ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಅಧಿಕಾರ ಮೊಟಕು: ಸಂಪೂರ್ಣ ಆಡಳಿತ ಸಿಒಎ ವಶಕ್ಕೆ

ನವದೆಹಲಿ, ಆಗಸ್ಟ್ 24: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸಂಪೂರ್ಣ ಅಧಿಕಾರವನ್ನು ಸುಪ್ರೀಂಕೋರ್ಟ್‌ನಿಂದ ನೇಮಕವಾದ ಆಡಳಿತ ಸಮಿತಿ (ಸಿಒಎ) ವಹಿಸಿಕೊಂಡಿದೆ.

ಬಿಸಿಸಿಐನ ಆಯ್ಕೆ ಸಮಿತಿ ಮತ್ತು ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಹೊರತುಪಡಿಸಿ ಉಳಿದ ಎಲ್ಲ ಉಪಸಮಿತಿಗಳೂ ರದ್ದುಗೊಂಡಿವೆ.

ಬಿಸಿಸಿಐ ಹೊಸ ಸಂವಿಧಾನದ ಕರಡು ಪ್ರತಿಗೆ ಸುಪ್ರೀಂಕೋರ್ಟ್ ಒಪ್ಪಿಗೆಬಿಸಿಸಿಐ ಹೊಸ ಸಂವಿಧಾನದ ಕರಡು ಪ್ರತಿಗೆ ಸುಪ್ರೀಂಕೋರ್ಟ್ ಒಪ್ಪಿಗೆ

ಬಿಸಿಸಿಐನ ಈಗಿರುವ ಪದಾಧಿಕಾರಿಗಳನ್ನು ವಜಾಗೊಳಿಸುವುದಿಲ್ಲ ಎಂದು ಸಿಒಎ ಅಧ್ಯಕ್ಷ ವಿನೋದ್ ರಾಯ್ ತಿಳಿಸಿದ್ದಾರೆ. ಆದರೆ, ಅವರು ಎಲ್ಲ ಚಟುವಟಿಕೆಗಳಿಗೂ ಸಿಒಎ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿರಲಿದೆ ಎಂದು ಹೇಳಿದ್ದಾರೆ.

ಪದಾಧಿಕಾರಿಗಳ ಅಧಿಕಾರ ಮೊಟಕು

ಪದಾಧಿಕಾರಿಗಳ ಅಧಿಕಾರ ಮೊಟಕು

ಬಿಸಿಸಿಐನ ಮೂವರು ಪದಾಧಿಕಾರಿಗಳಾದ ಸಿ.ಕೆ. ಖನ್ನಾ (ಹಂಗಾಮಿ ಅಧ್ಯಕ್ಷ), ಅಮಿತಾಭ್ ಚೌಧರಿ (ಹಂಗಾಮಿ ಕಾರ್ಯದರ್ಶಿ) ಮತ್ತು ಅನಿರುದ್ಧ್ ಚೌಧರಿ (ಖಜಾಂಚಿ) ಅವರ ಅಧಿಕಾರಗಳಿಗೆ ಕತ್ತರಿ ಬಿದ್ದಿದೆ. ಯಾವುದೇ ನಿರ್ಧಾರ ಅಥವಾ ಪ್ರವಾಸ ಕೈಗೊಳ್ಳಬೇಕಾದರೂ ಅವರು ಸಿಒಎ ಒಪ್ಪಿಗೆ ಪಡೆದುಕೊಳ್ಳುವುದು ಕಡ್ಡಾಯ.

ವೇತನ ಪಡೆದು ಕಾರ್ಯನಿರ್ವಹಿಸುವ ಅಧಿಕಾರಿಗಳಾದ ಸಿಇಒ ರಾಹುಲ್ ಜೊಹ್ರಿ, ಸಿಎಫ್‌ಒ ಸಂತೋಷ್ ರೇಂಗಣೆಕರ್, ಐಪಿಎಲ್ ಸಿಒಒ ಹೇಮಂಗ್ ಅಮಿನ್ ಅವರಿಗೆ ಮಾತ್ರ ಕಡತಗಳಿಗೆ ಸಹಿ ಹಾಕುವ ಅಧಿಕಾರ ನೀಡಲಾಗಿದೆ.

