ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಸೆ.ಫೈನಲ್: ಮುಂಬೈ ವಿರುದ್ಧ ಕರ್ನಾಟಕಕ್ಕೆ ಸೋಲು

Vijay Hazare Trophy: Prithvi Shaw slams 4th century, Mumbai beat Karnataka by 72 runs

ದೆಹಲಿ: ದೆಹಲಿಯ ಪಾಲಂ ಸ್ಟೇಡಿಯಂನಲ್ಲಿ ಗುರುವಾರ (ಮಾರ್ಚ್ 11) ನಡೆದ ವಿಜಯ್ ಹಜಾರೆ ಟ್ರೋಫಿ ಸೆಮಿಫೈನ್‌-2 ಪಂದ್ಯದಲ್ಲಿ ಕರ್ನಾಟಕ ತಂಡ ಫೈನಲ್‌ ಅವಕಾಶ ತಪ್ಪಿಸಿಕೊಂಡಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ 72 ರನ್ ಹೀನಾಯ ಸೋಲನುಭವಿಸಿದೆ. ನಾಯಕ ಪೃಥ್ವಿ ಶಾ ಶತಕದ ನೆರವಿನೊಂದಿಗೆ ಮುಂಬೈ ಫೈನಲ್‌ಗೆ ಪ್ರವೇಶಿಸಿದೆ.

ನ್ಯೂಜಿಲೆಂಡ್ ಸ್ಫೋಟಕ ಬ್ಯಾಟ್ಸ್‌ಮನ್ ಫಿನ್ ಅಲೆನ್ ಆರ್‌ಸಿಬಿಗೆ ಸೇರ್ಪಡೆ!ನ್ಯೂಜಿಲೆಂಡ್ ಸ್ಫೋಟಕ ಬ್ಯಾಟ್ಸ್‌ಮನ್ ಫಿನ್ ಅಲೆನ್ ಆರ್‌ಸಿಬಿಗೆ ಸೇರ್ಪಡೆ!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ, ಪೃಥ್ವಿ ಶಾ 165 (122 ಎಸೆತ), ಆದಿತ್ಯ ತಾರೆ 16, ಶಮ್ಸ್ ಮುಲಾನಿ 45, ಶಿವಂ ದೂಬೆ 27, ಅಮನ್ ಹಕೀಮ್ ಖಾನ್ 25, ಸರ್ಫರಾಜ್ ಖಾನ್ 9, ತನುಷ್ ಕೋಟಿಯಾನ್ 5 ರನ್ ಸೇರ್ಪಡೆಯೊಂದಿಗೆ 49.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 322 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಕರ್ನಾಟಕ, ನಾಯಕ ರವಿಕುಮಾರ್ ಸಮರ್ಥ್ 8, ದೇವದತ್ ಪಡಿಕ್ಕಲ್ 64, ಕರುಣ್ ನಾಯರ್ 29, ಶ್ರೇಯಸ್ ಗೋಪಾಲ್ 33, ಶರತ್ ಬಿಆರ್ 61, ಕೃಷ್ಣಪ್ಪ ಗೌತಮ್ 28 ರನ್ ಕೊಡುಗೆಯೊಂದಿಗೆ 42.4 ಓವರ್‌ನಲ್ಲಿ ಸರ್ವಪತನ ಕಂಡು 250 ರನ್ ಗಳಿಸಲಷ್ಟೇ ಶಕ್ತವಾಯ್ತು. ಮಾರ್ಚ್ 14ರ ಭಾನುವಾರ ಫೈನಲ್‌ನಲ್ಲಿ ಉತ್ತರಪ್ರದೇಶ ಮತ್ತು ಮುಂಬೈ ಸ್ಪರ್ಧಿಸಲಿವೆ.

ವಿರಾಟ್ ಕೊಹ್ಲಿ ದಾಖಲೆ ಸರಿದೂಗಿಸಿಕೊಂಡ ದೇವದತ್ ಪಡಿಕ್ಕಲ್ವಿರಾಟ್ ಕೊಹ್ಲಿ ದಾಖಲೆ ಸರಿದೂಗಿಸಿಕೊಂಡ ದೇವದತ್ ಪಡಿಕ್ಕಲ್

ಮುಂಬೈ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ಪ್ರಸಿದ್ಧ್ ಕೃಷ್ಣ 3, ರೋನಿತ್ ಮೋರೆ 1, ವ್ಯಾಶಕ್ ವಿ 4 (56 ರನ್), ಶ್ರೇಯಸ್ ಗೋಪಾಲ್ 1, ಕೆ ಗೌತಮ್ 1 ವಿಕೆಟ್‌ ಪಡೆದರೆ, ಕರ್ನಾಟಕದ ಇನ್ನಿಂಗ್ಸ್‌ನಲ್ಲಿ ಮುಂಬೈಯ ತುಷಾರ್ ದೇಶಪಾಂಡೆ 2, ಧವಳ್ ಕುಲಕರ್ಣಿ 1, ತನುಷ್ ಕೋಟಿಯಾನ್ 2, ಪ್ರಶಾಂತ್ ಸೋಲಂಕಿ 2, ಶಮ್ಸ್ ಮುಲಾನಿ 2, ಯಶಸ್ವಿ ಜೈಸ್ವಾಲ್ 1 ವಿಕೆಟ್‌ನಿಂದ ಗಮನ ಸೆಳೆದರು.

Story first published: Thursday, March 11, 2021, 17:58 [IST]
Other articles published on Mar 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X