ವಿಜಯ್ ಹಜಾರೆ: ಕರ್ನಾಟಕ ವಿರುದ್ಧ ಗೆದ್ದರೂ ಟೂರ್ನಿಯಿಂದ ಹೊರಬಿದ್ದ ಬಂಗಾಳ, ಮನೀಶ್ ಬಳಗದ ಕನಸು ಜೀವಂತ

Vijay Hazare Trophy: Karnataka lost by 4 wickets against bengal
Photo Credit: ಸಾಂದರ್ಭಿಕ ಚಿತ್ರ

ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ಬಂಗಾಳದ ವಿರುದ್ಧ ಸೋಲು ಅನುಭವಿಸಿದೆ. ಈ ಮೂಲಕ ಕರ್ನಾಟಕ ತಂಡ ಅಂಕಪಟ್ಟಿಯಲ್ಲಿ ಎಲೈಟ್ ಗ್ರೂಪ್ 'ಬಿ'ಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು ಪ್ರೀಕ್ವಾರ್ಟರ್‌ಫೈನಲ್ ಹೋರಾಟವನ್ನು ನಡೆಸಿ ಗೆದ್ದ ಬಳಿಕ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಳ್ಳಲಿದೆ. ಮತ್ತೊಂದೆಡೆ ತಮಿಳು ನಾಡು ತಂಡ ಕೂಡ ಇಂದಿನ ಪಂದ್ಯದಲ್ಲಿ ಬರೋಡಾ ವಿರುದ್ಧ ಹೀನಾಯ ಸೋಲು ಕಂಡಿತಾದರೂ ನೆಟ್‌ರನ್‌ರೇಟ್‌ನಲ್ಲಿ ಕರ್ನಾಟಕಕ್ಕಿಂತ ಮುಂದಿದ್ದ ಕಾರಣ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ತಮಿಳು ನಾಡು ತಂಡ ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಇನ್ನು ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ರಾಜಸ್ಥಾನ ಮುಖಾಮುಖಿಯಾಗಲಿದ್ದು ಈ ಪಂದ್ಯ ಡಿಸೆಂಬರ್ 19ರಂದು ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆಯಲಿದೆ. ಇತ್ತ ಬಂಗಾಳ ತಂಡ ಕರ್ನಾಟಕದ ವಿರುದ್ಧ ಗೆಲುವು ಸಾಧಿಸಿದರೂ ಟೂರ್ನಿಯಿಂದ ಹೊರಬಿದ್ದಿದೆ.

ಸಂಪೂರ್ಣ ಸ್ಕೋರ್‌ ವಿವರ ಇಲ್ಲಿದೆ:

1
9914-nonopta-80

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿರುವ ವಿರಾಟ್ ಕೊಹ್ಲಿ: ವರದಿದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿರುವ ವಿರಾಟ್ ಕೊಹ್ಲಿ: ವರದಿ

ಇನ್ನು ಇಂದಿನ ಬೆಂಗಾಲ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಉತ್ತಮ ಹೋರಾಟವನ್ನು ನಡೆಸಿದೆ. ಕರ್ನಾಟಕದ ಪರವಾಗಿ ನಾಯಕ ಮನೀಶ್ ಪಾಂಡೆ 90 ರನ್‌ಗಳ ಕೊಡುಗೆ ನೀಡುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ರೋಹನ್ ಕದಮ್ 37 ರನ್‌ಗಳ ಕೊಡುಗೆ ನೀಡಿದರು. ಅಂತಿಮ ಹಂತದಲ್ಲಿ ಪ್ರವೀಣ್ ದುಬೆ ಕೂಡ 37 ರನ್‌ಗಳ ಕೊಡುಗೆ ನೀಡುವ ಮೂಲಕ ಕರ್ನಾಟಕ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 252 ರನ್‌ಗಳಿಸಿತು.

ಈ ಮೊತ್ತವನ್ನು ಬೆನ್ನಟ್ಟಿದ ಬಂಗಾಳ ತಂಡಕ್ಕೆ ಉತ್ತಮ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ 51 ರನ್‌ಗಳ ಜೊತೆಯಾಟವನ್ನು ಪಡೆಯಿತು. ಅದರಲ್ಲೂ ಅಭಿಷೇಕ್ ದಾಸ್ ನೀಡಿದ ಪ್ರದರ್ಶನ ಅದ್ಭುತವಾಗಿತ್ತು. ಅಭಿಷೇಕ್ ದಾಸ್ 58 ರನ್‌ಗಳಿಸಿ ಔಟಾದರು. ನಂತರ ಮಧ್ಯಮ ಕ್ರಮಾಂಕದಲ್ಲಿಯೂ ಬಂಗಾಳಕ್ಕೆ ಉತ್ತಮ ಜೊತೆಯಾಟ ಲಭ್ಯವಾಯಿತು. ನಾಯಕ ಸಂದೀಪ್ ಚಟರ್ಜೀ ಹಾಗೂ ಋತ್ವಿಕ್ ರಾಯ್ ಚೌಧರಿ ಶತಕದ ಜೊತೆಯಾಟ ನೀಡುವ ಮೂಲಕ ಕರ್ನಾಟಕ್ಕಕೆ ಭಾರೀ ಹಿನ್ನಡೆಯುಂಟು ಮಾಡಿದರು. ಈ ಮೂಲಕ ಬಂಗಾಳ ಗೆಲುವಿಗೆ ಹತ್ತಿರವಾಯಿತು. ಅಂತಿಮವಾಗಿ ಬಂಗಾಳ 48.3 ಓವರ್‌ಗಳಲ್ಲಿ ಕರ್ನಾಟಕ ತಂಡ ನೀಡಿದ ಗುರಿಯನ್ನು ಮೀರಿ ಗೆಲುವನ್ನಾಚರಿಸಿತು. ಈ ಸಂದರ್ಭದಲ್ಲಿ 6 ವಿಕೆಟ್ ಕಳೆದುಕೊಂಡಿದ್ದ ಬಂಗಾಳ 4 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ. ಆದರೆ ಬಂಗಾಳ ಕರ್ನಾಟಕದ ವಿರುದ್ಧ ಗೆದ್ದರೂ ಟೂರ್ನಿಯಿಂದ ಹೊರ ಬಿದ್ದಿದೆ.

