ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ: ಮುಂದುವರಿದ ಕರ್ನಾಟಕದ ಗೆಲುವಿನ ಓಟ: ರಾಜಸ್ಥಾನ ವಿರುದ್ದ ಭರ್ಜರಿ ವಿಜಯ

Vijay Hazare Trophy 2022: Karnataka win against Rajasthan by 60 runs

ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡದ ಅದ್ಭುತ ಪ್ರದರ್ಶನ ಮುಂದುವರಿದಿದೆ. ಬುಧವಾರ ರಾಜಸ್ಥಾನ ತಂಡದ ವಿರುದ್ಧ ಮುಖಾಮುಖಿಯಾದ ಕರ್ನಾಟಕ ಭರ್ಜರಿ ಗೆಲುವು ಸಾಧಿಸುವಲ್ಲಿ 7 ಪಂದ್ಯಗಳ ಪೈಕಿ 6ನೇ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ರಾಜಸ್ಥಾನ ವಿರುದ್ಧ ಕರ್ನಾಟಕ ಮೊದಲು ಬ್ಯಾಟಿಂಗ್ ನಡೆಸಿ 208 ರನ್‌ಗಳನ್ನೇ ಗಳಿಸಲು ಯಶಸ್ವಿಯಾಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ತಂಡವನ್ನು ಕರ್ನಾಟಕ 148 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮಯಾಂಕ್ ಅಗರ್ವಾಲ್ ಪಡೆ 60 ರನ್‌ಗಳ ಅಂತರದ ಗೆಲುವು ಸಾಧಿಸಿದೆ.

ಈ ಪಂದ್ಯದಲ್ಲಿ ಕರ್ನಾಟಕ ತಂಡದ ಆರಂಭಿಕ ಆಟಗಾರರಿಬ್ಬರು ಕೂಡ ಎರಡಂಕಿ ದಾಟುವ ಮುನ್ನವೇ ವಿಕೆಟ್ ಕಳೆದುಕೊಂಡರು. ಆದರೆ ಮೂರನೇ ಕ್ರಮಾಂಕದ ಆಟಗಾರ ನಿಕಿನ್ ಜೋಸ್ ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಗೋಪಾಲ್ ಕರ್ನಾಟಕ ತಂಡದ ಪರವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಇಬ್ಬರು ಆಟಗಾರರು ಕೂಡ ತಲಾ ಅರ್ಧ ಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಕರ್ನಾಟಕ ತಂಡ ಇನ್ನೂರರ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

IND vs NZ: ಸಿರಾಜ್ ನಾನು ಬಯಸಿದ್ದನ್ನು ನಿಖರವಾಗಿ ಮಾಡಿದ; ಆರ್‌ಸಿಬಿ ಬೌಲರ್‌ಗೆ ಪಾಂಡ್ಯ ಶ್ಲಾಘನೆIND vs NZ: ಸಿರಾಜ್ ನಾನು ಬಯಸಿದ್ದನ್ನು ನಿಖರವಾಗಿ ಮಾಡಿದ; ಆರ್‌ಸಿಬಿ ಬೌಲರ್‌ಗೆ ಪಾಂಡ್ಯ ಶ್ಲಾಘನೆ

ರಾಜಸ್ಥಾನ್ ತಂಡದ ಪರವಾಗಿ ವೇಗಿಗಳಾದ ಅನಿಕೇತ್ ಚೌಧರಿ ಹಾಗೂ ಸಾಹಿಲ್ ದಿವಾನ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದರು. ಈ ಇಬ್ಬರು ಕೂಡ ತಲಾ ಮೂರು ವಿಕೆಟ್ ಸಂಪಾದಿಸಿ ಕರ್ನಾಟಕಕ್ಕೆ ಆಘಾತ ನೀಡಿದರು. ಆದರೆ ರಾಜಸ್ಥಾನ ತಂಡದ ಬ್ಯಾಟಿಂಗ್ ವಿಭಾಗ ಕರ್ನಾಟಕದ ಬೌಲಿಂಗ್ ದಾಳಿಗೆ ತತ್ತರಿಸಿತು.

ಕರ್ನಾಟಕ ತಂಡ ನೀಡಿದ 209 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ತಂಡ ಕೂಡ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. ಯಾವ ಜೋಡಿಯಿಂದಲು ಕೂಡ ಸರಿಯಾದ ಜೊತೆಯಾಟ ಬಾರದಂತೆ ನೋಡಿಕೊಳ್ಳುವಲ್ಲಿ ಕರ್ನಾಟಕದ ಬೌಲರ್‌ಗಳು ಯಶಸ್ವಿಯಾದರು. ಆರಂಭಿಕ ಆಟಗಾರ ಯಶ್ ಕೊಠಾರಿ ಅವರ 49 ರನ್ ರಾಜಸ್ಥಾನ ಪರವಾಗಿ ದಾಖಲಾದ ಅತೀ ಹೆಚ್ಚಿನ ಸ್ಕೋರ್ ಆಗಿದೆ. ಕುನಾಲ್ ಸಿಂಗ್ ರಾಥೋರ್ 35 ರನ್‌ಗಳನ್ನು ಗಳಿಸಿದರು. ಉಳಿದಂತೆ ಎಲ್ಲಾ ಆಟಗಾರರು ಕೂಡ ಕನಿಷ್ಠ ಮೊತ್ತಕ್ಕೆ ವಿಕೆಟ್ ಕಳೆದುಕೊಂಡಿದ್ದಾರೆ.

