ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ: ಕೇರಳ ವೇಗಿ ಶ್ರೀಶಾಂತ್ ಅಪರೂಪದ ದಾಖಲೆ

Vijay Hazare Trophy: 5 wicket haul Sreesanth against Uttar Pradesh

ಬೆಂಗಳೂರು: ಬೆಂಗಳೂರಿನ ಕೆಎಸ್‌ಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ (ಫೆಬ್ರವರಿ 22) ನಡೆದ ವಿಜಯ್ ಹಜಾರೆ ಟ್ರೋಫಿ ಎಲೈಟ್ ಗ್ರೂಪ್ ಸಿ, ರೌಂಡ್ 2 ಪಂದ್ಯದಲ್ಲಿ ಕೇರಳದ ವೇಗಿ ಎಸ್‌ ಶ್ರೀಶಾಂತ್ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಉತ್ತರಪ್ರದೇಶದ ವಿರುದ್ಧದ ಪಂದ್ಯದಲ್ಲಿ ಶ್ರೀಶಾಂತ್‌ ಹೆಚ್ಚು ವಿಕೆಟ್ ಪಡೆದು ದಾಖಲೆ ತನ್ನ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.

ಟಿಆರ್‌ಎಸ್‌ ಎಂಎಲ್‌ಎಯಿಂದ ಐಪಿಎಲ್ ಪಂದ್ಯಗಳ ನಿಲ್ಲಿಸುವ ಬೆದರಿಕೆ!ಟಿಆರ್‌ಎಸ್‌ ಎಂಎಲ್‌ಎಯಿಂದ ಐಪಿಎಲ್ ಪಂದ್ಯಗಳ ನಿಲ್ಲಿಸುವ ಬೆದರಿಕೆ!

ಸ್ಪಾಟ್ ಫಿಕ್ಸಿಂಗ್ ಆರೋಪದಡಿಯಲ್ಲಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)ನಿಂದ ನಿಷೇಧಿಸಲ್ಪಟ್ಟಿದ ಶ್ರೀಶಾಂತ್, ಇತ್ತೀಚೆಗಷ್ಟೇ 7 ವರ್ಷಗಳ ನಿಷೇಧ ಶಿಕ್ಷೆ ಪೂರೈಸಿ ಮತ್ತೆ ಕ್ರಿಕೆಟ್‌ ಮೈದಾನಕ್ಕೆ ಇಳಿದಿದ್ದರು. ಇದೇ ವರ್ಷ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲೂ ಶ್ರೀಶಾಂತ್‌ ಕೇರಳ ಪರ ಆಡಿ ವಿಕೆಟ್‌ ಪಡೆದಿದ್ದರು.

ಶ್ರೀಶಾಂತ್ ಹೆಸರಿಲ್ಲಿ ದಾಖಲೆ

ಶ್ರೀಶಾಂತ್ ಹೆಸರಿಲ್ಲಿ ದಾಖಲೆ

ಸೋಮವಾರದ ಪಂದ್ಯದಲ್ಲಿ 38ರ ಹರೆಯದ ಶ್ರೀಶಾಂತ್‌ ಉತ್ತರ ಪ್ರದೇಶ ವಿರುದ್ಧ 65 ರನ್‌ಗೆ 5 ವಿಕೆಟ್‌ ಪಡೆದಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಒಟ್ಟು ಎರಡು ಪಂದ್ಯಗಳನ್ನಾಡಿರುವ ಶ್ರೀಶಾಂತ್ 7 ವಿಕೆಟ್ (2+5) ವಿಕೆಟ್ ಪಡೆದಿದ್ದಾರೆ. ಕೇರಳ ತಂಡದಲ್ಲಿ ಮುಂಚೂಣಿ ಬೌಲರ್ ಆಗಿ ಕಾಣಿಸಿಕೊಂಡಿರುವ ಶ್ರೀಶಾಂತ್, ವಿಜಯ್ ಹಜಾರೆಯಲ್ಲಿ 5+ ವಿಕೆಟ್ ಪಡೆದ ಹಿರಿಯ ಆಟಗಾರರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. 15 ವರ್ಷಗಳ ಹಿಂದೆ ಅಂದರೆ 2006ರಲ್ಲೂ ಶ್ರೀಶಾಂತ್ 5 ವಿಕೆಟ್‌ಗಳ ಸಾಧನೆ ಮಾಡಿದ್ದರು.

ಐಪಿಎಲ್‌ನಲ್ಲಿ ಕಡೆಗಣನೆ

ಐಪಿಎಲ್‌ನಲ್ಲಿ ಕಡೆಗಣನೆ

ಈ ಬಾರಿಯ ಐಪಿಎಲ್‌ಗಾಗಿ ಶ್ರೀಶಾಂತ್ ಕೂಡ ಹರಾಜು ಆಟಗಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದರು. ಆದರೆ ಹರಾಜಿಗಾಗಿ ಅಂತಿಮಗೊಳಿಸಲಾಗಿದ್ದ ಪಟ್ಟಿಯಲ್ಲಿದ್ದ 292 ಮಂದಿಯಲ್ಲಿ ಶ್ರೀಶಾಂತ್ ಹೆಸರು ಇರಲಿಲ್ಲ. ಯಾವುದೇ ಫ್ರಾಂಚೈಸಿ ಅಂತಿಮ ಪಟ್ಟಿಗೆ ಶ್ರೀಶಾಂತ್‌ ಅವರನ್ನು ಹೆಸರಿಸಿರಲಿಲ್ಲ. ಹೀಗಾಗಿ ಈ ಬಾರಿಯ ಐಪಿಎಲ್‌ ಸೀಸನ್‌ನಲ್ಲಿ ಶ್ರೀಶಾಂತ್ ಕಡೆಗಣಿಸಲ್ಪಟ್ಟಿದ್ದಾರೆ.

ಯುಪಿ ಭರ್ಜರಿ ರನ್

ಯುಪಿ ಭರ್ಜರಿ ರನ್

ಟಾಸ್ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟಿದ್ದ ಉತ್ತರಪ್ರದೇಶ ತಂಡ, ಅಭಿಷೇಕ್ ಗೋಸ್ವಾಮಿ 54, ಕರಣ್ ಶರ್ಮಾ 34, ಪ್ರಿಯಂ ಗರ್ಗ್ 57, ರಿಂಕು ಸಿಂಗ್ 26, ಅಕ್ಷದೀಪ್ ನಾತ್ 68, ಉಪೇಂದ್ರ ಯಾದವ್ 12, ಸಮೀರ್ ಚೌಧರಿ 10 ರನ್‌ನೊಂದಿಗೆ 49.4 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 283 ರನ್ ಗಳಿಸಿತ್ತು.

Story first published: Monday, February 22, 2021, 14:59 [IST]
Other articles published on Feb 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X