ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ: ರಾಜಸ್ಥಾನ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಗೆಲುವು: ಕ್ವಾರ್ಟರ್‌ಫೈನಲ್‌ಗೆ ಪ್ರವೇಶ

Vijay Hazare Trophy: Karnataka won by 8 wickets againts Rajasthan and enter Quarter Final
Photo Credit: ಸಾಂದರ್ಭಿಕ ಚಿತ್ರ

ವಿಜಯ್ ಹಜಾರೆ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿಕರ್ನಾಟಕ ತಂಡ ರಾಜಸ್ಥಾನದ ವಿರುದ್ಧ ಭರ್ಜರಿ ಗೆಲುವು ಸಾಧಸಿದೆ. ರಾಜಸ್ಥಾನ್ ತಂಡದ ನಾಯಕ ದೀಪಲ್ ಹೂಡಾ ಅವರ ಏಕಾಂಗಿ ಹೋರಾಟದಿಂದಾಗಿ ರಾಜಸ್ಥಾನ್ ತಂಡ 199 ರನ್‌ಗಳನ್ನು ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ 8 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಸಮರ್ಥ್, ಸಿದ್ಧಾರ್ಥ್ ಕೆವಿ ಹಾಗೂ ನಾಯಕ ಮನೀಶ್ ಪಾಂಡೆ ಕರ್ನಾಟಕ ಪರವಾಗಿ ಅದ್ಭುತ ಪ್ರದರ್ಶನ ನೀಡಿದರು.

ರಾಜಸ್ಥಾನ್ ತಂಡದ ಪರವಾಗಿ ದೀಪಕ್ ಹೂಡಾ ಒಬ್ಬರೇ 109 ರನ್‌ಗಳನ್ನು ಗಳಿಸಿದ್ದರು. ಉಳಿದ ಯಾವ ಆಟಗಾರರಿಂದಲೂ ಅವರಿಗೆ ಬೆಂಬಲವನ್ನು ನೀಡಲಿಲ್ಲ. ಹೀಗಾಗಿ 41.4 ಓವರ್‌ಗಳಲ್ಲಿ ರಾಜಸ್ಥಾನ್ ತಂಡ ಆಲೌಟ್ ಆಯಿತು. ಹೂಡಾ ಹೊರತುಪಡಿಸಿ ಎಸ್‌ವಿ ಜೋಶಿ ಹಾಗೂ ರವಿ ಬೀಶ್ನೋಯ್ ಮಾತ್ರ ಎರಡಂಕಿಯನ್ನು ಗಳಿಸಿದ್ದರು.

ಆತನನ್ನ ಟೀಂ ಇಂಡಿಯಾದಿಂದ ಕೈ ಬಿಟ್ರೆ, ನಿಜಕ್ಕೂ ನ್ಯಾಯವಲ್ಲ ಎಂದ ಆಕಾಶ್ ಚೋಪ್ರಾಆತನನ್ನ ಟೀಂ ಇಂಡಿಯಾದಿಂದ ಕೈ ಬಿಟ್ರೆ, ನಿಜಕ್ಕೂ ನ್ಯಾಯವಲ್ಲ ಎಂದ ಆಕಾಶ್ ಚೋಪ್ರಾ

ಇನ್ನು ಕರ್ನಾಟಕದ ಪರವಾಗಿ ಬೌಲಿಂಗ್‌ನಲ್ಲಿ ವೈಶಾಕ್ ಅದದಭುತವಾದ ಬೌಲಿಂಗ್ ದಾಳಿ ನಡೆಸಿದರು. 7 ಓವರ್‌ಗಳಲ್ಲಿ ವೈಶಾಕ್ ಕೇವಲ 22 ರನ್‌ ನೀಡಿದ ವೈಶಾಕ್ 4 ವಿಕೆಟ್ ಕಬಳಿಸಿದರು. ಗೌತಮ್ 2 ವಿಕೆಟ್ ಸಂಪಾದಿಸಿದರೆ ಪ್ರಸಿದ್ಧ್, ಪ್ರವೀಣ್ ದುಬೆ ಹಾಗೂ ವೆಂಕಟೇಶ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಇನ್ನು ರಾಜಸ್ಥಾನ ತಂಡ ನೀಡಿದ 200 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ವಿಕೆಟ್‌ಅನ್ನು ತಂಡದ ಮೊತ್ತ 25 ರನ್‌ಗಳಾಗುವಷ್ಟರಲ್ಲಿ ಕಳೆದುಕೊಂಡಿತ್ತು. ಆದರೆ ನಂತರ ಸಮರ್ಥ್ ಹಾಗೂ ಸಿದ್ಧಾರ್ಥ್ ಜೋಡಿ ಎರಡನೇ ವಿಕೆಟ್‌ಗೆ 75 ರನ್‌ಗಳ ಜೊತೆಯಾಟವನ್ನು ನೀಡಿದರು. ಆರ್ ಸಮರ್ಥ್ 54 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ನಾಯಕ ಮನೀಶ್ ಪಾಂಡೆ ಸಿದ್ದಾರ್ಥ್ ಜೊತೆಗೂಡಿ ಪಂದ್ಯವನ್ನು ಗೆಲುವಿನ ದಡ ಸೇರಿಸಿದರು. ಈ ಜೋಡಿ ಮುರಿಯದ ಮೂರನೇ ವಿಕೆಟ್‌ಗೆ 104 ರನ್‌ಗಳ ಜೊತೆಯಾಟವನ್ನು ನೀಡಿದರು. ಸಿದ್ಧಾರ್ಥ್ 85 ರನ್‌ಗಳನ್ನು ಗಳಿಸಿದರೆ ಮನೀಶ್ ಪಾಂಡೆ 52 ರನ್‌ಗಳಿಸಿದ್ದಾರೆ.

