಟ್ಟು 37 ತಂಡಗಳು ಈ ಬಾರಿ ವಿಜಯ್ ಹಜಾರೆ ಟ್ರೋಫಿಗಾಗಿ ಕಾದಾಡುತ್ತಿವೆ. ಎಲೈಟ್ ಎ ಗುಂಪಿನಲ್ಲಿರುವ ಕರ್ನಾಟಕ ತಂಡದ ಎಲ್ಲ ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಯಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹಾಗೂ ಆಲೂರು ಮೈದಾನಗಳಲ್ಲಿ ಪಂದ್ಯ ನಡೆಯಲಿದ್ದು, ಎಲ್ಲ ಪಂದ್ಯಗಳು ಬೆಳಗ್ಗೆ 9ಕ್ಕೆ ಆರಂಭವಾಗಲಿವೆ.

ವಿಜಯ್ ಹಜಾರೆ ಟ್ರೋಫಿ: ಸೆ. 24ರಿಂದ ಕರ್ನಾಟಕದ ಪಂದ್ಯ, ವೇಳಾಪಟ್ಟಿ ನೋಡಿವಿಜಯ್ ಹಜಾರೆ ಟ್ರೋಫಿ: ಸೆ. 24ರಿಂದ ಕರ್ನಾಟಕದ ಪಂದ್ಯ, ವೇಳಾಪಟ್ಟಿ ನೋಡಿ

ಎಲೈಟ್ ಎ, ಬಿ ಹಾಗೂ ಸಿ ಗುಂಪಿನ ಪಂದ್ಯಗಳು ಕ್ರಮವಾಗಿ ಬೆಂಗಳೂರು, ಜೈಪುರ ಹಾಗೂ ವಡೋದರದಲ್ಲಿ ನಡೆಯಲಿವೆ. ಪ್ಲೇಟ್ ಗುಂಪಿನ ಪಂದ್ಯಗಳು ಡೆಹ್ರಾಡೂನ್​ನಲ್ಲಿ ನಡೆಯಲಿವೆ. ಕ್ವಾರ್ಟರ್ ಫೈನಲ್ ಹಂತದಲ್ಲಿ ಎ ಹಾಗೂ ಬಿ ಗುಂಪಿನ ತಲಾ 5 ತಂಡಗಳು, ಸಿ ಗುಂಪಿನ 2 ಹಾಗೂ ಪ್ಲೇಟ್ ಗುಂಪಿನ 1 ತಂಡ ಆಡಲಿವೆ. ರೌಂಡ್ ರಾಬಿನ್ ಹಾಗೂ ಪ್ಲೇ ಆಫ್ ಮಾದರಿಯಲ್ಲಿ ಪಂದ್ಯಾವಳಿಯನ್ನು ರಚಿಸಲಾಗಿದೆ. ಪ್ರತಿ ತಂಡವು ಮತ್ತೊಂದು ಗುಂಪಿನ ತಂಡದ ವಿರುದ್ಧ ಒಮ್ಮೆಯಾದರೂ ಸೆಣಸುವ ಅವಕಾಶ ಸಿಗಲಿದೆ.

ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಎಲ್ಲಿ?

ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಎಲ್ಲಿ?

ಆಯ್ದ ಪಂದ್ಯಗಳ ನೇರ ಪ್ರಸಾರವನ್ನು ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ ನಲ್ಲಿ ನೋಡಬಹುದು. ಮಿಕ್ಕಂತೆ ಹಾಟ್ ಸ್ಟಾರ್ ಮೊಬೈಲ್ ಅಪ್ಲಿಕೇಷನ್ ನಲ್ಲಿ ಪಂದ್ಯಗಳ ಪ್ರಸಾರವಿರಲಿದೆ. ಜಿಯೋಟಿವಿಯಲ್ಲೂ 9 ಗಂಟೆಗೆ ಪಂದ್ಯ ಲಭ್ಯ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹಾಗೂ ಆಲೂರು ಮೈದಾನಗಳಲ್ಲಿ ಕರ್ನಾಟಕ್ದ ಎಲ್ಲಾ ಪಂದ್ಯಗಳು ನಡೆಯಲಿವೆ.

ವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ: ಮನೀಶ್ ಪಾಂಡೆ ನಾಯಕ

ಎಲೈಟ್ ಗುಂಪು, ಪ್ಲೇಟ್ ಗುಂಪಿನ ತಂಡಗಳು

ಎಲೈಟ್ ಗುಂಪು, ಪ್ಲೇಟ್ ಗುಂಪಿನ ತಂಡಗಳು

ಎ ಗುಂಪು: ಮುಂಬೈ, ಸೌರಾಷ್ಟ್ರ, ಆಂಧ್ರ, ಛತ್ತೀಸ್ ಗಢ, ಹೈದರಾಬಾದ್, ಕರ್ನಾಟಕ, ಜಾರ್ಖಂಡ್, ಗೋವಾ, ಕೇರಳ.

ಬಿ ಗುಂಪು: ದೆಹಲಿ, ವಿದರ್ಭ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಬರೋಡಾ, ಉತ್ತರಪ್ರದೇಶ, ಹರ್ಯಾಣ, ಪಂಜಾಬ್.

ಸಿ ಗುಂಪು: ಗುಜರಾತ್, ಬೆಂಗಾಳ, ತಮಿಳುನಾಡು, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ತ್ರಿಪುರ, ಮಧ್ಯಪ್ರದೇಶ, ರೈಲ್ವೇಸ್, ಬಿಹಾರ, ಸರ್ವೀಸಸ್.

ಪ್ಲೇಟ್: ಅಸ್ಸಾಂ, ಮಣಿಪುರ, ಉತ್ತರಾಖಂಡ್, ಮೇಘಾಲಯ, ಪುದುಚೇರಿ, ಅರುಣಾಚಲ ಪ್ರದೇಶ, ಸಿಕ್ಕಿಂ, ಮಿಜೋರಾಂ, ನಾಗಾಲ್ಯಾಂಡ್, ಚಂದೀಗಢ.

ಕರ್ನಾಟಕ:

ಕರ್ನಾಟಕ:

ಕೃಷ್ಣಮೂರ್ತಿ ಸಿದ್ಧಾರ್ಥ್, ಲೋಕೇಶ್ ರಾಹುಲ್, ಮನೀಶ್ ಪಾಂಡೆ(ನಾಯಕ), ದೇವದತ್ ಪಡಿಕ್ಕಳ್, ಅಭಿಶೇಕ್ ರೆಡ್ಡಿ, ಪವನ್ ದೇಶಪಾಂಡೆ, ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಜಗದೀಶ್ ಸುಚಿತ್, ಪ್ರವೀಣ್ ದುಬೇ, ಕೃಷ್ಣಪ್ಪ ಗೌತಮ್, ಅಭಿಮನ್ಯು ಮಿಥುನ್, ಪ್ರಸಿಧ್ ಕೃಷ್ಣ, ರೋನಿತ್ ಮೋರೆ, ವಿ ಕೌಶಿಕ್.

2018ರ ಚಾಂಪಿಯನ್ ಮುಂಬೈ

2018ರ ಚಾಂಪಿಯನ್ ಮುಂಬೈ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2018ರ ಅಂತಿಮ ಹಣಾಹಣಿಯಲ್ಲಿ ದೆಹಲಿ ತಂಡವನ್ನು 4 ವಿಕೆಟ್ ಗಳಿಂದ ಸೋಲಿಸಿದ ಮುಂಬೈ ಮೂರನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆದ್ದುಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ದೆಹಲಿ 45.4ಓವರ್ ಗಳಲ್ಲಿ 177ಕ್ಕೆ ಕುಸಿತ ಕಂಡಿತ್ತು. ಮುಂಬೈ ಪರ ಶಿವಂ ದುಬೇ 3/29, ಧವಳ್ ಕುಲಕರ್ಣಿ 3/30 ಗಳಿಸಿದರೆ, ಚೇಸಿಂಗ್ ವೇಳೆ ಆದಿತ್ಯ ತಾರೆ ಅರ್ಧಶತಕ (71ರನ್, 89ಎಸೆತ) ಗಳಿಸಿ ಮಿಂಚಿದ್ದರು.

Story first published: Wednesday, September 25, 2019, 20:47 [IST]
Other articles published on Sep 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X