ದಕ್ಷಿಣ ಆಫ್ರಿಕಾ ಪ್ರವಾಸವನ್ನ ರದ್ದು ಮಾಡಬೇಕೆ? ಟೀಂ ಇಂಡಿಯಾ ಸ್ಥಿತಿ ಕಂಡು ಆಕಾಶ್ ಚೋಪ್ರಾ ಪ್ರಶ್ನೆ!ದಕ್ಷಿಣ ಆಫ್ರಿಕಾ ಪ್ರವಾಸವನ್ನ ರದ್ದು ಮಾಡಬೇಕೆ? ಟೀಂ ಇಂಡಿಯಾ ಸ್ಥಿತಿ ಕಂಡು ಆಕಾಶ್ ಚೋಪ್ರಾ ಪ್ರಶ್ನೆ!

ಕರ್ನಾಟಕ ಆಡುವ ಬಳಗ: ರವಿಕುಮಾರ್ ಸಮರ್ಥ್, ರೋಹನ್ ಕದಮ್, ಕೃಷ್ಣಮೂರ್ತಿ ಸಿದ್ಧಾರ್ಥ್, ಮನೀಶ್ ಪಾಂಡೆ (ನಾಯಕ), ಕರುಣ್ ನಾಯರ್, ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್), ಜಗದೀಶ ಸುಚಿತ್, ವಿ ಕೌಶಿಕ್, ಪ್ರವೀಣ್ ದುಬೆ, ಕೆಸಿ ಕಾರಿಯಪ್ಪ, ಪ್ರತೀಕ್ ಜೈನ್
ಬೆಂಚ್: ವೆಂಕಟೇಶ ಮುರಳೀಧರ, ದೇಗಾ ನಿಶ್ಚಲ್, ಶ್ರೇಯಸ್ ಗೋಪಾಲ್, ವಿಜಯಕುಮಾರ್ ವೈಶಾಕ್, ಅಭಿನವ್ ಮನೋಹರ್, ಶರತ್ ಬಿಆರ್, ರಿತೇಶ್ ಭಟ್ಕಳ್, ದರ್ಶನ್ ಎಂ.ಬಿ, ವಿದ್ಯಾಧರ್ ಪಾಟೀಲ್

ಬಂಗಾಳ ಆಡುವ ಬಳಗ: ಅಭಿಷೇಕ್ ದಾಸ್, ಸುದೀಪ್ ಚಟರ್ಜಿ (ನಾಯಕ), ಅನುಸ್ತಪ್ ಮಜುಂದಾರ್, ರಿತ್ವಿಕ್ ಚೌಧರಿ, ಶಹಬಾಜ್ ಅಹ್ಮದ್, ರಿಟಿಕ್ ಚಟರ್ಜಿ, ಸುವನ್ಕರ್ ಬಾಲ್ (ವಿಕೆಟ್ ಕೀಪರ್), ಪ್ರದೀಪ್ತ ಪ್ರಮಾಣಿಕ್, ರಂಜೋತ್ ಸಿಂಗ್, ಆಕಾಶ್ ದೀಪ್, ಮುಖೇಶ್ ಕುಮಾರ್
ಬೆಂಚ್: ಶ್ರೀವತ್ಸ್ ಗೋಸ್ವಾಮಿ, ಸಯನ್ ಮೊಂಡಲ್, ಸಯಾನ್ ಘೋಷ್, ಸುಜಿತ್ ಕುಮಾರ್ ಯಾದವ್, ಗೀತ್ ಪುರಿ, ಸುಮಂತ ಗುಪ್ತಾ, ಕರಣ್ ಲಾಲ್, ಕೈಫ್ ಅಹ್ಮದ್, ಮೊಹಮ್ಮದ್ ಕೈಫ್

Ganguly Statement: Rohit Sharma vs Virat Kohli ..ದಾದಾ ಸಪೋರ್ಟ್ ಯಾರಿಗೆ ಗೊತ್ತಾ!! | Oneindia Kannada

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, December 14, 2021, 19:06 [IST]
Other articles published on Dec 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X