ಈ ಮೂಲಕ ಕರ್ನಾಟಕ ಪ್ರಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ತಂಡಕ್ಕೆ ತಮಿಳುನಾಡು ತಂಡ ಮುಖಾಮುಖಿಯಾಗಲಿದ್ದು ಡಿಸೆಂಬರ್ 21ರಂದು ಈ ಮಹತ್ವದ ಪಂದ್ಯ ನಡೆಯಲಿದೆ. ಜೈಪುರದ ಕೆಎಲ್ ಸೈನಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು ಈ ಪಮದ್ಯದಲ್ಲಿ ಗೆದ್ದ ತಂಡ ಸೆಮಿಫೈನಲ್‌ನಲ್ಲಿ ಆಡಲಿದೆ.

ವಿರಾಟ್ ಕೊಹ್ಲಿ ಆ್ಯಟಿಟ್ಯೂಡ್ ನನಗಿಷ್ಟ, ಆದ್ರೆ ಇತ್ತೀಚೆಗೆ ತುಂಬಾ ಜಗಳವಾಡುತ್ತಾನೆ ಎಂದ ಸೌರವ್ ಗಂಗೂಲಿ!ವಿರಾಟ್ ಕೊಹ್ಲಿ ಆ್ಯಟಿಟ್ಯೂಡ್ ನನಗಿಷ್ಟ, ಆದ್ರೆ ಇತ್ತೀಚೆಗೆ ತುಂಬಾ ಜಗಳವಾಡುತ್ತಾನೆ ಎಂದ ಸೌರವ್ ಗಂಗೂಲಿ!

ಕರ್ನಾಟಕ ಪ್ಲೇಯಿಂಗ್ XI: ದೇವದತ್ ಪಡಿಕ್ಕಲ್, ರವಿಕುಮಾರ್ ಸಮರ್ಥ್, ಕೃಷ್ಣಮೂರ್ತಿ ಸಿದ್ಧಾರ್ಥ್, ಮನೀಶ್ ಪಾಂಡೆ (ನಾಯಕ), ಅಭಿನವ್ ಮನೋಹರ್, ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ವೆಂಕಟೇಶ್ ಮುರಳೀಧರ, ಪ್ರವೀಣ್ ದುಬೆ, ವಿಜಯ್ ಕುಮಾರ್ ವೈಶಾಕ್, ಪ್ರಸಿದ್ಧ ಕೃಷ್ಣ
ಬೆಂಚ್: ರೋಹನ್ ಕದಂ, ಕರುಣ್ ನಾಯರ್, ಜಗದೀಶ ಸುಚಿತ್, ಕೆಸಿ ಕರಿಯಪ್ಪ, ವಿ ಕೌಶಿಕ್, ಪ್ರತೀಕ್ ಜೈನ್, ದೇಗಾ ನಿಶ್ಚಲ್, ಶ್ರೇಯಸ್ ಗೋಪಾಲ್, ಶರತ್ ಬಿಆರ್, ರಿತೇಶ್ ಭಟ್ಕಳ್, ದರ್ಶನ್ ಎಂಬಿ, ವಿದ್ಯಾಧರ್ ಪಾಟೀಲ್

South Africa ಪಿಚ್ ನಲ್ಲಿ ಭಾರತದ ಗೇಮ್ ಚೇಂಜರ್ಸ್ ಯಾರು ಗೊತ್ತಾ? | Oneindia Kannada

ರಾಜಸ್ಥಾನಲ್ಪೇಯಿಂಗ್ XI: ಅಭಿಜಿತ್ ತೋಮರ್, ಮನೇಂದರ್ ನರೇಂದರ್ ಸಿಂಗ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ದೀಪಕ್ ಹೂಡಾ (ನಾಯಕ), ಸಲ್ಮಾನ್ ಖಾನ್, ಶುಭಂ ಶರ್ಮಾ, ಸಮರ್ಪಿತ್ ಜೋಶಿ, ರವಿ ಬಿಷ್ಣೋಯ್, ಅನಿಕೇತ್ ಚೌಧರಿ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್
ಬೆಂಚ್: ಶಿವ ಚೌಹಾಣ್, ತನ್ವೀರ್-ಉಲ್-ಹಕ್, ಚಂದ್ರಪಾಲ್ ಸಿಂಗ್, ಅರಾಫತ್ ಖಾನ್, ಮಾನವ್ ಸುತಾರ್, ರಜತ್ ಚೌಧರಿ, ದೀಪಕ್ ಕರ್ವಾಸರ, ಮೋಹಿತ್ ಜೈನ್, ಶುಭಂ ಗರ್ವಾಲ್

Story first published: Monday, December 20, 2021, 9:53 [IST]
Other articles published on Dec 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X