ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹರಾರೆ ಟ್ರೋಫಿ: ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಝಾರ್ಖಂಡ್ ವಿರುದ್ಧ ಗೆದ್ದ ಕರ್ನಾಟಕ

Vijay Hazare Trophy: Karnataka won against Jharkhand in pre quarter final by 5 wickets

ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದು ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡಕ್ಕೆ ಝಾರ್ಖಂಡ್ ತಂಡ ಎದುರಾಳಿಯಾಗಿ ಕಣಕ್ಕಿಳಿದಿತ್ತು. ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಕರ್ನಾಟಕ ತಂಡ ಝಾರ್ಖಂಡ್ ಪಡೆಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಕರ್ನಾಟಕ ಈ ಮೊತ್ತವನ್ನು ಐದು ವಿಕೆಟ್‌ಗಳನ್ನು ಕಳೆದುಕೊಂಡು ಬೆನ್ನಟ್ಟುವಲ್ಲಿ ಯಶಸ್ವಿಯಾಗಿದೆ.

ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ದುಕೊಂಡ ಕರ್ನಾಟಕ ತಂಡ ನಾಯಕನ ನಿರ್ಧಾರವನ್ನು ಸಮರ್ಥನೆ ಮಾಡಿಕೊಳ್ಳುವಂತೆ ಬೌಲಿಂಗ್ ವಿಭಾಗ ದಾಳಿ ಸಂಘಟಿಸಿತು. ಆರಂಭದಿಂದಲೇ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಕರ್ನಾಟಕ ಎದುರಾಳಿ 1 ರನ್‌ಗಳಿಸುವಷ್ಟರಲ್ಲಿ 2 ಪಡೆಯುವಲ್ಲಿ ಯಶಸ್ವಿಯಾಗಿತ್ತು. ನಂತರ 40 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಝಾರ್ಖಂಡ್ ಮೂರಂಕಿ ದಾಟುವುದು ಕಷ್ಟ ಎಂಬ ಪರಿಸ್ಥಿತಿಯಿತ್ತು. ಆದರೆ ಕುಶಾಗ್ರ ಹಾಗೂ ಅನುಕುಲ್ ರಾಯ್ ಜೋಡಿ ಅದ್ಭುತ ಪ್ರದರ್ಶನ ನೀಡಿ ಝಾರ್ಖಂಡ್ ತಂಡಕ್ಕೆ ಆಸರೆಯಾದರು.

IND vs NZ: ಎರಡನೇ ಪಂದ್ಯದಲ್ಲಿ ಗೆದ್ದರಷ್ಟೇ ಸರಣಿ ಜೀವಂತ, ಸಂಭಾವ್ಯ ಆಡುವ ಬಳಗ, ಪಿಚ್ ಮತ್ತು ಹವಾಮಾನ ವರದಿIND vs NZ: ಎರಡನೇ ಪಂದ್ಯದಲ್ಲಿ ಗೆದ್ದರಷ್ಟೇ ಸರಣಿ ಜೀವಂತ, ಸಂಭಾವ್ಯ ಆಡುವ ಬಳಗ, ಪಿಚ್ ಮತ್ತು ಹವಾಮಾನ ವರದಿ

ಕುಶಾಗ್ರ ಹಾಗೂ ಅನುಕುಲ್ ರಾಯ್ ಜೋಡಿ ಶತಕದ ಜೊತೆಯಾಟ ನೀಡುವ ಮೂಲಕ ಕರ್ನಾಟಕ ತಂಡದ ಬೌಲಿಂಗ್ ವಿಭಾಗಕ್ಕೆ ಸವಾಲಾದರು. ಈ ಜೋಡಿಯನ್ನು ವೆಂಕಟೇಶ್ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಕುಶಾಗ್ರ 74 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ಅನುಕುಲ್ ರಾಯ್ 57 ರನ್‌ಗಳ ಕೊಡುಗೆ ನೀಡಿದರು. ಈ ಜೋಡಿ ಬೇರ್ಪಟ್ಟ ಬಳಿಕ ಮತ್ತೆ ಕರ್ನಾಟಕ ತನ್ನ ಹಿಡಿತವನ್ನು ಬಿಗಿಗೊಳಿಸಿತು. ಹೀಗಾಗಿ 47.1 ಓವರ್‌ಗಳಲ್ಲಿ 187 ರನ್‌ಗಳಿಗೆ ಝಾರ್ಖಂಡ್ ತಂಡ ಆಲೌಟ್ ಆಯಿತು.

ಕರ್ನಾಟಕ ತಂಡ ಬೌಲಿಂಗ್‌ನಲ್ಲಿ ಮತ್ತೊಮ್ಮೆ ಸಂಘಟಿತ ಪ್ರದರ್ಶನ ನೀಡಿ ಮಿಂಚಿದೆ. ವಿದ್ವತ್ ಕಾವೇರಪ್ಪ, ರೋನಿತ್ ಮೋರೆ ಹಾಗೂ ಮುರಳೀಧರ ವೆಂಕಟೇಶ್ ತಲಾ ಮೂರು ವಿಕೆಟ್ ಕಿತ್ತು ಮಿಂಚಿದರೆ ಮನೋಜ್ ಭಾಂಡಗೆ ಒಂದು ವಿಕೆಟ್ ಪಡೆದುಕೊಂಡರು.

