ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಗೆ ಧೈರ್ಯ ತುಂಬಿದ ಆಸಿಸ್ ಮಾಜಿ ವೇಗದ ಬೌಲರ್

Brett lee and virat kohli

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಬೆಂಬಲಿಸಿ ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಬ್ರೆಟ್‌ ಲೀ ಮಾತನಾಡಿದ್ದಾರೆ. ವಿರಾಟ್ ಫಾರ್ಮ್‌ ಬಗ್ಗೆ ಹಲವರು ಟೀಕಿಸುತ್ತಿರುವುದು ಸರಿಯಲ್ಲ ಎಂದು ಆಸಿಸ್ ಮಾಜಿ ವೇಗಿ ಹೇಳಿದ್ದಾರೆ.

ವಿವಿರಾಟ್ ಕೊಹ್ಲಿಯನ್ನು ತಂಡದಿಂದ ತೆಗೆದುಹಾಕಬೇಕು ಎಂದು ಹಲವರು ಹೇಳುತ್ತಿದ್ದಾರೆ. ವಿರಾಟ್ ಕೊಹ್ಲಿ ಕೊನೆಯ ಬಾರಿ ಶತಕ ಬಾರಿಸಿ ಎರಡೂವರೆ ವರ್ಷಗಳಾದವು ಎಂಬುದು ಹಲವರು ಹೇಳುವ ಪ್ರಮುಖ ಕಾರಣವಾಗಿದೆ. ಇತ್ತೀಚೆಗೆ ಭಾರತದ ಲೆಜೆಂಡ್ ಕಪಿಲ್ ದೇವ್ ಕೂಡ , ನಂಬರ್ 2 ರ್ಯಾಂಕಿಂಗ್ ಬೌಲರ್‌ ರವಿಚಂದ್ರನ್ ಅಶ್ವಿನ್‌ರನ್ನು ಟೆಸ್ಟ್‌ನಿಂದ ಹೊರಗಿಡುವುದೇ ಆದಲ್ಲಿ, ಟಿ20 ಕ್ರಿಕೆಟ್‌ನಿಂದ ವಿರಾಟ್‌ನನ್ನು ಏಕೆ ಕೈಬಿಡಬಾರದು ಎಂದು ಪ್ರಶ್ನಿಸಿದ್ದರು. ಹೀಗಿರುವಾಗ ಆಸ್ಟ್ರೇಲಿಯಾ ಮಾಜಿ ಬೌಲರ್ ಕೊಹ್ಲಿ ಬೆಂಬಲಿಸಿ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ ಕೆಲವು ತಪ್ಪುಗಳನ್ನ ಮಾಡುತ್ತಿದ್ದಾರೆ

ವಿರಾಟ್ ಕೊಹ್ಲಿ ಕೆಲವು ತಪ್ಪುಗಳನ್ನ ಮಾಡುತ್ತಿದ್ದಾರೆ

ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ರನ್ ಗಳಿಸಲು ಆರಂಭಿಸಿದ್ದರೂ, ಕೆಲವು ತಪ್ಪುಗಳನ್ನು ಮಾಡುವ ಮೂಲಕ ವಿಕೆಟ್‌ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಆಫ್ ಸೈಡ್ ಬಾಲ್ ಹೊಡೆಯಲು ಯತ್ನಿಸಿ ವಿಕೆಟ್ ಕೀಪರ್ ಗೆ ಕ್ಯಾಚಿತ್ತು ಪೆವಿಲಿಯನ್‌ಗೆ ಮರಳುತ್ತಿದ್ದಾರೆ. ವಿರಾಟ್ ಕೊಹ್ಲಿ ಈ ವಿಧಾನವನ್ನು ಬದಲಾಯಿಸಿದರೆ, ಅವರು ರನ್ ಸೇರಿಸಬಹುದು. ವಿರಾಟ್ ಕೊಹ್ಲಿ ಅನೇಕರು ಟೀಕೆ ಮಾಡಿದರೂ ಸಹ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಯನ್ನು ಬೆಂಬಲಿಸಿ ಮಾತನಾಡುತ್ತಲೇ ಇದ್ದಾರೆ.

