ವಿಜಯ್ ಹಜಾರೆ ಟ್ರೋಫಿ: ಮೊದಲ ಪಂದ್ಯದಲ್ಲಿ ಕರ್ನಾಟಕಕ್ಕೆ ಪುದುಚೇರಿ ವಿರುದ್ಧ ಬೃಹತ್ ಗೆಲುವು

Vijay Hazare Trophy: Karnataka won by 236 runs against Puducherry
Photo Credit: ಸಾಂದರ್ಭಿಕ ಚಿತ್ರ

2021ನೇ ಆವೃತ್ತಿಯ ವಿಜಾಯ್ ಹಜಾರೆ ಟೂರ್ನಿ ಇಂದಿನಿಂದ ಆರಂಭವಾಗಿದ್ದು ಕರ್ನಾಟಕ ತಂಡ ತನ್ನ ಮೊದಲ ಪಂದ್ಯದಲ್ಲಿ ಪುದುಚೇರಿ ತಂಡವನ್ನು ಎದುರಿಸಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ ಕರ್ನಾಟಕ ತಂಡ 236 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಂಡಿಚೇರಿ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರ ರೋಹನ್ ಕದಮ್ ವಿಕೆಟ್‌ಅನ್ನು ಕರ್ನಾಟಕ ಕೇವಲ 1 ರನ್‌ಗಳಿಸಿದ್ದಾಗ ಕಳೆದುಕೊಂಡರೂ ಎರಡನೇ ವಿಕೆಟ್‌ಗೆ ಭರ್ಜರಿ 153 ರನ್‌ಗಳ ಜೊತೆಯಾಟ ಬಂದಿತ್ತು. ಸಿದ್ಧಾರ್ಥ್ 61 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ತಂಡದ ಮೊತ್ತ 172 ರನ್‌ಗಳಾಗಿದ್ದಾಗ ಶತಕದ ಅಂಚಿನಲ್ಲಿದ್ದ ಸಮರ್ಥ್ 95 ರನ್‌ಗಳಿಗೆ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿದರು. ನಂತರ ಅನುಭವಿ ಆಟಗಾರ ಕರುಣ್ ನಾಯರ್ 6 ರನ್‌ಗಳಿಸಿ ವಿಕೆಟ್ ಕಳೆದುಕೊಂಡಾಗ ಕರ್ನಾಟಕ 187 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು.

ದ. ಆಫ್ರಿಕಾ ಪ್ರವಾಸಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಹಿನ್ನಡೆ; ಈ ಇಬ್ಬರು ಪ್ರಮುಖ ಆಟಗಾರರೇ ಅನುಮಾನ!ದ. ಆಫ್ರಿಕಾ ಪ್ರವಾಸಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಹಿನ್ನಡೆ; ಈ ಇಬ್ಬರು ಪ್ರಮುಖ ಆಟಗಾರರೇ ಅನುಮಾನ!

ನಂತರ ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಶ್ರೀನಿವಾಸ್ ಶರತ್ ಮತ್ತೊಂದು ಅದ್ಭುತ ಜೊತೆಯಾಟದಲ್ಲಿ ಭಾಗಿಯಾದರು. 5ನೇ ವಿಕೆಟ್‌ಗೆ 95 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಇಬ್ಬರು ಆಟಗಾರರಿಂದಲೂ ವೈಯಕ್ತಿಕ ಅರ್ಧ ಶತಕ ದಾಖಲಾಯಿತು. ಅಂತಿಮ ಓವರ್‌ನಲ್ಲಿ ಶರತ್ 42 ಎಸೆತಗಳಲ್ಲಿ ಶರತ್ 55 ರನ್ ಬಾರಿಸಿ ವಿಕೆಟ್ ಕಳೆದುಕೊಂಡರೆ ನಾಯಕ ಮನೀಶ್ ಪಾಂಡೆ 48 ಎಸೆತಗಳಲ್ಲಿ 64 ರನ್ ಬಾರಿಸಿ ಅಜೇಯವಾಗುಳಿದರು.

ಈ ಮೂಲಕ ಕರ್ನಾಟಕ ತಂಡ ನಿಗದಿತ ಐದು ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 289 ರನ್ ಪೇರಿಸಲು ಶಕ್ತವಾಯಿತು. ಪುದುಚೇರಿ ಪರವಾಗಿ ಸುಬೋತ್ ಬಾಟಿ ಹಾಗೂ ಸಾಗರ್ ತ್ರಿವೇದಿ ತಲಾ 2 ವಿಕೆಟ್ ಪಡೆದರೆ ಫ್ಯಾಬಿದ್ ಅಹ್ಮದ್ ಒಂದು ವಿಕೆಟ್ ಪಡೆದರು.

ಇನ್ನು ಕರ್ನಾಟಕ ತಂಡ ನೀಡಿದ ಈ ಬೃಹತ್ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಪುದುಚೇರಿ ಆರಂಭದಿಂದಲೇ ಭಾರೀ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಕೇವಲ ಮೂವರು ಆಟಗಾರರು ಮಾತ್ರವೇ ಎರಡಂಕಿ ತಲುಪಲು ಸಾಧ್ಯವಾಯಿತು. ಪವನ್ ದೇಶ್ಪಾಂಡೆ ಗಳಿಸಿದ 16 ರನ್ ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್ ಆಗಿದೆ. ಜಗದೀಶ ಸುಚಿತ್ ಹಾಗೂ ವಿ ಕೌಶಿಕ್ ಬೌಲಿಂಗ್ ದಾಳಿಗೆ ಪುದುಚೇರಿ ತಂಡ ಅಕ್ಷರಶಃ ನಲುಗಿಹೋಯಿತು.

