ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಯುಡು ಜೊತೆ ನನ್ನನ್ನು ಹೋಲಿಸಲೇಬೇಡಿ ; '3D ಪ್ಲೇಯರ್' ಟ್ಯಾಗ್ ಕುರಿತು ವಿಜಯ್ ಶಂಕರ್ ಗರಂ

Vijay Shankar opens up about Ambati Rayudus 3D player tag
ನಾನು 3D ಪ್ಲೇಯರ್ ಅಲ್ಲ ಎಂದ ವಿಜಯ್ ಶಂಕರ್

2019ರ ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿತ್ತು. ಈ ತಂಡದಲ್ಲಿ ಅಂಬಾಟಿ ರಾಯುಡು ಬದಲು ವಿಜಯ್ ಶಂಕರ್‌ಗೆ ಸ್ಥಾನವನ್ನು ನೀಡಲಾಗಿತ್ತು. ತಂಡದಲ್ಲಿ ತನಗೆ ಸ್ಥಾನ ದೊರಕದಿದ್ದ ವಿಷಯ ತಿಳಿದ ಕೂಡಲೇ ಅಂಬಾಟಿ ರಾಯುಡು ಈ ವಿಶ್ವಕಪ್ ಟೂರ್ನಿಯನ್ನು ನೋಡಲು 3D ಕನ್ನಡಕ ಬೇಕು ಎಂದು ಟ್ವೀಟ್ ಮಾಡುವ ಮೂಲಕ ಆಯ್ಕೆ ಸಮಿತಿಯನ್ನು ಕಾಲೆಳೆದಿದ್ದರು. ದಿನ ಕಳೆದಂತೆ ಅಂಬಾಟಿ ರಾಯುಡು ಬದಲು ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದ ವಿಜಯ್ ಶಂಕರ್ ಕಳಪೆ ಪ್ರದರ್ಶನ ತೋರಿದಾಗಲೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಈ '3D' ಟ್ಯಾಗ್ ಬಳಸಿ ನೆಟ್ಟಿಗರು ಟ್ರೋಲ್ ಮಾಡಲಾರಂಭಿಸಿದರು.

ಆದರೆ ಈ ವಿಷಯದ ಕುರಿತು ಇದುವರೆಗೂ ಮಾತನಾಡದಿದ್ದ ವಿಜಯ್ ಶಂಕರ್ ಇದೀಗ ತುಟಿ ಬಿಚ್ಚಿದ್ದಾರೆ. 'ನನಗೂ ಅದಕ್ಕೂ ಸಂಬಂಧವೇ ಇಲ್ಲ, 3D ಪ್ಲೇಯರ್ ಎಂಬ ಟ್ಯಾಗ್‌ನ್ನು ಸುಮ್ಮನೆ ನನ್ನ ಹೆಸರಿನ ಜೊತೆ ತಳುಕು ಹಾಕಿದರು ಮತ್ತು ಅದನ್ನು ವೈರಲ್ ಮಾಡಿದರು. ವಿಶ್ವಕಪ್ ಟೂರ್ನಿಗೆ ಆಯ್ಕೆಯಾದ ನಂತರ ಟೀಮ್ ಇಂಡಿಯಾ ಪರ 3 ಪಂದ್ಯಗಳನ್ನಾಡಿ ಒಳ್ಳೆಯ ಪ್ರದರ್ಶನವನ್ನೂ ನೀಡಿದೆ, ನಾನೇನು ಕೆಟ್ಟ ಪ್ರದರ್ಶನವನ್ನು ನೀಡಲಿಲ್ಲ. ಐಪಿಎಲ್ ಟೂರ್ನಿಯಲ್ಲಿ ನಾನು ಆಡುವ ಬ್ಯಾಟಿಂಗ್ ಕ್ರಮಾಂಕ ತುಂಬಾ ಭಿನ್ನವಾಗಿದೆ. ಕೆಲವೊಂದಷ್ಟು ಜನ ರಾಯುಡು ಜೊತೆ ನನ್ನನ್ನು ಹೋಲಿಸಿ ಟ್ರೋಲ್ ಮಾಡುತ್ತಾರೆ, ಆದರೆ ಆತ ಆಡುವ ಬ್ಯಾಟಿಂಗ್ ಕ್ರಮಾಂಕಕ್ಕೂ ನಾನು ಆಡುವ ಬ್ಯಾಟಿಂಗ್ ಕ್ರಮಾಂಕಕ್ಕೂ ತುಂಬಾ ವ್ಯತ್ಯಾಸವಿದೆ. ಅದನ್ನು ಗಮನಿಸದೆ ಮನರಂಜನೆಗೋಸ್ಕರ ತಮಗೆ ಬೇಕಾದ ರೀತಿಯಲ್ಲಿ ಟ್ರೋಲ್ ಮಾಡುತ್ತಾರೆ. ರಾಯುಡು ಮತ್ತು ನನ್ನ ಬ್ಯಾಟಿಂಗ್ ಕ್ರಮಾಂಕ ಬೇರೆಯಾಗಿರುವುದರಿಂದ ನಮ್ಮಿಬ್ಬರ ನಡುವೆ ಹೋಲಿಕೆ ಬೇಡವೇ ಬೇಡ' ಎಂದು ವಿಜಯ್ ಶಂಕರ್ ನೆಟ್ಟಿಗರಿಗೆ ಉತ್ತರ ನೀಡಿದ್ದಾರೆ.