ಸುಪ್ರೀಂಕೋರ್ಟ್ ಇತ್ತೀಚೆಗೆ ಅನುಮೋದನೆ ನೀಡಿದ ಹೊಸ ಸಂವಿಧಾನವನ್ನು ಬಿಸಿಸಿಐ ನೋಂದಣಿ ಮಾಡಿಕೊಂಡಿದೆ. ಅದರ ಅನ್ವಯ ಹೊಸದಾಗಿ ಚುನಾವಣೆಗಳು ನಡೆಯುವವರೆಗೂ ಸಿಇಒ ರಾಹುಲ್ ಜೊಹ್ರಿ ನೇತೃತ್ವದ ವೃತ್ತಿಪರ ನಿರ್ವಹಣಾ ಮಂಡಳಿಯು ದೈನಂದಿನ ಚಟುವಟಿಕೆಗಳ ಉಸ್ತುವಾರಿ ನಿರ್ವಹಿಸಲಿದೆ ಎಂದು ಸಿಒಎ ತಿಳಿಸಿದೆ.

ಬಿಸಿಸಿಐ ಸಂವಿಧಾನ: ಸುಪ್ರೀಂಕೋರ್ಟ್ ನಿರ್ಧಾರಕ್ಕೆ ನ್ಯಾ. ಲೋಧಾ ಅತೃಪ್ತಿ

ಸಂವಿಧಾನದ ಅಡಿ ವ್ಯವಹಾರ

ಸಂವಿಧಾನದ ಅಡಿ ವ್ಯವಹಾರ

ಆಗಸ್ಟ್ 21ರಿಂದ ಹೊಸ ನಿಯಮಾವಳಿಯು ನೋಂದಣಿಯಾದ ಸಂದರ್ಭದಿಂದಲೇ ಅದು ಜಾರಿಯಾಗಿದೆ. ಅದರ ಅನ್ವಯವೇ ಬಿಸಿಸಿಐ ವ್ಯವಹಾರಗಳು ನಡೆಯಬೇಕಿದೆ ಎಂದು ವಿನೋದ್ ರಾಯ್ (ಅಧ್ಯಕ್ಷ), ಭಾರತದ ಮಹಿಳಾ ಕ್ರಿಕೆಟ್ ತಂಡ ಮಾಜಿ ನಾಯಕಿ ಡಯಾನಾ ಎಡುಲ್ಜಿ (ಸದಸ್ಯೆ) ಅವರನ್ನು ಒಳಗೊಂಡ ಸಿಒಎ, ಪದಾಧಿಕಾರಿಗಳು ಹಾಗೂ ವೃತ್ತಿಪರ ನಿರ್ವಹಣಾ ಮಂಡಳಿಗೆ ಮೂರು ಪುಟಗಳ ಪತ್ರದಲ್ಲಿ ತಿಳಿಸಿದೆ.

ಬಿಸಿಸಿಐ-ಆಡಳಿತ ಸಮಿತಿ ಗುದ್ದಾಟ ತಾರಕಕ್ಕೆ

ಅಪೆಕ್ಸ್ ಕೌನ್ಸಿಲ್‌ ಕಾರ್ಯ ನಿರ್ವಹಣೆ

ಅಪೆಕ್ಸ್ ಕೌನ್ಸಿಲ್‌ ಕಾರ್ಯ ನಿರ್ವಹಣೆ

ನೂತನ ಸಂವಿಧಾನದ ಅಡಿಯಲ್ಲಿ ಅಪೆಕ್ಸ್ ಕೌನ್ಸಿಲ್‌ ಬಿಸಿಸಿಐ ಕಾರ್ಯವನ್ನು ನಿರ್ವಹಿಸಲಿದೆ. ಅಪೆಕ್ಸ್ ಕೌನ್ಸಿಲ್‌ನಲ್ಲಿ ಒಂಬತ್ತು ಕೌನ್ಸಿಲರ್‌ಗಳು, ಬಿಸಿಸಿಐ ಸದಸ್ಯರಿಂದ ಚುನಾಯಿತರಾದ ಐವರು ಪ್ರಾತಿನಿಧಿಕ ಪದಾಧಿಕಾರಿಗಳು, ಆಟಗಾರರ ವಿಭಾಗದಿಂದ ಇಬ್ಬರು (ಒಬ್ಬ ಪುರುಷ, ಒಬ್ಬ ಮಹಿಳೆ) ಮತ್ತು ಕಂಟ್ರೋಲರ್ ಹಾಗೂ ಆಡಿಟರ್ ಜನರಲ್ ಕಚೇರಿಯ ಒಬ್ಬ ಅಧಿಕಾರಿ ಇರಲಿದ್ದಾರೆ.