2022 ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ರಾಜತಾಂತ್ರಿಕ ಬಹಿಷ್ಕಾರಕ್ಕೆ ಆಸ್ಟ್ರೇಲಿಯಾ ನಿರ್ಧಾರ2022 ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ರಾಜತಾಂತ್ರಿಕ ಬಹಿಷ್ಕಾರಕ್ಕೆ ಆಸ್ಟ್ರೇಲಿಯಾ ನಿರ್ಧಾರ

ಈ ಪಂದ್ಯದಲ್ಲಿ ಜಗದೀಶ ಸುಚಿತ್ ಮೂರು ಓವರ್‌ಗಳಲ್ಲಿ ಕೇವಲ 3 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರೆ ಕೌಶಿಕ್ ಮೂರು ವಿಕೆಟ್ ಪಡೆದು ಪುದುಚೇರಿಯ ಅಗ್ರ ಕ್ರಮಾಂಕಕ್ಕೆ ಆಘಾತ ನೀಡಿದರು. ವಿದ್ಯಾಧರ್ ಪಾಟೀಲ್ ಹಾಗೂ ಕೆಸಿ ಕರಿಯಪ್ಪ ತಲಾ ಒಂದು ವಿಕೆಟ್ ಸಂಪಾದಿಸಿದರು.

ಕರ್ನಾಟಕ ಆಡುವ ಬಳಗ: ರವಿಕುಮಾರ್ ಸಮರ್ಥ್, ರೋಹನ್ ಕದಂ, ಕೃಷ್ಣಮೂರ್ತಿ ಸಿದ್ಧಾರ್ಥ್, ಕರುಣ್ ನಾಯರ್, ಮನೀಷ್ ಪಾಂಡೆ (ನಾಯಕ), ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್), ಕೆ ಸಿ ಕರಿಯಪ್ಪ, ಜಗದೀಶ ಸುಚಿತ್, ವಿ ಕೌಶಿಕ್, ವೆಂಕಟೇಶ್ ಮುರಳೀಧರ, ವಿದ್ಯಾಧರ್ ಪಾಟೀಲ್
ಬೆಂಚ್: ದೇಗಾ ನಿಶ್ಚಲ್, ಶ್ರೇಯಸ್ ಗೋಪಾಲ್, ಪ್ರವೀಣ್ ದುಬೆ, ವಿಜಯ್ ಕುಮಾರ್ ವೈಶಾಕ್, ಪ್ರತೀಕ್ ಜೈನ್, ಅಭಿನವ್ ಮನೋಹರ್, ಶರತ್ ಬಿಆರ್, ರಿತೇಶ್ ಭಟ್ಕಳ್, ದರ್ಶನ್ ಎಂ.ಬಿ.

ವಿಜಯ್ ಹಜಾರೆ ಟ್ರೋಫಿ 2021: ಮಹಾರಾಷ್ಟ್ರ ತಂಡವನ್ನ ಮುನ್ನಡೆಸಲಿರುವ ರುತುರಾಜ್ ಗಾಯಕ್ವಾಡ್ವಿಜಯ್ ಹಜಾರೆ ಟ್ರೋಫಿ 2021: ಮಹಾರಾಷ್ಟ್ರ ತಂಡವನ್ನ ಮುನ್ನಡೆಸಲಿರುವ ರುತುರಾಜ್ ಗಾಯಕ್ವಾಡ್

ಪುದುಚೇರಿ ಆಡುವ ಬಳಗ: ಪರಸ್ ಡೋಗ್ರಾ, ಪವನ್ ದೇಶಪಾಂಡೆ, ಆಶಿತ್ ರಾಜೀವ್, ಗೋವಿಂದರಾಜನ್, ದಾಮೋದರನ್ ರೋಹಿತ್ (ನಾಯಕ), ಸಾಗರ್ ಉದೇಶಿ, ಎಸ್ ಕಾರ್ತಿಕ್ (ವಿಕೆಟ್ ಕೀಪರ್), ಕಾರ್ತಿಕೇಯನ್ ಜಯಸುಂದರಂ, ಫಬೀದ್ ಅಹಮದ್, ಸಾಗರ್ ತ್ರಿವೇದಿ, ಸುಬೋತ್ ಭಾಟಿ

ಬೆಂಚ್: ಗೊನ್ನಾಬತ್ತುಲ ಚಿರಂಜೀವಿ, ಕಣ್ಣನ್ ವಿಘ್ನೇಶ್, ಶ್ರೀಧರ್ ಅಶ್ವಥ್, ಇಕ್ಲಾಸ್ ನಹಾ, ವಿಕ್ನೇಶ್ವರನ್ ಮರಿಮುತ್ತು, ರಘುಪತಿ, ಪ್ರೇಮರಾಜ್ ರಾಜವೇಲು, ಜೆ ಮಣಿಕಂದನ್, ಭರತ್ ಶರ್ಮಾ

ಆಟದ ದಿಕ್ಕನ್ನೇ ಬದಲಿಸಿದ ಯುವ ಆಟಗಾರ !! | Oneindia Kannada

For Quick Alerts
ALLOW NOTIFICATIONS
For Daily Alerts
Story first published: Wednesday, December 8, 2021, 16:20 [IST]
Other articles published on Dec 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X