ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೇಶೀಯ ಕ್ರಿಕೆಟ್‌ನಲ್ಲಿ ಮುಂದುವರಿದ ಋತುರಾಜ್ ಅಬ್ಬರ: ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆ

Vijay Hazare trophy: Ruturaj Gaikwad hits 4th hundred in this tourney Join Kohli, Padikkal in elite list

ಋತುರಾಜ್ ಗಾಯಕ್ವಾಡ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ರೋಫಿ ಗೆಲ್ಲಲು ಪ್ರಮುಖ ಕಾರಣವಾಗಿದ್ದರು. ಈ ಭರ್ಜರಿ ಫಾರ್ಮ್‌ಅನ್ನು ಋತುರಾಜ್ ಗಾಯಕ್ವಾಡ್ ದೇಶೀಯ ಕ್ರಿಕೆಟ್‌ನಲ್ಲಿಯೂ ಮುಂದುವರಿಸಿದ್ದಾರೆ. ಶತಕದ ಮೇಲೆ ಶತಕ ಸಿಡಿಸುತ್ತಿರುವ ಋತುರಾಜ್ ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಶತಕವನ್ನು ಸಿಡಿಸಿ ಮಿಂಚುಹರಿಸಿದ್ದಾರೆ.

ಮಹಾರಾಷ್ಟ್ರ ತಂಡದ ನಾಯಕನಾಗಿರುವ ಋತುರಾಜ್ ಗಾಯಕ್ವಾಡ್ ದೇಶೀಯ ಕ್ರಿಕೆಟ್‌ನ ಐವತ್ತು ಓವರ್‌ಗಳ ಮಾದರಿಯ ಕ್ರಿಕೆಟ್‌ನಲ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಸಾಧನೆಯನ್ನು ಸಮಗೊಳಿಸಿದ್ದಾರೆ. ಮಂಗಳವಾರ ನಡೆದ ಎಲೈಟ್ ಗ್ರೂಪ್ ಡಿ ಯ ಐದನೇ ಸುತ್ತಿನ ಪಂದ್ಯದಲ್ಲಿ ಚಂಡೀಗಡ ತಂಡದ ವಿರುದ್ಧ ಋತುರಾಜ್ ಗಾಯಕ್ವಾಡ್ ಟೂರ್ನಿಯಲ್ಲಿ ನಾಲ್ಕನೇ ಶತಕವನ್ನು ಸಿಡಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿರುವ ವಿರಾಟ್ ಕೊಹ್ಲಿ: ವರದಿದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿರುವ ವಿರಾಟ್ ಕೊಹ್ಲಿ: ವರದಿ

ಇದಕ್ಕೂ ಮುನ್ನ ಈ ಸಾಧನೆಯನ್ನು ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಪೃಥ್ವಿ ಶಾ ಸಾಧಿಸಿದ್ದರು. ಇದೀಗ ಋತುರಾಜ್ ಗಾಯಕ್ವಾಡ್ ಈ ಸಾಧನೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 2009-19ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದರು. ನಂತರ ಕಳೆದ ವರ್ಷದ ಆವೃತ್ತಿಯಲ್ಲಿ ಕರ್ನಾಟಕದ ಆಟಗಾರ ದೇವದತ್ ಪಡಿಕ್ಕಲ್ ಹಾಗೂ ಮುಂಬೈ ಆಟಗಾರ ಪೃಥ್ವಿ ಶಾ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ದಕ್ಷಿಣ ಆಫ್ರಿಕಾ ಪ್ರವಾಸವನ್ನ ರದ್ದು ಮಾಡಬೇಕೆ? ಟೀಂ ಇಂಡಿಯಾ ಸ್ಥಿತಿ ಕಂಡು ಆಕಾಶ್ ಚೋಪ್ರಾ ಪ್ರಶ್ನೆ!ದಕ್ಷಿಣ ಆಫ್ರಿಕಾ ಪ್ರವಾಸವನ್ನ ರದ್ದು ಮಾಡಬೇಕೆ? ಟೀಂ ಇಂಡಿಯಾ ಸ್ಥಿತಿ ಕಂಡು ಆಕಾಶ್ ಚೋಪ್ರಾ ಪ್ರಶ್ನೆ!

