ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ: ಫೈನಲ್‌ಗೆ ಪ್ರವೇಶಿಸಿದ ತಮಿಳುನಾಡು ಹಾಗೂ ಹಿಮಾಚಲ ಪ್ರದೇಶ

Vijay Hazare trophy: Semi Final Highlights; Tamil Nadu and Himachal Pradesh entered Final

ದೇಶೀಯ ಕ್ರಿಕೆಟ್‌ನ ಸೀಮಿತ ಓವರ್‌ಗಳ ಟೂರ್ನಿಯಲ್ಲಿ ತಮಿಳುನಾಡು ತಂಡದ ಅಬ್ಬರ ಮುಂದುವರಿದಿದೆ. ಟಿ20 ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಚಾಂಪಿಯನ್ ಆಗಿ ಮೆರೆದ ತಮಿಳುನಾಡು ತಂಡ ಏಕದಿನ ಮಾದರಿಯ ವಿಜಯ್ ಹಜಾರೆ ಟೂರ್ನಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಫೈನಲ್‌ಗೆ ಪ್ರವೇಶಿಸಿದೆ. ಸೆಮಿ ಫೈನಲ್‌ನಲ್ಲಿ ಸೌರಾಷ್ಟ್ರದ ವಿರುದ್ಧ ಅಮೋಘ ಪ್ರದರ್ಶನ ನೀಡಿ ಅರ್ಹವಾಗಿಯೇ ಅಂತಿಮ ಹಂತವನ್ನು ಪ್ರವೇಶಿಸಿದೆ.

ಮತ್ತೊಂದೆಡೆ ಹಿಮಾಚಲ ಪ್ರದೇಶ ತಂಡ ಕೂಡ ಇದೇ ಮೊದಲ ಬಾರಿಗೆ ವಿಜಯ್ ಹಜಾರೆ ಟೂರ್ನಿಯಲ್ಲಿ ಫೈನಲ್‌ಗೇರಿದ ಸಾಧನೆ ಮಾಡಿದೆ. ಹಿಮಾಚಲ ಪ್ರದೇಶ ಸೆಮಿ ಫೈನಲ್‌ನಲ್ಲಿ ಸರ್ವಿಸಸ್ ತಂಡವನ್ನು 77 ರನ್‌ಗಳ ಅಂತರದಿಂದ ಮಣಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಹೀಗಾಗಿ ಪ್ರಶಸ್ತಿ ಸುತ್ತಿನಲ್ಲಿ ಹಿಮಾಚಲ ಪ್ರದೇಶ ತಂಡ ತಮಿಳುನಾಡು ತಂಡದ ವಿರುದ್ಧ ಸೆಣೆಸಾಡಲಿದೆ.

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಹರ್ಭಜನ್ ಸಿಂಗ್: 23 ವರ್ಷಗಳ ಕ್ರಿಕೆಟ್ ಪ್ರಯಾಣ ಅಂತ್ಯಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಹರ್ಭಜನ್ ಸಿಂಗ್: 23 ವರ್ಷಗಳ ಕ್ರಿಕೆಟ್ ಪ್ರಯಾಣ ಅಂತ್ಯ

ತಮಿಳುನಾಡು vs ಸೌರಾಷ್ಟ್ರ, ಸೆಮಿಫೈನಲ್ ಹಣಾಹಣಿ: ಜೈಪುರದ ಕೆಎಲ್ ಸೈನಿ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ತಮಳುನಾಡು ತಂಡಕ್ಕೆ ಸೌರಾಷ್ಟ್ರ ಸವಾಲೊಡ್ಡಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ತಮಿಳುನಾಡು ತಂಡ ಎದುರಾಳಿಯನ್ನು ಕಣಕ್ಕಿಳಿಸಿತ್ತು. ಈ ಸವಾಲನ್ನು ಸ್ವೀಕರಿಸಿ ಬ್ಯಾಟಿಂಗ್‌ಗೆ ಇಳಿದ ಸೌರಾಷ್ಟ್ರ ಅದ್ಭುತ ಆಟವನ್ನು ಪ್ರದರ್ಶಿಸಿತು. ಶೆಲ್ಡನ್ ಜಾಕ್ಸನ್ ಸಿಡಿಸಿದ ಅಬ್ಬರದ ಶತಕ ಹಾಗೂ ವಿಶ್ವರಾಜ್ ಜಡೇಜಾ ಮತ್ತು ಹಾಗೂ ಅರ್ಪಿತ್ ವಸವಾಡ ಅವರ ಅರ್ಧ ಶತಕದ ನೆರವಿನಿಂದ ಬೃಹತ್ ಮೊತ್ತವನ್ನು ಗಳಿಸಿತು. ನಿಗದಿತ 50 ಓವರ್‌ಗಳಲ್ಲಿ ಸೌರಾಷ್ಟ್ರ ಭರ್ಜರಿ 310 ರನ್‌ಗಳನ್ನು ಗಳಿಸಿತ್ತು.

