ವಿಜಯ್ ಹಜಾರೆ ಟ್ರೋಫಿ: ತಮಿಳುನಾಡನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಹಿಮಾಚಲ ಪ್ರದೇಶ

ವಿಜಯ್ ಹಜಾರೆ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಹಿಮಾಚಲ ಪ್ರದೇಶ ತಂಡ ಭರ್ಜರಿ ಪ್ರದರ್ಶನ ನೀಡಿ ತಮಿಳುನಾಡು ತಂಡದ ವಿರುದ್ಧ ಗೆಲುವು ಸಾಧಿಸಿದ್ದು ನೂತನ ಚಾಂಪಿಯನ್ ಎನಿಸಿಕೊಂಡಿದೆ. ಈ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿ ಎರಡನೇ ಟೂರ್ನಿಯ ಚಾಂಪಿಯನ್ ಪಟ್ಟಕ್ಕೇರುವ ತಮಿಳುನಾಡು ತಂಡದ ಕನಸಿಕೆ ಹಿಮಾಚಲ ಪ್ರದೇಶ ತಂಡ ಅಡ್ಡಿಯಾಗಿದ್ದು ಇದೇ ಮೊದಲ ಬಾರಿಗೆ ಟೂರ್ನಿಯ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಹೈಸ್ಕೋರಿಂಗ್ ಪಂದ್ಯದಲ್ಲಿ ಎರಡು ತಂಡಗಳ ಬ್ಯಾಟರ್‌ಗಳು ಕೂಡ ಅದ್ಭುತವಾದ ಪ್ರದರ್ಶನ ನೀಡಿದರು. ಮೊದಲಿಗೆ ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡ ಹಿಮಾಚಲ ಪ್ರದೇಶ ತಂಡಕ್ಕೆ ಬೃಹತ್ ಮೊತ್ತದ ಗುರಿಯನ್ನು ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಹಿಮಾಚಲ ಪ್ರದೇಶ ಅಮೋಘವಾಗಿ ಬೆನ್ನಟ್ಟುತ್ತಾ ಮುನ್ನುಗ್ಗಿತು. ಅಂತಿಮವಾಗಿ ಪಂದ್ಯವನ್ನು ಮಂದಬೆಳಕಿನ ಕಾರಣದಿಂದಾಗಿ ಮೊಟಕುಗೊಳಸಿದ್ದು ವಿಜೆಡಿ ನಿಯಮದ ಆಧಾರದಲ್ಲಿ ಹಿಮಾಚಲ ಪ್ರದೇಶ ತಂಡ ಗೆದ್ದು ಬೀಗಿತು. ಈ ಮೂಲಕ ವಿಜಯ್ ಹಜಾರೆ ಟೂರ್ನಿಯ ಚಾಂಪಿಯನ್ ಪಟ್ಟಕ್ಕೇರಿದೆ.

ಟೀಮ್ ಇಂಡಿಯಾದಲ್ಲಿ ಆ ಅದ್ಭುತ ಟ್ರೆಂಡ್ ಹುಟ್ಟುಹಾಕಿದ್ದೇ ಕೊಹ್ಲಿ ಎಂದು ಹೊಗಳಿದ ದ್ರಾವಿಡ್ಟೀಮ್ ಇಂಡಿಯಾದಲ್ಲಿ ಆ ಅದ್ಭುತ ಟ್ರೆಂಡ್ ಹುಟ್ಟುಹಾಕಿದ್ದೇ ಕೊಹ್ಲಿ ಎಂದು ಹೊಗಳಿದ ದ್ರಾವಿಡ್

ಮೊದಲಿಗೆ ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡ ಆರಂಭದಲ್ಲಿ ಭಾರೀ ಹಿನ್ನಡೆಯನ್ನು ಅನುಭವಿಸಿತ್ತು. ತಂಡ 40 ರನ್‌ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯನ್ನು ಎದುರಿಸಿತ್ತು. ಆದರೆ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅವರ ಸಮಯೋಚಿತ ಪ್ರದರ್ಶನದಿಂದ ತಮಿಳುನಾಡಿ ಬೃಹತ್ ಮೊತ್ತವನ್ನು ದಾಖಲಿಸಿತು. ಅವರಿಗೆ ಬಾಬಾ ಇಂದ್ರಚಿತ್ ಕೂಡ ಉತ್ತಮ ಸಾಥ್ ನೀಡಿದರು. ಈ ಜೋಫಡಿ ಬರೊಬ್ಬರಿ 202 ರನ್‌ಗಳ ಜೊತೆಯಾಟವನ್ನು ನೀಡಿತ್ತು. ದಿನೇಶ್ ಕಾರ್ತಿಕ್ 116 ರನ್‌ಗಳಿಸಿದರೆ ಇಂದ್ರಜಿತ್ 80 ರನ್‌ಗಳ ಕೊಡುಗೆ ನೀಡಿದರು. ನಂತರ ಶಾರೂಖ್‌ಖಾನ್ ಕೂಡ ಸ್ಪೋಟಕ ಪ್ರದರ್ಶನ ನೀಡಿ 42 ರನ್‌ ಸಿಡಿಸಿದರು.