ಇದು ಹೊಸ ಚುನಾವಣೆ ನಡೆಯುವವರೆಗೂ ಅಪೆಕ್ಸ್ ಕೌನ್ಸಿಲ್ ಹಾಗೂ ಐಪಿಎಲ್ ಆಡಳಿತ ಸಮಿತಿಯ ಪಾತ್ರವನ್ನು ನಿರ್ವಹಿಸಲಿದೆ ಎಂದು ಸಿಒಎ ತಿಳಿಸಿದೆ.

ಆಯ್ಕೆ ಸಮಿತಿ, ಸಿಎಸಿ ಮುಕ್ತ

ಆಯ್ಕೆ ಸಮಿತಿ, ಸಿಎಸಿ ಮುಕ್ತ

ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಅವರನ್ನು ಒಳಗೊಂಡ ಮೂವರು ಸದಸ್ಯರ ಸಿಎಸಿ ಹಾಗೂ ಐವರು ಸದಸ್ಯರ ಆಯ್ಕೆ ಸಮಿತಿಯ ಕಾರ್ಯಚಟುವಟಿಕೆಗಳು ಸಿಒಎ ನಿಯಂತ್ರಣಕ್ಕೆ ಒಳಪಟ್ಟಿರುವುದಿಲ್ಲ.

ಹೊಸ ಉಪ ಸಮಿತಿಗಳು ಜಾರಿಗೆ ಬರುವ ಮೊದಲು ಯಾವುದೇ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದ್ದರೆ ಸಿಒಎ ಸ್ವತಃ ಅದನ್ನು ಬಗೆಹರಿಸುವುದಾಗಿ ಅಥವಾ ತಾತ್ಕಾಲಿಕ ಸಮಿತಿಯ ಪರಿಣತರನ್ನು ಬಳಸಿಕೊಳ್ಳುವುದಾಗಿ ತಿಳಿಸಿದೆ.

ಸಾಬಾ ಕರೀಂಗೆ ಮಾತ್ರ ಅಧಿಕಾರ ಏಕೆ?

ಸಾಬಾ ಕರೀಂಗೆ ಮಾತ್ರ ಅಧಿಕಾರ ಏಕೆ?

ಆದರೆ, ಕ್ರಿಕೆಟ್ ಚಟುವಟಿಕೆಗಳ ವಿಭಾಗದ ಮುಖ್ಯ ವ್ಯವಸ್ಥಾಪಕ ಸಾಬಾ ಕರೀಂ ಅವರಿಗೆ ನೀಡಿರುವ ಅಧಿಕಾರಗಳನ್ನು ಮೊಟಕುಗೊಳಿಸದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.

ಸಿಇಒ ಮತ್ತು ಸಿಎಫ್ಒ ಅವರಿಗೆ ಅಧಿಕಾರ ನೀಡಿರುವುದರ ಬಗ್ಗೆ ಆಕ್ಷೇಪವಿಲ್ಲ. ಆದರೆ, ಸಾಬಾ ಕರೀಂ ಅವರಿಗೆ ಏಕೆ ಮಾತ್ರ ಸಹಿ ಹಾಕುವ ಅಧಿಕಾರ ಉಳಿಸಿರುವುದು ಎನ್ನುವುದು ಗೊತ್ತಾಗುತ್ತಿಲ್ಲ. ದೇಶಿ ಕ್ರಿಕೆಟ್ ನಿಯಮಗಳನ್ನು ರೂಪಿಸಲು ಹಾಗೂ ಮಹಿಳಾ ಕ್ರಿಕೆಟ್ ತಂಡಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳುವ ವಿಭಾಗದಲ್ಲಿ ಸಾಬಾ ಕರೀಂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಅಧಿಕಾರ ಅಷ್ಟಕ್ಕೆ ಮಾತ್ರ ಸೀಮಿತಗೊಳಿಸಬೇಕು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಾಬಾ ಕರೀಂ ಅವರಿಗೆ ಯಾವುದೇ ಕಾರಣ ನೀಡದೆ ಇಂಗ್ಲೆಂಡ್‌ಗೆ ತೆರಳಲು ಹಣ ಮಂಜೂರು ಮಾಡುವಂತೆ ಸಿಒಎ ಈ ಹಿಂದೆ ಬಿಸಿಸಿಐ ಖಜಾಂಚಿಗೆ ಪತ್ರ ಬರೆದಿದ್ದು ವಿವಾದಕ್ಕೆ ಕಾರಣವಾಗಿತ್ತು.

Story first published: Friday, August 24, 2018, 16:41 [IST]
Other articles published on Aug 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X