ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Vijay Hazare Trophy: ರುತುರಾಜ್, ಬಾವ್ನೆ ಶತಕ; ಅಸ್ಸಾಂ ವಿರುದ್ಧ ಗೆದ್ದ ಮಹಾರಾಷ್ಟ್ರ ಫೈನಲ್‌ಗೆ

Vijay Hazare Trophy 2022: Maharashtra Reached The Final By Beating Assam In The Semi-final

ಬುಧವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2022ರ ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವು ಅಸ್ಸಾಂ ವಿರುದ್ಧ 12 ರನ್‌ಗಳ ಜಯ ಸಾಧಿಸುವ ಮೂಲಕ ಫೈನಲ್ ತಲುಪಿದ್ದು, ಡಿಸೆಂಬರ್ 2ರ ಶುಕ್ರವಾರ ಇದೇ ಮೈದಾನದಲ್ಲಿ ನಡೆಯುವ ಪ್ರಶಸ್ತಿ ಹಣಾಹಣಿಯಲ್ಲಿ ಸೌರಾಷ್ಟ್ರ ತಂಡದ ವಿರುದ್ಧ ಸೆಣಸಾಡಲಿದೆ.

ಮಹಾರಾಷ್ಟ್ರ ಪರ ಬ್ಯಾಟಿಂಗ್‌ನಲ್ಲಿ ಮತ್ತೊಮ್ಮೆ ಮಿಂಚಿದ ರುತುರಾಜ್ ಗಾಯಕ್ವಾಡ್ ಮತ್ತು ಅಂಕಿತ್ ಬಾವ್ನೆ ಭರ್ಜರಿ ಶತಕ ಬಾರಿಸಿ ಮಿಂಚಿದರು.

Vijay Hazare Trophy: ಸೆಮಿಫೈನಲ್‌ನಲ್ಲಿ ಸೋತ ಕರ್ನಾಟಕ; ಫೈನಲ್‌ಗೇರಿದ ಸೌರಾಷ್ಟ್ರVijay Hazare Trophy: ಸೆಮಿಫೈನಲ್‌ನಲ್ಲಿ ಸೋತ ಕರ್ನಾಟಕ; ಫೈನಲ್‌ಗೇರಿದ ಸೌರಾಷ್ಟ್ರ

ಮೊದಲು ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ, ನಾಯಕ ರುತುರಾಜ್ ಗಾಯಕ್ವಾಡ್ ಅವರು 126 ಎಸೆತಗಳಲ್ಲಿ 168 ರನ್ ಗಳಿಸುವುದರೊಂದಿಗೆ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಪರಾಕ್ರಮ ಮುಂದುವರೆಸಿದರು. ಇನ್ನು ಅಂಕಿತ್ ಬಾವ್ನೆ 89 ಎಸೆತಗಳಲ್ಲಿ 110 ರನ್ ಗಳಿಸಿ ಗಾಯಕ್ವಾಡ್ ಜೊತೆ 207 ರನ್ ಜೊತೆಯಾಟದಿಂದ ಮಹಾರಾಷ್ಟ್ರವನ್ನು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 350 ರನ್‌ಗೆ ತಲುಪಿಸಿದರು.

Vijay Hazare Trophy 2022: Maharashtra Reached The Final By Beating Assam In The Semi-final

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಅಸ್ಸಾಂ ತಂಡ ರಿಷವ್ ದಾಸ್ (53), ಸಿಬ್‌ಶಂಕರ್ ರಾಯ್ (78) ಮತ್ತು ಸ್ವರೂಪಮ್ ಪುರ್ಕಾಯಸ್ಥ (95) ರನ್ ನೆರವಿನಿಂದ ಗೆಲುವಿನ ಸಮೀಪ ಬಂದರೂ, ಅಂತಿಮವಾಗಿ ಅಸ್ಸಾಂ 8 ವಿಕೆಟ್‌ಗೆ 338 ರನ್‌ಗೆ ಹೋರಾಟ ಕೊನೆಗೊಂಡಿತು.