ಕರ್ನಾಟಕ ತಂಡದ ಪರವಾಗಿ ಬೌಲಿಂಗ್ ವಿಭಾಗ ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ರೋನಿತ್ ಮೋರೆ ಹಾಗೂ ಕೃಷ್ಣಪ್ಪ ಗೌತಮ್ ತಲಾ ಮೂರು ವಿಕೆಟ್ ಕಿತ್ತು ಮಿಂಚಿದರೆ ವಿದ್ವತ್ ಕಾವೇರಪ್ಪ ಹಾಗೂ ವಾಸುಕಿ ಕೌಶಿಕ್ ತಲಾ ಎರಡು ವಿಕೆಟ್ ಸಂಪಾದಿಸಿದರು. ಈ ಗೆಲುವಿನೊಂದಿಗೆ ಕರ್ನಾಟಕ ಅಂಕಪಟ್ಟಿಯಲ್ಲಿ ಎಲೈಟ್ ಗ್ರೂಫ್ ಬಿ ವಿಭಾಗದಲ್ಲಿ ಅಗ್ರಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ವಿಭಿನ್ನ ಮಾದರಿಯಲ್ಲಿ ಮುಂದಿನ ಪುರುಷರ ಟಿ20 ವಿಶ್ವಕಪ್; ಅದರ ಸ್ವರೂಪ ಇಲ್ಲಿದೆವಿಭಿನ್ನ ಮಾದರಿಯಲ್ಲಿ ಮುಂದಿನ ಪುರುಷರ ಟಿ20 ವಿಶ್ವಕಪ್; ಅದರ ಸ್ವರೂಪ ಇಲ್ಲಿದೆ

ಕರ್ನಾಟಕ ಆಡುವ ಬಳಗ: ಮಯಾಂಕ್ ಅಗರ್ವಾಲ್ (ನಾಯಕ), ಮನೀಶ್ ಪಾಂಡೆ, ಮನೋಜ್ ಭಾಂಡಗೆ, ರವಿಕುಮಾರ್ ಸಮರ್ಥ್, ನಿಕಿನ್ ಜೋಸ್, ಕೃಷ್ಣಪ್ಪ ಗೌತಮ್, ಶರತ್ ಬಿಆರ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ವಾಸುಕಿ ಕೌಶಿಕ್, ರೋನಿತ್ ಮೋರ್, ವಿಧ್ವತ್ ಕಾವೇರಪ್ಪ
ಬೆಂಚ್: ಮುರಳೀಧರ ವೆಂಕಟೇಶ್, ನಿಹಾಲ್ ಉಳ್ಳಾಲ್, ಅಭಿನವ್ ಮನೋಹರ್, ಜಗದೀಶ ಸುಚಿತ್

ರಾಜಸ್ಥಾನ: ಅಭಿಜೀತ್ ತೋಮರ್, ಯಶ್ ಕೊಠಾರಿ, ಮಹಿಪಾಲ್ ಲೋಮ್ರೋರ್, ಅಶೋಕ್ ಮೆನಾರಿಯಾ (ನಾಯಕ), ಆದಿತ್ಯ ಗರ್ವಾಲ್, ಕುನಾಲ್ ಸಿಂಗ್ ರಾಥೋರ್ (ವಿಕೆಟ್ ಕೀಪರ್), ರವಿ ಬಿಷ್ಣೋಯ್, ಸಾಹಿಲ್ ದಿವಾನ್, ಅನಿಕೇತ್ ಚೌಧರಿ, ಕಮಲೇಶ್ ನಾಗರಕೋಟಿ, ಶುಭಂ ಶರ್ಮಾ
ಬೆಂಚ್: ಮನೇಂದರ್ ನರೇಂದರ್ ಸಿಂಗ್, ರಾಹುಲ್ ಚಾಹರ್, ಸಲ್ಮಾನ್ ಖಾನ್, ದೀಪಕ್ ಚಾಹರ್, ತನ್ವೀರ್ ಉಲ್-ಹಕ್, ಸಮರ್ಪಿತ್ ಜೋಶಿ, ದೀಪಕ್ ಕರ್ವಾಸರ, ಮೋಹಿತ್ ಜೈನ್

Story first published: Wednesday, November 23, 2022, 17:17 [IST]
Other articles published on Nov 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X