ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಂಡೀಸ್‌ ಎದುರು ಮತ್ತೊಂದು ದಾಖಲೆಗೆ ಕೊಹ್ಲಿ-ರೋಹಿತ್‌ ಜೋಡಿ ಸಜ್ಜು

Virat and Rohit on verge 2019

ಪೋರ್ಟ್‌ ಆಫ್‌ ಸ್ಪೇನ್‌, ಆಗಸ್ಟ್‌ 14: ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಮತ್ತು ಉಪ ನಾಯಕ ರೋಹಿತ್‌ ಶರ್ಮಾ, ಬುಧವಾರ (ಆಗಸ್ಟ್‌ 14) ನಡೆಯಲಿರುವ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಜೊತೆಯಾಗಿ ಆಡುವ ಅವಕಾಶ ಸಿಕ್ಕರೆ ನೂತನ ದಾಖಲೆಯೊಂದನ್ನು ಬರೆಯಲಿದ್ದಾರೆ.

ರನ್‌ ಮಷೀನ್‌ ವಿರಾಟ್‌ ಕೊಹ್ಲಿ ಮತ್ತು ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌, ವೆಸ್ಟ್‌ ಇಂಡೀಸ್‌ ವಿರುದ್ಧ ಇನ್ನು 27 ರನ್‌ಗಳ ಜೊತೆಯಾಟವಾಡಿದೆ ಕೆರಿಬಿಯನ್ನರ ಎದುರು ಏಕದಿನ ಕ್ರಿಕೆಟ್‌ನಲ್ಲಿ 1000 ರನ್‌ಗಳನ್ನು ಗಳಿಸಿದ ದಾಖಲೆ ಬರೆಯಲಿದ್ದಾರೆ.

ಇಂಡಿಯಾ vs ವಿಂಡೀಸ್‌: 3ನೇ ಏಕದಿನಕ್ಕೆ ಭಾರತ ತಂಡದ ಸಂಭಾವ್ಯ XIಇಂಡಿಯಾ vs ವಿಂಡೀಸ್‌: 3ನೇ ಏಕದಿನಕ್ಕೆ ಭಾರತ ತಂಡದ ಸಂಭಾವ್ಯ XI

ಇದೇ ವೇಳೆ ಭಾರತ ತಂಡದ ಯುವ ಸ್ಪಿನ್ನರ್‌ ಚೈನಾಮನ್‌ ಶೈಲಿಯ ಕುಲ್ದೀಪ್ ಯಾದವ್‌ ಕೂಡ ದಾಖಲೆಯ ಹೊಸ್ತಿಲಲ್ಲಿದ್ದು, ಅತಿ ವೇಗವಾಗಿ ಭಾರತ ತಂಡದ ಪರ 100 ಒಡಿಐ ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಲು 4 ವಿಕೆಟ್‌ಗಳನ್ನಷ್ಟೇ ಪಡೆಯಬೇಕಿದೆ. 24 ವರ್ಷದ ಪ್ರತಿಭಾನ್ವಿತ ಸ್ಪಿನ್ನರ್ ಕುಲ್ದೀಪ್‌, 53 ಏಕದಿನ ಪಂದ್ಯಗಳಲ್ಲಿ 96 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 75ರಿಂದ 80 ಶತಕ ದಾಖಲಿಸಲಿದ್ದಾರಂತೆ!ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 75ರಿಂದ 80 ಶತಕ ದಾಖಲಿಸಲಿದ್ದಾರಂತೆ!

ಅಂದಹಾಗೆ ಕುಲ್ದೀಪ್‌ ಟೆಸ್ಟ್‌, ಏಕದಿನ ಹಾಗೂ ಅಂತಾರಾಷ್ಟ್ರೀಯ ಟಿ20 ಮೂರೂ ವಿಭಾಗಗಳಲ್ಲಿ ಐದು ವಿಕೆಟ್‌ ಪಡೆದ ವಿಶ್ವದ ಮೊದಲ ಬೌಲರ್‌ ಎಂಬ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.

ವೆಸ್ಟ್‌ ಇಂಡೀಸ್‌ ಎದುರು ಮೂರನೇ ಏಕದಿನ ಪಂದ್ಯದಲ್ಲಿ ಕುಲ್ದೀಪ್‌ಗೆ ಈ ಸಾಧನೆ ಮೆರೆಯುವ ಉತ್ತಮ ಅವಕಾಶವಿದೆ. ಸದ್ಯ ಟೀಮ್‌ ಇಂಡಿಯಾದ ವೇಗಿ ಮೊಹಮ್ಮದ್‌ ಶಮಿ, 56 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಏಕದಿನ ಸರಣಿಯಲ್ಲಿ ಭಾರತ ತಂಡ 1-0 ಅಂತರದಲ್ಲಿ ಮುನ್ನಡೆಯಲ್ಲಿದ್ದು, ಮೂರನೇ ಪಂದ್ಯ ಗೆದ್ದು ಸರಣಿ ಜಯ ದಾಖಲಿಸುವುದನ್ನು ಎದುರು ನೋಡುತ್ತಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ಭಾರತ ವಿರುದ್ಧದ ಟಿ20, ಟೆಸ್ಟ್‌ ಸರಣಿಗೆ ತಂಡ ಪ್ರಕಟಿಸಿದ ದ. ಆಫ್ರಿಕಾಭಾರತ ವಿರುದ್ಧದ ಟಿ20, ಟೆಸ್ಟ್‌ ಸರಣಿಗೆ ತಂಡ ಪ್ರಕಟಿಸಿದ ದ. ಆಫ್ರಿಕಾ

ಕುಲ್ದೀಪ್‌ ಏಕದಿನ ಕ್ರಿಕೆಟ್‌ನ ಬೌಲಿಂಗ್‌ ಸಾಧನೆ
53 ಪಂದ್ಯ
2772 ಎಸೆತಗಳು
2291 ನೀಡಿರುವ ರನ್‌
96 ಪಡೆದ ವಿಕೆಟ್‌
6/25 ಶ್ರೇಷ್ಠ ಸಾಧನೆ
23.86 ಸರಾಸರಿ
4.95 ಎಕಾನಮಿ
28.8 ಸ್ಟ್ರೈಕ್‌ರೇಟ್‌
04 ನಾಲ್ಕು ವಿಕೆಟ್‌ ಸಾಧನೆ
01 ಐದು ವಿಕೆಟ್‌ ಸಾಧನೆ

Story first published: Wednesday, August 14, 2019, 15:46 [IST]
Other articles published on Aug 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X