ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಡಿಕ್ಕಲ್-ಸಮರ್ಥ್ ದಾಖಲೆಯ ಜೊತೆಯಾಟ: ರೈಲ್ವೇಸ್ ವಿರುದ್ಧ ಕರ್ನಾಟಕಕ್ಕೆ ಅಮೋಘ ಜಯ

Vijay Hazare trophy match between Karnataka and Railways, Karnataka victory

ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡದ ಆರಂಭಿಕ ಆಟಗಾರರಾದ ಸಮರ್ಥ್ ಹಾಗೂ ದೇವದತ್ ಪಡಿಕ್ಕಲ್ ಭರ್ಜರಿ ಆಟ ಮುಂದುವರಿದಿದೆ. ಈ ಆರಂಭಿಕ ಜೋಡಿ ವಿಕೆಟ್ ಕಳೆದುಕೊಳ್ಳದೆ ರೈಲ್ವೇಸ್ ವಿರುದ್ಧದ ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಕರ್ನಾಟಕ ವಿಜಯ್ ಹಜಾರೆ ಟೂರ್ನಿಯ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ನಾಯಕ ಆರ್ ಸಮರ್ಥ್ ಅಜೇಯ 139 ರನ್ ಗಳಿಸಿದರೆ, ದೇವದತ್ ಪಡಿಕ್ಕಲ್ ಅಜೇಯ 145 ರನ್ ಬಾರಿಸಿದ್ದಾರೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ರೈಲ್ವೇಸ್ ತಂಡ ಪ್ರತಿಮ್ ಸಿಂಗ್ 129 ರನ್‌ಗಳ ಭರ್ಜರಿ ಶತಕದ ನೆರವಿನಿಂದ 284 ರನ್‌ಗಳಿಸಿತು. ಕರ್ನಾಟಕದ ಬೌಲಿಂಗ್ ವಿಭಾಗದಲ್ಲಿ ಶ್ರೇಯಸ್ ಗೋಪಾಲ್ 3 ವಿಕೆಟ್ ಕಿತ್ತು ಮಿಂಚುವುದರ ಜೊತೆಗೆ ರನ್ ನಿಯಂತ್ರಣದಲ್ಲೂ ಯಶಸ್ಸು ಸಾಧಿಸಿದ್ದರು.

ಐಪಿಎಲ್: ಟಾಮ್ ಬ್ಯಾಂಟನ್ ಐಪಿಎಲ್ ಬಿಡಲಿ ಎಂದ ಮೈಕಲ್ ವಾನ್ಐಪಿಎಲ್: ಟಾಮ್ ಬ್ಯಾಂಟನ್ ಐಪಿಎಲ್ ಬಿಡಲಿ ಎಂದ ಮೈಕಲ್ ವಾನ್

ರೈಲ್ವೇಸ್ ತಂಡ ನೀಡಿದ್ದ ಈ ಸವಾಲಿನ ಮೊತ್ತವನ್ನು ಬೆನ್ನಟ್ಟಲು ಬ್ಯಾಟಿಂಗ್‌ಗೆ ಇಳಿದ ಸಮರ್ಥ್-ಪಡಿಕ್ಕಲ್ ಜೋಡಿ ಅದ್ಭುತ ಆಟವನ್ನು ಪ್ರದರ್ಶಿಸಿದರು. ಯಾವುದೇ ಹಂತದಲ್ಲೂ ಎದುರಾಳಿ ಮೇಲುಗೈ ಸಾಧಿಸದಂತೆ ನೋಡಿಕೊಂಡ ಈ ಜೋಡಿ ಭರ್ಜರಿಯಾಗಿ ಕರ್ನಾಟಕಕ್ಕೆ ಗೆಲುವನ್ನು ಸಾರಿದರು.

ಇನ್ನು ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲಿ ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ 500 ರನ್‌ಗಳನ್ನು ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಪಡಿಕ್ಕಲ್ ಈ ಬಾರಿಯ ಪಂದ್ಯಗಳಲ್ಲಿ 3 ಅರ್ಧ ಶತಕ ಹಾಗೂ 2 ಶತಕಗಳನ್ನು ದಾಖಲಿಸಿದ್ದಾರೆ.

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: ದಂತೆಕತೆಗಳಿರುವ ಭಾರತ ತಂಡ ಪ್ರಕಟರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: ದಂತೆಕತೆಗಳಿರುವ ಭಾರತ ತಂಡ ಪ್ರಕಟ

ಇನ್ನು ರೈಲ್ವೇಸ್ ವಿರುದ್ಧ ಸಮರ್ಥ್ ಹಾಗೂ ಪಡಿಕ್ಕಲ್ ಜಓಡಿ ಬಾರಿಸಿದ 285 ರನ್‌ಗಳ ಜೊತೆಯಾಟ ವಿಜಯ್ ಹಜಾರೆ ಟೂರ್ನಿಯಲ್ಲಿ ದಾಖಲಾದ ಬೃಹತ್ ಜೊತೆಯಾಟ ಎನಿಸಿಕೊಂಡಿದೆ. ಇದಕ್ಕೂ ಮುನ್ನ 2008ರಲ್ಲಿ ಆಕಾಶ್ ಚೋಪ್ರ ಹಾಗೂ ಶಿಖರ್ ಧವನ್ 2008ರಲ್ಲಿ 77 ರನ್‌ಗಳ ಜೊತೆಯಾಟ ನೀಡಿದ್ದು ವಿಜಯ್ ಹಜಾರೆ ಟ್ರೋಫಿಯ ದಾಖಲೆಯಾಗಿತ್ತು.

Story first published: Sunday, February 28, 2021, 17:59 [IST]
Other articles published on Feb 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X