ಈ ಐವರು ಟೀಂ ಇಂಡಿಯಾ ಆಟಗಾರರಿಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ

ವಿರಾಟ್‌ಗೆ ಧೈರ್ಯ ತುಂಬಿದ ಬ್ರೆಟ್‌ ಲೀ

ವಿರಾಟ್‌ಗೆ ಧೈರ್ಯ ತುಂಬಿದ ಬ್ರೆಟ್‌ ಲೀ

ಹೀಗಿರುವಾಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಬ್ರೆಟ್‌ ಲೀ ವಿರಾಟ್ ಕೊಹ್ಲಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ವಿರಾಟ್ ಕೊಹ್ಲಿಗೆ ಕೇವಲ 33 ವರ್ಷ. ಈಗಾಗಲೇ ವಿರಾಟ್ ಕೊಹ್ಲಿ 70 ಶತಕಗಳನ್ನು ದಾಟಿದ್ದಾರೆ. ವಿರಾಟ್ ಕೊಹ್ಲಿ ಇನ್ನೂ ನಾಲ್ಕು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿದ್ದಾರೆ. ಹೀಗಾಗಿ ಚಿಂತೆಗೊಳಗಾಗುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

IND vs ENG 3rd ODI: ನಿರ್ಣಾಯಕ ಪಂದ್ಯದ ಡ್ರೀಮ್ ಟೀಮ್ ಪ್ರೆಡಿಕ್ಷನ್, ಸಂಭಾವ್ಯ ತಂಡಗಳ ಮಾಹಿತಿ

ಕೊಹ್ಲಿ ಅತ್ಯುತ್ತಮ ಪ್ರದರ್ಶನ ಇನ್ನೂ ಹೊರಬಂದಿಲ್ಲ

ಕೊಹ್ಲಿ ಅತ್ಯುತ್ತಮ ಪ್ರದರ್ಶನ ಇನ್ನೂ ಹೊರಬಂದಿಲ್ಲ

ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಪ್ರದರ್ಶನವನ್ನು ನಾವು ಇನ್ನೂ ನೋಡಿಲ್ಲ. ವಿರಾಟ್ ಕೊಹ್ಲಿ ಅವರು ಮೊದಲಿಗಿಂತ ಉತ್ತಮವಾಗಿ ಆಡುತ್ತಾರೆ ಮತ್ತು ಭವಿಷ್ಯದಲ್ಲಿ ರನ್ ಗಳಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಬ್ರೆಟ್‌ ಲೀ ಹೇಳಿದ್ದು ನಿಜವಾಗಿದೆ. ಏಕೆಂದರೆ ಸಚಿನ್ ಅವರನ್ನು ತೆಗೆದುಕೊಂಡರೆ, ಅವರು ಫಾರ್ಮ್ ಕಳೆದುಕೊಂಡ ಬಳಿಕವೂ ಕಂಬ್ಯಾಕ್ ಮಾಡಿ ಅನೇಕ ಶತಕಗಳನ್ನು ಗಳಿಸಿದ್ದಾರೆ.

ಕೊಹ್ಲಿಯಂತಹ ಕ್ರಿಕೆಟಿಗರು ತಮ್ಮ ಬ್ಯಾಟಿಂಗ್ ನಲ್ಲಿ ಇಂತಹ ನ್ಯೂನತೆಗಳನ್ನು ಹೊಂದಿರುವುದು ಸಾಮಾನ್ಯ. ಅವರು ಪುಟಿದೇಳುವ ಮತ್ತು ಮೊದಲಿಗಿಂತ ಹೆಚ್ಚು ರನ್ ಗಳಿಸುವ ಎಲ್ಲಾ ಸಾಧ್ಯತೆಗಳಿವೆ. ಬ್ರೆಟ್‌ಲೀ ಅವರ ಮಾತು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಉಲ್ಲಾಸದಾಯಕವಾಗಿದೆ. ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಹಳೆಯ ಫಾರ್ಮ್ ಗೆ ಮರಳುತ್ತಾರೆಯೇ ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.

Story first published: Sunday, July 17, 2022, 10:32 [IST]
Other articles published on Jul 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X