ಋತಿರಾಜ್ ಗಾಯಕ್ವಾಡ್ ಈ ಬಾರಿಯ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಬರೊಬ್ಬರಿ 603 ರನ್‌ಗಳಿಸಿದ್ದಾರೆ. ಅವರ ಸರಾಸರಿ 150.75ರಷ್ಟಿದ್ದು ನಾಲ್ಕು ಶತಕಗಳು ದಾಖಲಾಗಿದೆ. ಮೊದಲ ಪಂದ್ಯದಲ್ಲಿ 168 ರನ್‌ಗಳಿಸಿದ್ದ ಗಾಯಕ್ವಾಡ್ ನಂತರದ ಪಂದ್ಯದಲ್ಲಿ 21ಕ್ಕೆ ವಿಕೆಟ್ ಕಳೆದುಕೊಂಡಿದ್ದರು. ಸಂತರದ ಮೂರು ಇನ್ನಿಂಗ್ಸ್‌ನಲ್ಲಿ ಸತತ ಮೂರು ಶತಕ ಸಿಡಿಸಿದ್ದಾರೆ. 124, 154* ಹಾಗೂ 136 ರನ್‌ ಸಿಡಿಸಿದ್ದಾರೆ. ಈ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಋತುರಾಜ್ ಗಾಯಕ್ವಾಡ್ ಅತಿ ಹೆಚ್ಚಿನ ರನ್, ಅತಿ ಹೆಚ್ಚು ಬೌಂಡರಿ, ಸಿಕ್ಸರ್ ಹಾಗೂ ಶತಕವನ್ನು ಸಿಡಿಸಿದ ಆಟಗಾರನಾಗಿದ್ದಾರೆ.

NCA ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡ VVS ಲಕ್ಷ್ಮಣ್‌: ಹಾಲಿ & ಮಾಜಿ ಕ್ರಿಕೆಟಿಗರಿಂದ ಶುಭಾಶಯNCA ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡ VVS ಲಕ್ಷ್ಮಣ್‌: ಹಾಲಿ & ಮಾಜಿ ಕ್ರಿಕೆಟಿಗರಿಂದ ಶುಭಾಶಯ

ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದ ತಂಡಗಳು: ಇನ್ನು ಋತುರಾಜ್ ಗಾಯಕ್ವಾಡ್ ಅವರ ಅಬ್ಬರದ ಪ್ರದರ್ಶನದ ಹೊರತಾಗಿಯೂ ಮಹಾರಾಷ್ಟ್ರ ಕ್ವಾರ್ಟರ್‌ಫಥನಲ್‌ಗೆ ಪ್ರವೇಶಿಸುವಲ್ಲಿ ವಿಫಲವಾಗಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದ ಕಾರಣದಿಂದಾಗಿ ಪ್ರಿ ಕ್ವಾರ್ಟರ್‌ಗೆ ಪ್ರವೇಶ ಪಡೆಯಲು ಕೂಡ ಮಹಾರಾಷ್ಟ್ರ ತಂಡಕ್ಕೆ ಸಾಧ್ಯವಾಗಲಿಲ್ಲ. ಇನ್ನು ಟೂರ್ನಿಯಲ್ಲಿ ತಮಿಳು ನಾಡು, ಹಿಮಾಚಲ್ ಪ್ರದೇಶ ಹಾಗೂ ಸೌರಾಷ್ಟ್ರ, ಕೇರಳ ಹಾಗೂ ಸರ್ವಿಸಸ್ ತಂಡಗಳು ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲೇ ODI ಮಾದರಿಗೆ ಪದಾರ್ಪಣೆ ಮಾಡಿದ್ದಾರೆ ಈ 4 ಖ್ಯಾತ ಕ್ರಿಕೆಟಿಗರುರೋಹಿತ್ ಶರ್ಮಾ ನಾಯಕತ್ವದಲ್ಲೇ ODI ಮಾದರಿಗೆ ಪದಾರ್ಪಣೆ ಮಾಡಿದ್ದಾರೆ ಈ 4 ಖ್ಯಾತ ಕ್ರಿಕೆಟಿಗರು

ಇನ್ನು ಕರ್ನಾಟಕ, ರಾಜಸ್ಥಾನ್, ವಿದರ್ಭ, ತ್ರಿಪುರ, ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶ ತಂಡಗಳು ಪ್ರೀ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು ಕ್ವಾರ್ಟರ್ ಫೈನಲ್‌ಗೇರಲು ಮತ್ತೊಂದು ಗೆಲುವು ಪಡೆಯಬೇಕಿದೆ. ಕರ್ನಾಟಕ ತಂಡಕ್ಕೆ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ರಾಜಸ್ಥಾನ ಎದುರಾಳಿಯಾಗಿದ್ದು ಈ ಪಂದ್ಯ ಡಿಸೆಂಬರ್ 19ರಂದು ನಡೆಯಲಿದೆ.

Story first published: Wednesday, December 15, 2021, 9:56 [IST]
Other articles published on Dec 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X