ಈ ಬೃಹತ್ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ತಮಿಳುನಾಡು ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ತಂಡದ ಮೊತ್ತ 23 ರನ್‌ಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತ್ತು. ಆದರೆ ಆರಂಭಿಕ ಆಟಗಾರ ಬಾಬಾ ಅಪರಜಿತ್ ಹಾಗೂ ಬಾಬಾ ಇಂದ್ರಜಿತ್ ಜೋಡಿ ತಂಡವನ್ನು ಕುಸಿತದಿಂದ ಪಾರು ಮಾಡಿದರು ಮಾತ್ರವಲ್ಲದೆ ಉತ್ತಮ ಜೊತೆಯಾಟವನ್ನು ನೀಡಿದರು. 97 ರನ್‌ಗಳ ಜೊತೆಯಾಟದ ಬಳಿಕ ಈ ಜೋಡಿ ಬೇರ್ಪಟ್ಟಿತು. ಬಾಬಾ ಇಂದ್ರಜಿತ್ 50 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರವೂ ಬಾಬಾ ಅಪರಾಜಿತ್ ಪ್ರದರ್ಶನ ಮುಂದುವರಿದಿತ್ತು. ದಿನೇಶ್ ಕಾರ್ತಿಕ್ ಜೊತೆಯೂ ಅದ್ಭುತ ಜೊಯೆಯಾಟ ಮುಂದಿವರಿಸಿದ ಅವರು ತಂಡವನ್ನು ಗೆಲುವಿನತ್ತ ಮುನ್ನುಗ್ಗಿಸಿದರು. ಭರ್ಜರಿ ಶತಕ ಸಿಡಿಸಿದ ಅಪರಾಜಿತ್ 122 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಈ ವೇಳೆಗೆ ತಂಡದ ಮೊತ್ತ 244ಕ್ಕೆ 5 ವಿಕಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ತಂಡಕ್ಕೆ ನೆರವಾಗಿದ್ದು ವಾಶಿಂಗ್ಟನ್ ಸುಂದರ್. ಅಮೋಗ ಬ್ಯಾಟಿಂಗ್ ಪ್ರದರ್ಶಿಸಿದ ಸುಂದರ್ 70 ರನ್‌ಗಳ ಮಹತ್ವದ ಕೊಡುಗೆಯನ್ನು ನೀಡಿ ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿ ಗೆಲುವಿಗೆ 9 ರನ್‌ಗಳ ಅಗತ್ಯವಿದ್ದಾಗ ವಿಕೆಟ್ ಕಳೆದುಕೊಂಡರು. ನಂತರ ಕೊನೆಯ ಎಸೆತದವರೆಗೂ ಸಾಗಿದ ಈ ಪಂದ್ಯದಲ್ಲಿ ಅಂತಿಮವಾಗಿ ತಮಿಳುನಾಡು ತಂಡ ರೋಚಕ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ.

ಪ್ರೋ ಕಬಡ್ಡಿ ಲೀಗ್ 8: ಬೆಂಗಳೂರು ಬುಲ್ಸ್ vs ತಮಿಳು ತಲೈವಾಸ್ ಕಾದಾಟದಲ್ಲಿ ಯಾರು ಬಲಿಷ್ಠರು?ಪ್ರೋ ಕಬಡ್ಡಿ ಲೀಗ್ 8: ಬೆಂಗಳೂರು ಬುಲ್ಸ್ vs ತಮಿಳು ತಲೈವಾಸ್ ಕಾದಾಟದಲ್ಲಿ ಯಾರು ಬಲಿಷ್ಠರು?