ಟೀಮ್ ಇಂಡಿಯಾದ ಹಲವರಿಗಿಂತ ನಾನು ಚೆನ್ನಾಗಿ ಆಡಿದ್ದೇನೆ : ವಿಜಯ್ ಶಂಕರ್ಟೀಮ್ ಇಂಡಿಯಾದ ಹಲವರಿಗಿಂತ ನಾನು ಚೆನ್ನಾಗಿ ಆಡಿದ್ದೇನೆ : ವಿಜಯ್ ಶಂಕರ್

ಹೀಗೆ ತನ್ನನ್ನು ಟ್ರೋಲ್ ಮಾಡುವವರಿಗೆ ಉತ್ತರ ನೀಡುವುದರ ಮೂಲಕ ವಿಜಯ್ ಶಂಕರ್ 2 ವರ್ಷಗಳ ಬಳಿಕ '3D ಪ್ಲೇಯರ್' ಟ್ಯಾಗ್ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗದೆ ಉಳಿದಿರುವ ವಿಜಯ್ ಶಂಕರ್ ಶ್ರೀಲಂಕಾ ವಿರುದ್ಧ ನಡೆಯಲಿರುವ ಸೀಮಿತ ಓವರ್‌ಗಳ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಆಡಲು ಅವಕಾಶ ಸಿಗುತ್ತಾ ಎಂದು ಎದುರು ನೋಡುತ್ತಿದ್ದಾರೆ.

1. ನಾನು ಆಡುವ ಕ್ರಮಾಂಕ ಸರಿಯಿಲ್ಲ

1. ನಾನು ಆಡುವ ಕ್ರಮಾಂಕ ಸರಿಯಿಲ್ಲ

ರಾಯುಡು ಜೊತೆ ತನ್ನನ್ನು ಹೋಲಿಸಿ ಮಾತನಾಡುವವರಿಗೆ ಉತ್ತರ ನೀಡಿರುವ ವಿಜಯ್ ಶಂಕರ್ ತಾನು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವಂತಹ ಆಟಗಾರರ ಆದರೆ ಅಂಬಾಟಿ ರಾಯುಡು ಮೇಲಿನ ಕ್ರಮಾಂಕದಲ್ಲಿ ಕಣಕ್ಕಿಳಿಯುವಂತಹ ಆಟಗಾರ, ಹೀಗಾಗಿ ತನ್ನ ಮತ್ತು ಅಂಬಾಟಿ ರಾಯುಡು ನಡುವೆ ಹೋಲಿಕೆ ಮಾಡಿ ಪ್ರದರ್ಶನವನ್ನು ಅಳೆಯುವುದು ಸಮಂಜಸವಲ್ಲ ಎಂದು ವಿಜಯ್ ಶಂಕರ್ ಹೇಳಿದ್ದಾರೆ.

2. ಆರಂಭ ಮಾಡುವ ಅವಕಾಶ ಕೊಟ್ಟರೆ ಚೆನ್ನಾಗಿ ಆಡಬಲ್ಲೆ

2. ಆರಂಭ ಮಾಡುವ ಅವಕಾಶ ಕೊಟ್ಟರೆ ಚೆನ್ನಾಗಿ ಆಡಬಲ್ಲೆ

ತನಗೂ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಅವಕಾಶವನ್ನು ಕೊಟ್ಟರೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡುವ ವಿಶ್ವಾಸವನ್ನು ವಿಜಯಶಂಕರ್ ವ್ಯಕ್ತಪಡಿಸಿದ್ದಾರೆ.

3. ಕಾಲಿಸ್, ವಾಟ್ಸನ್ ರೀತಿ ನಾನೂ ಮಿಂಚಬಹುದು

3. ಕಾಲಿಸ್, ವಾಟ್ಸನ್ ರೀತಿ ನಾನೂ ಮಿಂಚಬಹುದು

ಇನ್ನೂ ಮುಂದುವರೆದು ಮಾತನಾಡಿರುವ ವಿಜಯ್ ಶಂಕರ್ ತನಗೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಅವಕಾಶ ನೀಡಿದರೆ ಜಾಕ್ ಕಾಲಿಸ್ ಮತ್ತು ಶೇನ್ ವಾಟ್ಸನ್ ರೀತಿ ಉತ್ತಮ ಆರಂಭವನ್ನು ಮಾಡಿ ಹಾಗೂ ಬೌಲಿಂಗ್ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ನೀಡುವಂತಹ ಸಾಮರ್ಥ್ಯ ತನ್ನಲ್ಲಿದೆ ಎಂದು ಹೇಳಿಕೊಂಡಿದ್ದಾರೆ.

4. 3D ಪ್ಲೇಯರ್ ಟ್ಯಾಗ್‌ಗೂ ನನಗೂ ಸಂಬಂಧವಿಲ್ಲ

4. 3D ಪ್ಲೇಯರ್ ಟ್ಯಾಗ್‌ಗೂ ನನಗೂ ಸಂಬಂಧವಿಲ್ಲ

2019ರ ವಿಶ್ವಕಪ್ ಆಯ್ಕೆಯ ವೇಳೆ ಅಂಬಾಟಿ ರಾಯುಡು ಮಾಡಿದ್ದ '3D' ಟ್ವೀಟ್ ನನಗಲ್ಲ, ಆದರೆ ಸಾಮಾಜಿಕ ಜಾಲತಾಣದಲ್ಲಿ ಅದನ್ನು ನನ್ನ ಹೆಸರಿಗೆ ತಳುಕು ಹಾಕಲಾಯಿತು ಮತ್ತು ಸಾಕಷ್ಟು ಟೀಕೆಗಳನ್ನು ಮಾಡಲಾಯಿತು ಎಂದು ವಿಜಯ್ ಶಂಕರ್ ಹೇಳಿದ್ದಾರೆ.

Story first published: Wednesday, May 19, 2021, 18:27 [IST]
Other articles published on May 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X