ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ತಂಡಕ್ಕೆ ವಿನಯ್ ನಾಯಕ

By Malenadiga
Vinay Kumar to lead Karnataka in Vijay Hazare Trophy KL Rahul returns

ಬೆಂಗಳೂರು, ಫೆಬ್ರವರಿ 05: ಭಾರತದ ಪ್ರತಿಷ್ಠಿತ ಏಕದಿನ ಕ್ರಿಕೆಟ್ ಸಮರ 'ವಿಜಯ್ ಹಜಾರೆ ಟ್ರೋಫಿ'ಗೆ ಕರ್ನಾಟಕ ತಂಡವನ್ನು ಸೋಮವಾರದಂದು ಕರ್ನಾಟಕ ಕ್ರಿಕೆಟ್ ನಿಯಂತ್ರಣ ಮಂಡಳಿ ( ಕೆಎಸ್ ಸಿಎ) ಪ್ರಕಟಿಸಿದೆ. ಆರ್ ವಿನಯ್ ಕುಮಾರ್ ನಾಯಕರಾಗಿದ್ದರೆ, ಕೆಎಲ್ ರಾಹುಲ್ ಅವರು ತಂಡಕ್ಕೆ ಮರಳಿದ್ದಾರೆ.

ಟೂರ್ನಿಯ ಎ ಗುಂಪಿನಲ್ಲಿರು ಕರ್ನಾಟಕ ತಂಡವು ಎರಡು ಬಾರಿ ಚಾಂಪಿಯನ್ ಆಗಿ ಮೆರೆದಿದೆ. ತನ್ನ ಲೀಗ್ ಪಂದ್ಯಗಳನ್ನು ಬೆಂಗಳೂರಿನ ಹೊರ ವಲಯದ ಆಲೂರು ಹಾಗೂ ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ಆಡಲಿದೆ.

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ತಂಡಕ್ಕೆ ಮರಳಿದ ಕರುಣ್ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ತಂಡಕ್ಕೆ ಮರಳಿದ ಕರುಣ್

ಸ್ಟಾರ್ ಆಟಗಾರರು ಕಣಕ್ಕೆ : ಆರ್. ಅಶ್ವಿನ್, ಮುರಳಿ ವಿಜಯ್ ಹಾಲಿ ಚಾಂಪಿಯನ್ ತಮಿಳುನಾಡಿನ ಪರ ಆಡುತ್ತಿದ್ದಾರೆ. ದೆಹಲಿ ಪರ ಇಶಾಂತ್ ಶರ್ಮ, ಗೌತಮ್ ಗಂಭೀರ್, ಸೌರಾಷ್ಟ್ರ ಪರ ಕನ್ನಡಿಗ ರಾಬಿನ್ ಉತ್ತಪ್ಪ, ಚೇತೇಶ್ವರ ಪೂಜಾರ, ಪಂಜಾಬ್ ಪರ ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ವಿದರ್ಭ ಪರ ಕನ್ನಡಿಗ ಗಣೇಶ್ ಸತೀಶ್ ಕಣಕ್ಕಿಳಿಯಲಿದ್ದಾರೆ.

ಕರ್ನಾಟಕ ಪಂದ್ಯಗಳ ವೇಳಾಪಟ್ಟಿ:
ಫೆಬ್ರವರಿ 07 (ಬುಧವಾರ) : ಬರೋಡ ವಿರುದ್ಧ, ಜಸ್ಟ್ ಕ್ರಿಕೆಟ್ ಮೈದಾನ.
ಫೆಬ್ರವರಿ 08 (ಗುರುವಾರ) : ಅಸ್ಸಾಂ ವಿರುದ್ಧ, ಜಸ್ಟ್ ಕ್ರಿಕೆಟ್ ಮೈದಾನ.
ಫೆಬ್ರವರಿ 10 (ಶನಿವಾರ) : ಹರ್ಯಾಣ ವಿರುದ್ಧ, ಆಲೂರು ಮೈದಾನ 2.
ಫೆಬ್ರವರಿ 11 (ಭಾನುವಾರ) : ಪಂಜಾಬ್ ವಿರುದ್ಧ, ಆಲೂರು ಮೈದಾನ 2.
ಫೆಬ್ರವರಿ 13 (ಮಂಗಳವಾರ) : ಒಡಿಶಾ ವಿರುದ್ಧ, ಆಲೂರು ಮೈದಾನ 1.
ಫೆಬ್ರವರಿ 16 (ಶುಕ್ರವಾರ) : ರೈಲ್ವೇಸ್ ವಿರುದ್ಧ, ಆಲೂರು ಮೈದಾನ 1.

ತಂಡ ಇಂತಿದೆ: ಆರ್ ವಿನಯ್ ಕುಮಾರ್, ಕೆಎಲ್ ರಾಹುಲ್, ಮಯಾಂಕ್ ಅಗರವಾಲ್, ಕರುಣ್ ನಾಯರ್(ಉಪ ನಾಯಕ), ಆರ್ ಸಮರ್ಥ್, ಪವನ್ ದೇಶಪಾಂಡೆ, ಸಿಎಂ ಗೌತಮ್(ವಿಕೆಟ್ ಕೀಪರ್), ಕೆ ಗೌತಮ್, ಶ್ರೇಯಸ್ ಗೋಪಾಲ್, ಎ ಮಿಥುನ್, ಪ್ರಸಿದ್ಧ್ ಕೃಷ್ಣ, ಟಿ ಪ್ರದೀಪ್, ಅನಿರುಧ ಜೋಶಿ, ಜೆ ಸುಚಿತ್, ರಿತೇಶ್ ಭಟ್ಕಳ್, ಪ್ರವೀಣ್ ದುಬೇ. ಕೋಚ್ : ಪಿವಿ ಶಶಿಕಾಂತ್.

Story first published: Saturday, September 15, 2018, 16:03 [IST]
Other articles published on Sep 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X