ಹಿಮಾಚಲ ಪ್ರದೇಶ vs ಸರ್ವಿಸಸ್, ಸೆಮಿ ಫೈನಲ್‌ ಹೈಲೈಟ್ಸ್: ಈ ಪಂದ್ಯದಲ್ಲಿ ಸರ್ವಿಸಸ್ ತಂಡ ಟಾಸ್ ಗೆದ್ದು ಎದುರಾಳಿ ಹಿಮಾಚಲ ಪ್ರದೇಶ ತಂಡವನ್ನು ಮೊದಲಿಗೆ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಈ ಸವಾಲನ್ನು ಸ್ವೀಕರಿಸಿದ ಹಿಮಾಚಲ ಪ್ರದೇಶ ತಂಡ ಆರಂಭಿಕ ಕುಸಿತವನ್ನು ಕಂಡಿತಾದರೂ ಬಳಿಕ ಚೇತರಿಸಿಕೊಂಡು ಅದ್ಭುತ ಪ್ರದರ್ಶನ ನೀಡಿತು. ಅದರಲ್ಲೂ ಆರಂಭಿಕ ಆಟಗಾರ ಪ್ರಶಾಂತ್ ಚೋಪ್ರ 78 ರನ್‌ಗಳನ್ನು ಗಳಿಸಿ ಉತ್ತಮ ಆಟವನ್ನು ಪ್ರದರ್ಶಿಸಿದರು. ನಂತರ ತಮಡದ ನಾಯಕ ರಿಷಿ ಧವನ್ ಕೂಡ ಅದ್ಭುತ ಆಟವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ನಾಯಕನ ಆಟವಾಡಿದ ರಿಷಿ 84 ರನ್‌ಗಳ ಕೊಡುಗೆಯನ್ನು ನೀಡಿದರು. ಈ ಮೂಲಕ ಹಿಮಾಚಲ ಪ್ರದೇಶ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 281 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.

ಈ ಮೊತ್ತವನ್ನು ಬೆನ್ನಟ್ಟಿದ ಸರ್ವಿಸಸ್ ತಂಡಕ್ಕೆ ಉತ್ತಮ ಜೊತೆಯಾಟ ದೊರೆಯಲಿಲ್ಲ. ಆರಂಬಿಕ ಆಟಗಾರ ರವಿ ಚೌಹಾಣ್ 45 ರನ್‌ಗಳ ಕೊಡುಗೆ ನೀಡಿದರೆ ನಾಯಕ ರಜತ್ ಪಲಿವಾಲ್ 55 ರನ್‌ಗಳ ಕೊಡುಗೆಯನ್ನು ನೀಡಿದರು. ಉಳಿದ ಆಟಗಾರರಿಂದ ನಿರ್ಣಾಯಕ ಕೊಡುಗೆ ಬಾರಲಿಲ್ಲ. ಅಂತಿಮವಾಗಿ 46.1 ಓವರ್‌ಗಳಲ್ಲಿ ಸರ್ವಿಸಸ್ ತಂಡ 204 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಫೈನಲ್ ಕನಸನ್ನು ಕೈಬಿಟ್ಟಿತು. ಈ ಮೂಲಕ ಹಿಮಾಚಲ ಪ್ರದೇಶ 77 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಹೀಗಾಗಿ ಇದೇ ಮೊದಲ ಬಾರಿಗೆ ವಿಜಯ್ ಹಜಾರೆ ಟೂರ್ನಿಯ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಕಪಿಲ್ ದೇವ್ ನೋಡಿ ಕಲಿಯಿರಿ: ಕೊಹ್ಲಿ-ರೋಹಿತ್‌ಗೆ ಸಲಹೆ ನೀಡಿದ ಬಲ್ವಿಂದರ್ ಸಿಂಗ್ ಸಂದುಕಪಿಲ್ ದೇವ್ ನೋಡಿ ಕಲಿಯಿರಿ: ಕೊಹ್ಲಿ-ರೋಹಿತ್‌ಗೆ ಸಲಹೆ ನೀಡಿದ ಬಲ್ವಿಂದರ್ ಸಿಂಗ್ ಸಂದು