ಇನ್ನು ಝಾರ್ಖಂಡ್ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ತಂಡ ನಾಯಕ ಮುಯಾಂಕ್ ಅಗರ್ವಾಲ್ ವಿಕೆಟನ್ನು ಬೇಗನೆ ಕಳೆದುಕೊಂಡಿತ್ತು. ಆದರೆ ರವಿ ಕುಮಾರ್ ಸಮರ್ಥ್ ಹಾಗೂ ನಿಕಿನ್ ಜೋಸ್ ಅದ್ಭುತ ಜೊತೆಯಾಟ ನೀಡಿ ಮಿಂಚಿದರು. ಈ ಇಬ್ಬರು ದಾಂಡಿಗರು ಕೂಡ ಅರ್ಧ ಶತಕದ ಕೊಡುಗೆ ನೀಡಿದ್ದಾರೆ. ನಿಕಿನ್ ಜೋಸ್ ಅಂತಿಮ ಹಂತದವರೆಗೂ ವಿಕೆಟ್ ಕಳೆದುಕೊಳ್ಳದೆ ಅಜೇಯ 63 ರನ್‌ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ರವಿಕುಮಾರ್ 53 ರನ್‌ಗಳ ಕೊಡುಗೆ ನೀಡಿದ್ದಾರೆ.

ಈ ಗೆಲುವಿನಿಂದಿಗೆ ಕರ್ನಾಟಕ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದು ಈ ಹಂತದಲ್ಲಿ ಪಂಜಾಬ್ ತಂಡ ಕರ್ನಾಟಕಕ್ಕೆ ಎದುರಾಳಿಯಾಗಿರಲಿದೆ. ಕ್ವಾರ್ಟರ್‌ಫಯನಲ್ ಪಂದ್ಯ ಸೋಮವಾರ ನಡೆಯಲಿದ್ದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.

IND vs NZ: ಹ್ಯಾಮಿಲ್ಟನ್‌ ಸವಾಲಿನಲ್ಲಿ ಗೆಲ್ಲುತ್ತಾ ಭಾರತ? ಇಲ್ಲಿ ಭಾರತ ಗೆದ್ದಿರುವ ಪಂದ್ಯಗಳೆಷ್ಟು ಗೊತ್ತಾ?IND vs NZ: ಹ್ಯಾಮಿಲ್ಟನ್‌ ಸವಾಲಿನಲ್ಲಿ ಗೆಲ್ಲುತ್ತಾ ಭಾರತ? ಇಲ್ಲಿ ಭಾರತ ಗೆದ್ದಿರುವ ಪಂದ್ಯಗಳೆಷ್ಟು ಗೊತ್ತಾ?

ಕರ್ನಾಟಕ ಆಡುವ ಬಳಗ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ನಿಕಿನ್ ಜೋಸ್, ಮನೀಶ್ ಪಾಂಡೆ, ಶ್ರೇಯಸ್ ಗೋಪಾಲ್, ಶರತ್ ಬಿಆರ್ (ವಿಕೆಟ್ ಕೀಪರ್), ಮನೋಜ್ ಭಾಂಡಗೆ, ಕೃಷ್ಣಪ್ಪ ಗೌತಮ್, ರೋನಿತ್ ಮೋರೆ, ಮುರಳೀಧರ ವೆಂಕಟೇಶ್, ವಿಧ್ವತ್ ಕಾವೇರಪ್ಪ
ಬೆಂಚ್: ವಾಸುಕಿ ಕೌಶಿಕ್, ನಿಹಾಲ್ ಉಳ್ಳಾಲ್, ಅಭಿನವ್ ಮನೋಹರ್, ಜಗದೀಶ ಸುಚಿತ್

ಝಾರ್ಖಂಡ್ ಆಡುವ ಬಳಗ: ಅರ್ನವ್ ಸಿನ್ಹಾ, ಉತ್ಕರ್ಷ್ ಸಿಂಗ್, ಶಹಬಾಜ್ ನದೀಮ್, ವಿರಾಟ್ ಸಿಂಗ್ (ನಾಯಕ), ಸೌರಭ್ ತಿವಾರಿ, ರಾಜನ್‌ದೀಪ್ ಸಿಂಗ್, ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ಅನುಕುಲ್ ರಾಯ್, ಬಾಲ ಕೃಷ್ಣ, ರಾಹುಲ್ ಶುಕ್ಲಾ, ಆಶಿಶ್ ಕುಮಾರ್
ಬೆಂಚ್: ಸುಶಾಂತ್ ಮಿಶ್ರಾ, ಪಂಕಜ್ ಕಿಶೋರ್ ಕುಮಾರ್, ವಿವೇಕಾನಂದ ತಿವಾರಿ, ಕುಮಾರ್ ದಿಯೋಬ್ರತ್, ನಾಜಿಮ್ ಸಿದ್ದಿಕಿ, ಕುಮಾರ್ ಸೂರಜ್, ವಿಕಾಶ್ ಸಿಂಗ್

Story first published: Saturday, November 26, 2022, 18:14 [IST]
Other articles published on Nov 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X