16ನೇ ಓವರ್‌ನಲ್ಲಿ 4 ವಿಕೆಟ್‌ಗೆ 103 ರನ್‌ಗೆ ಕುಸಿದ ನಂತರ, ಸಿಬ್‌ಶಂಕರ್ ಮತ್ತು ಸ್ವರೂಪಮ್ 133 ರನ್ ಜೊತೆಯಾಟ ನೀಡಿ ಅಸ್ಸಾಂ ತಂಡವನ್ನು ಗೆಲುವಿನ ದಾರಿಯಲ್ಲಿ ಇರಿಸಿದ್ದರು. ಆದರೆ, 36ನೇ ಓವರ್‌ನಲ್ಲಿ ಸಿಬ್‌ಶಂಕರ್ ಅವರ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ, ಅಸ್ಸಾಂ ಒಂದರ ಹಿಂದೆ ಒಂದು ವಿಕೆಟ್‌ ಕಳೆದುಕೊಂಡು ಸೋಲಿನ ದಾರಿ ಹಿಡಿಯಿತು.

ICC ODI Ranking: ಬ್ಯಾಟಿಂಗ್‌ನಲ್ಲಿ ಏರಿಕೆ ಕಂಡ ಗಿಲ್, ಸ್ಯಾಮ್ಸನ್; ಕೊಹ್ಲಿ, ರೋಹಿತ್ ಸ್ಥಾನವೇನು?ICC ODI Ranking: ಬ್ಯಾಟಿಂಗ್‌ನಲ್ಲಿ ಏರಿಕೆ ಕಂಡ ಗಿಲ್, ಸ್ಯಾಮ್ಸನ್; ಕೊಹ್ಲಿ, ರೋಹಿತ್ ಸ್ಥಾನವೇನು?

ರಾಜವರ್ಧನ್ ಹಂಗರ್ಗೇಕರ್ ಮಹಾರಾಷ್ಟ್ರ ಪತ ಅತ್ಯಂತ ಯಶಸ್ವಿ ಬೌಲರ್ ಆಗಿದ್ದು, 10 ಓವರ್‌ಗಳಲ್ಲಿ 65 ರನ್ ನೀಡಿ 4 ವಿಕೆಟ್ ಕಿತ್ತರು. ಇನ್ನು ಮನೋಜ್ ಇಂಗಳೆ 51 ರನ್‌ಗೆ 2 ವಿಕೆಟ್, ಸತ್ಯಜೀತ್ 57 ರನ್‌ಗೆ 1 ವಿಕೆಟ್ ಮತ್ತು ಶಂಶುಜಾಮಾ ಕಾಜಿ 61 ರನ್‌ಗೆ 1 ವಿಕೆಟ್ ಪಡೆದು ಮಿಂಚಿದರು.

Vijay Hazare Trophy 2022: Maharashtra Reached The Final By Beating Assam In The Semi-final

ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ಅಜೇಯ 220 ರನ್ ಗಳಿಸಿದ ವೇಳೆ ಒಂದೇ ಓವರ್‌ನಲ್ಲಿ 43 ರನ್‌ಗಳ ದೋಚಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದ ರುತುರಾಜ್ ಗಾಯಕ್ವಾಡ್ ಮತ್ತೆ ಅದೇ ಧಾಟಿಯಲ್ಲಿ ಬ್ಯಾಟಿಂಗ್ ಮಾಡಿದರು. ಅಸ್ಸಾಂ ಬೌಲರ್‌ಗಳನ್ನು ಬೆಂಡೆತ್ತಿದ ಗಾಯಕ್ವಾಡ್ ಅವರ ಇನ್ನಿಂಗ್ಸ್‌ನಲ್ಲಿ 18 ಬೌಂಡರಿಗಳು ಮತ್ತು ಆರು ಸಿಕ್ಸರ್‌ಗಳು ಸೇರಿದ್ದವು. ನಾಲ್ಕು ಪಂದ್ಯಗಳಲ್ಲಿ ರುತುರಾಜ್ ಗಾಯಕ್ವಾಡ್ ಮೂರನೇ ಶತಕ ಬಾರಿಸಿರುವುದು ಗಮನಾರ್ಹ.

ಇನ್ನು ಅಂಕಿತ್ ಬಾವ್ನೆ ಕೂಡ 10 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ತನ್ನ ಎರಡನೇ ಶತಕವನ್ನು ಗಳಿಸಿದರು. ಅಸ್ಸಾಂ ಬೌಲರ್‌ಗಳ ಪೈಕಿ ಮುಖ್ತಾರ್ ಹುಸೇನ್ 42 ರನ್‌ಗೆ 3 ವಿಕೆಟ್ ಪಡೆದು ಮಿಂಚಿದರು.

Story first published: Wednesday, November 30, 2022, 22:42 [IST]
Other articles published on Nov 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X