ಫೈನಲ್ ಪಂದ್ಯ: ಇನ್ನು ವಿಜಯ್ ಹಜಾರೆ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹಿಮಾಚಲ ಪ್ರದೇಶ ಹಾಗೂ ತಮಿಳುನಾಡು ತಂಡಗಳು ಮುಖಾಮುಖಿಯಾಗಲಿದೆ. ಡಿಸೆಂಬರ್ 26 ಭಾನುವಾರ ಈ ಪಮದ್ಯ ನಡೆಯಲಿದ್ದು ಚಾಂಪಿಯನ್ ಪಟ್ಟಕ್ಕೇರುವ ತಂಡ ಯಾವುದು ಎಂಬ ಕುತೂಹಲಕ್ಕೆ ಉತ್ತರ ದೊರೆಯಲಿದೆ. ಚೊಚ್ಚಲ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸದಲ್ಲಿ ಹಿಮಾಚಲ ಪ್ರದೇಶ ತಂಡವಿದ್ದರೆ ತಮಿಳುನಾಡು ತಂಡ ಈ ವರ್ಷ ದೇಶೀಯ ಕ್ರಿಕೆಟ್‌ನ ಎರಡನೇ ಟ್ರೋಪಿಯನ್ನು ಗೆಲ್ಲುವ ಆತ್ಮ ವಿಶ್ವಾಸದಲ್ಲಿದೆ.

ತಮಿಳುನಾಡು ತಂಡ: ಎನ್ ಜಗದೀಸನ್, ಬಾಬಾ ಇಂದ್ರಜಿತ್, ವಾಷಿಂಗ್ಟನ್ ಸುಂದರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಬಾಬಾ ಅಪರಾಜಿತ್, ವಿಜಯ್ ಶಂಕರ್ (ನಾಯಕ), ಶಾರುಖ್ ಖಾನ್, ಆರ್ ಸಿಲಂಬರಸನ್, ಸಂದೀಪ್ ವಾರಿಯರ್, ಮಣಿಮಾರನ್ ಸಿದ್ಧಾರ್ಥ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಹರಿ ನಿಶಾಂತ್, ಸಂಜಯ್ ಯಾದವ್, ಕೌಶಿಕ್ ಗಾಂಧಿ, ಮುರುಗನ್ ಅಶ್ವಿನ್, ಎಂ ಮೊಹಮ್ಮದ್, ಲಕ್ಷ್ಮೇಶ ಸೂರ್ಯಪ್ರಕಾಶ್, ಜಗತೀಸನ್ ಕೌಸಿಕ್, ಗಂಗಾ ಶ್ರೀಧರ್ ರಾಜು, ಪಿ ಸರವಣ ಕುಮಾರ್, ಸಾಯಿ ಸುದರ್ಶನ್.

ಹಿಮಾಚಲ ಪ್ರದೇಶ ತಂಡ: ಶುಭಂ ಅರೋರಾ (ವಿಕೆಟ್ ಕೀಪರ್), ಪ್ರಶಾಂತ್ ಚೋಪ್ರಾ, ನಿಖಿಲ್ ಗಂಗ್ಟಾ, ಅಮಿತ್ ಕುಮಾರ್, ರಿಷಿ ಧವನ್ (ನಾಯಕ), ಸುಮೀತ್ ವರ್ಮಾ, ಆಕಾಶ್ ವಸಿಷ್ಟ್, ಮಯಾಂಕ್ ದಾಗರ್, ವಿನಯ್ ಗಲೇಟಿಯಾ, ಪಂಕಜ್ ಜೈಸ್ವಾಲ್, ಸಿದ್ಧಾರ್ಥ್ ಶರ್ಮಾ, ಆಯುಷ್ ಜಮ್ವಾಲ್, ಜಿ ತುರ್ವಿನ್ ಗುಲೇರಿಯಾ, ಸಿಂಗ್, ಪ್ರಿಯಾಂಶು ಖಂಡೂರಿ, ವೈಭವ್ ಅರೋರಾ, ಅಮಿತ್ ಠಾಕೂರ್.

ಕನ್ನಡದ KL Rahul ಹಾಗು Mayank Agarwal ಅವರ ಸ್ನೇಹ ಇಂದು ನಿನ್ನೆಯದಲ್ಲ | Oneindia Kannada

Story first published: Friday, December 24, 2021, 21:50 [IST]
Other articles published on Dec 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X