ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್‌ ಹಜಾರೆ: ಸ್ಫೋಟಕ ಬ್ಯಾಟಿಂಗ್‌ಗಾಗಿ ಇತಿಹಾಸ ಬರೆದ ಪೃಥ್ವಿ ಶಾ!

Vijay Hazare Trophy: Prithvi Shaw smashes double century against Pondicherry

ಜೈಪುರ್: ಮುಂಬೈ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಗುರುವಾರ (ಫೆಬ್ರವರಿ 25) ನಡೆದ ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ರೌಂಡ್ 3, ಎಲೈಟ್ ಗ್ರೂಪ್ ಡಿ ಪಂದ್ಯದಲ್ಲಿ ಪುದುಚೇರಿ ವಿರುದ್ಧ ಶಾ ದಾಖಲೆಯ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಶಾ ದ್ವಿಶತಕ ಬಾರಿಸಿದ್ದಾರೆ.

ಅಂಪೈರ್ ವಿರುದ್ಧ ಅಸಮಾಧಾನ, ಮ್ಯಾಚ್ ರೆಫರೀಗೆ ದೂರಿತ್ತ ಇಂಗ್ಲೆಂಡ್ಅಂಪೈರ್ ವಿರುದ್ಧ ಅಸಮಾಧಾನ, ಮ್ಯಾಚ್ ರೆಫರೀಗೆ ದೂರಿತ್ತ ಇಂಗ್ಲೆಂಡ್

ಪೃಥ್ವಿ ಶಾ ಮಾತ್ರ ಅಲ್ಲ, ಮುಂಬೈ ಇನ್ನೊಬ್ಬ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಯಾದವ್ ಕೂಡ ಸ್ಫೋಟಕ ಶತಕ ಚಚ್ಚಿದ್ದಾರೆ. ಆದಿತ್ಯ ತಾರೆ ಸಹ ಅರ್ಧ ಶತಕದ ಕೊಡುಗೆ ನೀಡಿದ್ದಾರೆ. ಪೃಥ್ವಿ, ಯಾದವ್, ತಾರೆ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಭರ್ಜರಿ ರನ್ (457-4, 50 Ov) ಕಲೆ ಹಾಕಿತ್ತು.

ಶಾ ಬ್ಯಾಟಿಂಗ್ ಅಬ್ಬರ

ಶಾ ಬ್ಯಾಟಿಂಗ್ ಅಬ್ಬರ

ಮುಂಬೈ ಪರ ಆರಂಭಿಕರಾಗಿ ಬಂದಿದ್ದ ಪೃಥ್ವಿ ಶಾ 152 ಎಸೆತಗಳಲ್ಲಿ ಅಜೇಯ 227 ರನ್ ಚಚ್ಚಿದ್ದಾರೆ. ಇದರಲ್ಲಿ 31 ಫೋರ್ಸ್, 5 ಸಿಕ್ಸರ್‌ಗಳೂ ಸೇರಿದ್ದವು. 21ರ ಹರೆಯದ ಪೃಥ್ವಿ ಶಾ ಈ ಬ್ಯಾಟಿಂಗ್‌ನೊಂದಿಗೆ ವಿಜಯ್ ಹಜಾರೆಯಲ್ಲಿ ವೈಯಕ್ತಿಕ ಅತ್ಯಧಿಕ ರನ್‌ ಬಾರಿಸಿದ ದಾಖಲೆಗೆ ಕಾರಣರಾಗಿದ್ದಾರೆ.

ಯಾದವ್ ಸ್ಫೋಟಕ ಶತಕ

ಯಾದವ್ ಸ್ಫೋಟಕ ಶತಕ

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗಾಗಿ ಟೀಮ್ ಇಂಡಿಯಾಕ್ಕೆ ಮೊದಲ ಬಾರಿ ಕರೆ ನೀಡಲಾಗಿರುವ ಸೂರ್ಯಕುಮಾರ್ ಯಾದವ್ ಕೂಡ ಅಬ್ಬರ ಬ್ಯಾಟಿಂಗ್‌ಗಾಗಿ ಗಮನ ಸೆಳೆದಿದ್ದಾರೆ. 4ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ಯಾದವ್ 58 ಎಸೆತಗಳಲ್ಲಿ 133 ರನ್ ಬಾರಿಸಿದ್ದಾರೆ. ಇದರಲ್ಲಿ 22 ಫೋರ್ಸ್, 4 ಸಿಕ್ಸರ್‌ಗಳು ಸೇರಿದ್ದವು.

ದಾಖಲೆ ಪಟ್ಟಿಗೆ ಪೃಥ್ವಿ ಸೇರ್ಪಡೆ

ದಾಖಲೆ ಪಟ್ಟಿಗೆ ಪೃಥ್ವಿ ಸೇರ್ಪಡೆ

ದ್ವಿಶತಕ ಸಾಧನೆಯೊಂದಿಗೆ ಪೃಥ್ವಿ ಶಾ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಲಿಸ್ಟ್‌ಎ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಭಾರತದ 8ನೇ ಬ್ಯಾಟ್ಸ್‌ಮನ್‌ ಆಗಿ ಶಾ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಶಿಖರ್ ಧವನ್, ಕರ್ಣ್ ಕೌಶಲ್ ಮತ್ತು ಪೃಥ್ವಿ ಶಾ ಇದ್ದಾರೆ.

Story first published: Friday, February 26, 2021, 9:03 [IST]
Other articles published on Feb 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X