ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ: ಪೃಥ್ವಿ ಭರ್ಜರಿ ಶೋ, ಮತ್ತೊಂದು ಹೊಸ ದಾಖಲೆ!

Vijay Hazare Trophy: Prithvi Shaw becomes first cricketer to score 800 runs

ದೆಹಲಿ: ಮುಂಬೈ ಯುವ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ದೇಸಿ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಪೃಥ್ವಿ ಮೈಲಿಗಲ್ಲು ಸ್ಥಾಪಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ 800+ ರನ್ ಬಾರಿಸಿದ ಚೊಚ್ಚಲ ಆಟಗಾರನಾಗಿ ಶಾ ಮಿಂಚಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ಬರೆದ ಮಿಥಾಲಿ ರಾಜ್ಏಕದಿನ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ಬರೆದ ಮಿಥಾಲಿ ರಾಜ್

ಉತ್ತರ ಪ್ರದೇಶ-ಮುಂಬೈ ಫೈನಲ್ ಪಂದ್ಯದಲ್ಲಿ ಮುಂಬೈ ಪರ ಆರಂಭಿಕರಾಗಿ ಬಂದಿದ್ದ ನಾಯಕ ಪೃಥ್ವಿ ಶಾ ಕೇವಲ 39 ಎಸೆತಗಳಿಗೆ 73 ರನ್ ಸಿಡಿಸಿದರು. ಇದರಲ್ಲಿ 10 ಫೋರ್ಸ್, 4 ಸಿಕ್ಸರ್ ಕೂಡ ಸೇರಿತ್ತು. ಈ ಭರ್ಜರಿ ಬ್ಯಾಟಿಂಗ್‌ ಸಹಾಯದಿಂದ ಪೃಥ್ವಿ ವಿಜಯ್ ಹಜಾರೆಯಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಭಾರತ ತಂಡದಿಂದ ಹೊರಬಿದಿದ್ದಕ್ಕೆ ಸಿಟ್ಟಾ?

ಭಾರತ ತಂಡದಿಂದ ಹೊರಬಿದಿದ್ದಕ್ಕೆ ಸಿಟ್ಟಾ?

ಈ ಮೊದಲು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ತಂಡದಲ್ಲಿದ್ದ ಪೃಥ್ವಿ ಶಾ ನಿರಾಶದಾಯಕ ಪ್ರದರ್ಶನ ನೀಡಿದ್ದರು. ಹೀಗಾಗಿ ಪೃಥ್ವಿಯನ್ನು ತಂಡದಿಂದ ಹೊರಗಿಡಲಾಗಿತ್ತು. ಸದ್ಯ ನಡೆಯುತ್ತಿರುವ ಇಂಗ್ಲೆಂಡ್-ಭಾರತ ಟೆಸ್ಟ್‌ ಮತ್ತು ಟಿ20ಐ ಸರಣಿಯಿಂದಲೂ ಪೃಥ್ವಿ ಹೊರಗಿದ್ದಾರೆ. ಬಹುಶಃ ಈ ಬೇಸರವನ್ನೇ ಸ್ಫೂರ್ತಿಯಾಗಿಸಿಕೊಂಡಿರುವ ಫೃಥ್ವಿ, ದೇಶಿ ಕ್ರಿಕೆಟ್‌ನಲ್ಲಿ ಬಿರುಸಿನ ಬ್ಯಾಟಿಂಗ್‌ನಿಂದ ಭಾರತದ ಆಯ್ಕೆ ಸಮಿತ ತನ್ನತ್ತ ಮತ್ತೆ ದಿಟ್ಟಿಸುವಂತೆ ಮಾಡಿದ್ದಾರೆ.

ಅಗರ್ವಾಲ್ ದಾಖಲೆ ಬದಿಗೆ

ಅಗರ್ವಾಲ್ ದಾಖಲೆ ಬದಿಗೆ

2021ರ ವಿಜಯ್ ಹಜಾರೆ ಫೈನಲ್‌ನಲ್ಲಿ 73 ರನ್‌ನೊಂದಿಗೆ ವಿಜಯ್ ಹಜಾರೆ ಸೀಸನ್‌ ಒಂದರಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆಗೆ ಪೃಥ್ವಿ ಕಾರಣಾಗಿದ್ದಾರೆ. ಈ ಬಾರಿಯ ಸೀಸನ್‌ನಲ್ಲಿ ಪೃಥ್ವಿ ಒಟ್ಟು 827 ರನ್ ಗಳಿಸಿದಂತಾಗಿದೆ. ಈ ಟೂರ್ನಿಯಲ್ಲಿ ಅತ್ಯಧಿಕ ರನ್ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಶಾ ಕರ್ನಾಟಕ ತಂಡದ ಮಯಾಂಕ್ ಅಗರ್ವಾಲ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. 2018ರಲ್ಲಿ ಮಯಾಂಕ್ 8 ಇನ್ನಿಂಗ್ಸ್‌ಗಳಲ್ಲಿ 723 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು. ಆದರೆ ಪೃಥ್ವಿ 8 ಇನ್ನಿಂಗ್ಸ್‌ಗಳಲ್ಲಿ 827 ರನ್ ಬಾರಿಸಿದ್ದಾರೆ.

ಪ್ರತೀ ಇನ್ನಿಂಗ್ಸ್‌ಗಳಲ್ಲಿ ಪೃಥ್ವಿ ಬಾರಿಸಿದ ರನ್

ಪ್ರತೀ ಇನ್ನಿಂಗ್ಸ್‌ಗಳಲ್ಲಿ ಪೃಥ್ವಿ ಬಾರಿಸಿದ ರನ್

2021ರ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪ್ರತೀ ಇನ್ನಿಂಗ್ಸ್‌ನಲ್ಲಿ ಕ್ರಮವಾಗಿ 105* (89 ಎಸೆತ), 34 (38), 227* (152), 36 (30), 2 (5), 185*(123), 73 (39) ರನ್ ಗಳಿಸಿದ್ದಾರೆ. 5 ಟೆಸ್ಟ್‌ ಪಂದ್ಯಗಳಲ್ಲಿ 339 ರನ್, 3 ಏಕದಿನ ಪಂದ್ಯಗಳಲ್ಲಿ 84 ರನ್, 38 ಐಪಿಎಲ್ ಪಂದ್ಯಗಳಲ್ಲಿ 826 ರನ್ ಬಾರಿಸಿರುವ ಶಾ ಮುಂಬರಲಿರುವ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಐಪಿಎಲ್‌ನಲ್ಲೂ ಪೃಥ್ವಿ ಬಿರುಸಿನ ಬ್ಯಾಟಿಂಗ್ ನಡೆಸುವ ನಿರೀಕ್ಷೆಯಿದೆ.

Story first published: Monday, March 15, 2021, 9:57 [IST]
Other articles published on Mar 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X