ಈ ಮೊತ್ತವನ್ನು ಬೆನ್ನಟ್ಟಿದ ಹಿಮಾಚಲ ಪ್ರದೇಶ ತಂಡಕ್ಕೆ ಶುಭಮ್ ಅರೋರಾ ಅವರ ಅಜೇಯ ಶತಕ ಗೆಲುವಿಗೆ ನೆರವಾಯಿತು. ಆರಂಭಿಕನಾಗಿ ಕಣಕ್ಕಿಳಿದ ಅರೋರಾ ಅಂತಿಮಹಂತದವರೆಗೂ ಹೋರಾಡಿ ತಂಡದ ಗೆಲುವನ್ನು ಸಾರಿದರು. ಅಮಿತ್ ಕುಮಾರ್ 74 ರನ್‌ ಸಿಡಿಸಿದರೆ ನಾಯಕ ರಿಷಿ ಧವನ್ 42 ರನ್‌ಗಳಿಸಿ ಅಜೇಯವಾಗಿ ಉಳಿದರು. ಈ ಮೂಲಕ ಹಿಮಾಚಲ ಪ್ರದೇಶ ತಂಡ 11 ರನ್‌ಗಳಿಂದ ವಿಜೆಡಿ ನಿಯಮದಲ್ಲಿ ಗೆಲುವು ಸಾಧಿಸಿದೆ.

ಹಾರ್ದಿಕ್ ಪಾಂಡ್ಯ ಮಾಡಿದ ಆ ಒಂದು ಕೆಲಸಕ್ಕೆ ಕಿಡಿಕಾರಿದ ನೆಟ್ಟಿಗರು: ವಿಡಿಯೋ ವೈರಲ್ಹಾರ್ದಿಕ್ ಪಾಂಡ್ಯ ಮಾಡಿದ ಆ ಒಂದು ಕೆಲಸಕ್ಕೆ ಕಿಡಿಕಾರಿದ ನೆಟ್ಟಿಗರು: ವಿಡಿಯೋ ವೈರಲ್

ಹಿಮಾಚಲ ಪ್ರದೇಶ ಆಡುವ ಬಳಗ: ಶುಭಂ ಅರೋರಾ (ವಿಕೆಟ್ ಕೀಪರ್), ಪ್ರಶಾಂತ್ ಚೋಪ್ರಾ, ದಿಗ್ವಿಜಯ್ ರಂಗಿ, ನಿಖಿಲ್ ಗಂಗ್ಟಾ, ಅಮಿತ್ ಕುಮಾರ್, ರಿಷಿ ಧವನ್ (ನಾಯಕ), ಆಕಾಶ್ ವಸಿಷ್ಟ್, ಪಂಕಜ್ ಜೈಸ್ವಾಲ್, ಮಯಾಂಕ್ ದಾಗರ್, ವಿನಯ್ ಗಲೇಟಿಯಾ, ಸಿದ್ಧಾರ್ಥ್ ಶರ್ಮಾ
ಬೆಂಚ್: ಗುರ್ವಿಂದರ್ ಸಿಂಗ್, ಸುಮೀತ್ ವರ್ಮಾ, ಪ್ರಿಯಾಂಶು ಖಂಡೂರಿ, ಆಯುಷ್ ಜಮ್ವಾಲ್, ಅರ್ಪಿತ್ ಗುಲೇರಿಯಾ, ವೈಭವ್ ಅರೋರಾ, ಅಮಿತ್ ಠಾಕೂರ್

Virat ಟೈಮ್ ಮುಗೀತು ಈಗ Ganguly ಟೈಮ್ ಅಂತಾ ರವಿ ಶಾಸ್ತ್ರಿ ಹೇಳಿದ್ಯಾಕೆ? | Oneindia Kannada

ತಮಿಳುನಾಡು ಆಡುವ ಬಳಗ: ಬಾಬಾ ಅಪರಾಜಿತ್, ಎನ್ ಜಗದೀಸನ್, ವಿಜಯ್ ಶಂಕರ್ (ನಾಯಕ), ಬಾಬಾ ಇಂದ್ರಜಿತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರುಖ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಆರ್ ಸಿಲಂಬರಸನ್, ಮುರುಗನ್ ಅಶ್ವಿನ್, ಸಂದೀಪ್ ವಾರಿಯರ್
ಬೆಂಚ್: ಎಂ ಮೊಹಮ್ಮದ್, ಕೌಶಿಕ್ ಗಾಂಧಿ, ಸಂಜಯ್ ಯಾದವ್, ಹರಿ ನಿಶಾಂತ್, ಲಕ್ಷ್ಮೇಶ ಸೂರ್ಯಪ್ರಕಾಶ್, ಜಗತೀಸನ್ ಕೌಸಿಕ್, ಗಂಗಾ ಶ್ರೀಧರ್ ರಾಜು, ಪಿ ಸರವಣ ಕುಮಾರ್, ಸಾಯಿ ಸುದರ್ಶನ್, ಮಣಿಮಾರನ್ ಸಿದ್ಧಾರ್ಥ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, December 26, 2021, 17:35 [IST]
Other articles published on Dec 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X