ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಗಾಯದ ಬಳಿಕ ಟಿಎನ್‌ಪಿಎಲ್‌ ಮೂಲಕ ಮೈದಾನಕ್ಕಿಳಿದ ವಿಜಯ್

Vijay Shankar returns to action in TNPL after World Cup 2019 injury

ತಿರುನೆಲ್ವೇಲಿ, ಆಗಸ್ಟ್ 10: ಇಂಗ್ಲೆಂಡ್‌ ಮತ್ತು ವೇಲ್ಸ್‌ ನಲ್ಲಿ ನಡೆದ ಐಸಿಸಿ ವಿಶ್ವಕಪ್‌ನಲ್ಲಿ ಗಾಯಗೊಂಡ ಬಳಿಕ ಭಾರತದ ಆಲ್ ರೌಂಡರ್ ವಿಜಯ್ ಶಂಕರ್, ತಮಿಳ್‌ನಾಡ್ ಪ್ರೀಮಿಯರ್ ಲೀಗ್‌ (ಟಿಎನ್‌ಪಿಎಲ್‌) ಮೂಲಕ ಮತ್ತೆ ಮೈದಾನಕ್ಕಿಳಿದಿದ್ದಾರೆ. ಟಿಎನ್‌ಪಿಎಲ್ ನಾಲ್ಕನೇ ಸೀಸನ್‌ನಲ್ಲಿ ವಿಜಯ್ ಪಾದಾರ್ಪಣೆ ಮಾಡಿದ್ದಾರೆ.

ಆ್ಯಂಸ್ಟರ್‌ಡ್ಯಾಮ್ ಆಸ್ಪತ್ರೆಯಲ್ಲಿದ್ದಾರೆ ಸ್ಫೋಟಕ ಬ್ಯಾಟ್ಸ್ಮನ್ ಸುರೇಶ್ ರೈನಾಆ್ಯಂಸ್ಟರ್‌ಡ್ಯಾಮ್ ಆಸ್ಪತ್ರೆಯಲ್ಲಿದ್ದಾರೆ ಸ್ಫೋಟಕ ಬ್ಯಾಟ್ಸ್ಮನ್ ಸುರೇಶ್ ರೈನಾ

ತಿರುನೆಲ್ವೇಲಿಯಲ್ಲಿ ಶುಕ್ರವಾರ (ಆಗಸ್ಟ್ 9) ನಡೆದ ಟಿಎನ್‌ಪಿಎಲ್‌ನಲ್ಲಿ ಮಾಜಿ ಚಾಂಪಿಯನ್ ಚೆಪಕ್ ಸೂಪರ್ ಗಿಲ್ಲೀಸ್ ಪರ ಟೂಟಿ ಪ್ಯಾಟ್ರಿಯೋಟ್ಸ್ ವಿರುದ್ಧದ ಪಂದ್ಯದ ಮೂಲಕ ವಿಜಯ್ ಶಂಕರ್ ಟಿಎನ್‌ಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ವಿಶೇಷವೆಂದರೆ ಪಂದ್ಯದಲ್ಲಿ ಮೊದಲ ಎಸೆತಕ್ಕೇ ವಿಜಯ್‌ಗೆ ವಿಕೆಟ್ ಲಭಿಸಿತು.

ಇಂಡಿಯಾ 'ಎ'ಯಲ್ಲಿ ತೊಡಗಿಕೊಳ್ಳುತ್ತಿದ್ದರಿಂದ ಮತ್ತು ಗಾಯದ ಸಮಸ್ಯೆಯ ಕಾರಣಕ್ಕಾಗಿ ಶಂಕರ್‌ಗೆ ಹಿಂದಿನ ಮೂರು ಟಿಎನ್‌ಪಿಎಲ್‌ ಸೀಸನ್‌ಗಳಲ್ಲಿ ಪಾಲ್ಗೊಳ್ಳಲಾಗಿರಲಿಲ್ಲ. ಶುಕ್ರವಾರದ ಪಂದ್ಯದಲ್ಲಿ ವಿಜಯ್‌ ಬ್ಯಾಟಿಂಗ್‌ನಲ್ಲಿ ಮಿಂಚದಿದ್ದರೂ (3 ರನ್, 7 ಎಸೆತ) 15 ರನ್‌ಗೆ 2 ವಿಕೆಟ್ ಪಡೆದು ಗಮನ ಸೆಳೆದರು.

ವಿರಾಟ್ ಕೊಹ್ಲಿ ಮಿಮಿಕ್ ಮಾಡಿದ ರವೀಂದ್ರ ಜಡೇಜಾ: ಗಮ್ಮತ್ತಿನ ವಿಡಿಯೋವಿರಾಟ್ ಕೊಹ್ಲಿ ಮಿಮಿಕ್ ಮಾಡಿದ ರವೀಂದ್ರ ಜಡೇಜಾ: ಗಮ್ಮತ್ತಿನ ವಿಡಿಯೋ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆಪಕ್ ಸೂಪರ್ ಗಿಲ್ಲೀಸ್, ಗೋಪಿನಾಥ್ 53, ಉತಿರಸಾಮಿ ಸಸಿದೇವ್ 27 ರನ್‌ನೊಂದಿಗೆ 19.3 ಓವರ್‌ನಲ್ಲಿ ಸರ್ವ ಪತನ ಕಂಡು 127 ರನ್ ಮಾಡಿತು. ಗುರಿ ಬೆಂಬತ್ತಿದ ಟೂಟಿ ಪ್ಯಾಟ್ರಿಯೋಟ್ಸ್ 18.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 95 ರನ್ ಪೇರಿಸಲಷ್ಟೇ ಶಕ್ತವಾಯ್ತು.

Story first published: Saturday, August 10, 2019, 13:45 [IST]
Other articles published on Aug 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X