ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಬಾಂಗ್ಲಾ: ಮತ್ತೊಂದು ವಿಶ್ವದಾಖಲೆ ಸನಿಹದಲ್ಲಿದ್ದಾರೆ ವಿರಾಟ್ ಕೊಹ್ಲಿ!

Virat Kohli 32 runs away from scripting history at Eden Gardens

ಕೋಲ್ಕತ್ತಾ, ನವೆಂಬರ್ 20: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ವಿಶ್ವದಾಖಲೆ ಸನಿಹದಲ್ಲಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ vs ಬಾಂಗ್ಲಾದೇಶ ನಡುವಿನ ದ್ವಿತೀಯ ಮತ್ತು ಕೊನೆಯ ಟೆಸ್ಟ್‌ನಲ್ಲಿ ಕೊಹ್ಲಿ ದಾಖಲೆ ಪೂರೈಸಿಕೊಳ್ಳುವ ನಿರೀಕ್ಷೆಯಿದೆ.

ಕ್ರಿಸ್‌ ಲಿನ್ ಸ್ಫೋಟಕ ಬ್ಯಾಟಿಂಗ್, ಕೆಕೆಆರ್‌ನತ್ತ ಸಿಕ್ಸರ್ ಬೀಸಿದ ಯುವರಾಜ್!ಕ್ರಿಸ್‌ ಲಿನ್ ಸ್ಫೋಟಕ ಬ್ಯಾಟಿಂಗ್, ಕೆಕೆಆರ್‌ನತ್ತ ಸಿಕ್ಸರ್ ಬೀಸಿದ ಯುವರಾಜ್!

ಇಂದೋರ್‌ನಲ್ಲಿ ಮುಕ್ತಾಯಗೊಂಡ ಇತ್ತಂಡಗಳ ನಡುವಿನ ಮೊದಲನೇ ಟೆಸ್ಟ್‌ನಲ್ಲಿ ಭಾರತ ಇನ್ನಿಂಗ್ಸ್ ಸಹಿತ 130 ರನ್‌ಗಳ ಭರ್ಜರಿ ಗೆಲುವನ್ನಾಚರಿಸಿತ್ತು. ದ್ವಿತೀಯ ಟೆಸ್ಟ್‌ ಆಗಿ ಎರಡೂ ತಂಡಗಳು ಚೊಚ್ಚಲ ಬಾರಿಗೆ ಡೆ-ನೈಟ್‌ ಟೆಸ್ಟ್‌ನಲ್ಲಿ ಪಾಲ್ಗೊಳ್ಳಲಿವೆ.

ಶ್ರೀಲಂಕಾ ಸ್ಪಿನ್ನರ್‌ನ ವಿಚಿತ್ರ ಬೌಲಿಂಗ್ ಶೈಲಿ ನೋಡಿ: ವೈರಲ್ ವಿಡಿಯೋಶ್ರೀಲಂಕಾ ಸ್ಪಿನ್ನರ್‌ನ ವಿಚಿತ್ರ ಬೌಲಿಂಗ್ ಶೈಲಿ ನೋಡಿ: ವೈರಲ್ ವಿಡಿಯೋ

ಮೊದಲ ಟೆಸ್ಟ್‌ನಲ್ಲಿ ಡಕ್‌ ಔಟ್ ಆಗಿದ್ದ ಕೊಹ್ಲಿ ದ್ವಿತೀಯ ಟೆಸ್ಟ್‌ನಲ್ಲಿ ಕೊಂಚ ಹೊತ್ತು ಬ್ಯಾಟ್‌ ಬೀಸಿದರೂ ಅವರ ಹೆಸರಿನಲ್ಲಿ ಇತಿಹಾಸ ನಿರ್ಮಾಣವಾಗಲಿದೆ.

ಕೇವಲ 32 ರನ್‌ ಬೇಕು

ಕೇವಲ 32 ರನ್‌ ಬೇಕು

ಡೇ-ನೈಟ್‌ ಟೆಸ್ಟ್ ವೇಳೆ ಕೊಹ್ಲಿಯೇನಾದರೂ 32ಕ್ಕೂ ಅಧಿಕ ರನ್ ಗಳಿಸಿದರೆ, ನಾಯಕನಾಗಿದ್ದುಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5000 ರನ್ ಮೈಲುಗಲ್ಲು ಸ್ಥಾಪಿಸಿದ ಮೊದಲ ಭಾರತೀಯನಾಗಿ ಹೊಸ ಇತಿಹಾಸ ನಿರ್ಮಾಣವಾಗಲಿದೆ.

ವಿಶ್ವದ 6ನೇ ಆಟಗಾರ

ವಿಶ್ವದ 6ನೇ ಆಟಗಾರ

ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯುವ ಡೇ ನೈಟ್ ಟೆಸ್ಟ್‌ನಲ್ಲಿ ಕೊಹ್ಲಿ 32ಕ್ಕೂ ಹೆಚ್ಚಿನ ರನ್ ಗಳಿಸಿದರೆ ರಾಷ್ಟ್ರೀಯ ತಂಡದ ನಾಯಕನಾಗಿದ್ದುಕೊಂಡು 5000 ರನ್ ಮಾಡಿದ ವಿಶ್ವದ 6ನೇ ಆಟಗಾರನಾಗಿ ಕೊಹ್ಲಿ ಗುರುತಿಸಿಕೊಳ್ಳಲಿದ್ದಾರೆ.

ದಾಖಲೆ ಸರದಾರರು

ದಾಖಲೆ ಸರದಾರರು

ನಾಯಕನಾಗಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5 ಸಾವಿರಕ್ಕೂ ಅಧಿಕ ರನ್ ಗಳಿಸಿದ ದಾಖಲೆ ಸಾಲಿನಲ್ಲಿ ಗೇಮ್ ಸ್ಮಿತ್ (ದಕ್ಷಿಣ ಆಫ್ರಿಕಾ), ಅಲನ್ ಬಾರ್ಡರ್ (ಆಸ್ಟ್ರೇಲಿಯಾ), ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ), ಕ್ಲೈವ್ ಲಾಯ್ಡ್ (ವೆಸ್ಟ್ ಇಂಡೀಸ್), ಸ್ಟೀಫನ್ ಫ್ಲೆಮಿಂಗ್ (ನ್ಯೂಜಿಲೆಂಡ್) ಇದ್ದಾರೆ.

ಡೇ-ನೈಟ್ ಟೆಸ್ಟ್ ಆರಂಭ

ಡೇ-ನೈಟ್ ಟೆಸ್ಟ್ ಆರಂಭ

ಭಾರತ vs ಬಾಂಗ್ಲಾದೇಶ, ಡೇ-ನೈಟ್ ಟೆಸ್ಟ್ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್‌ ಸ್ಟೇಡಿಯಂನಲ್ಲಿ ನವೆಂಬರ್ 22ರಿಂದ 26ರ ವರೆಗೆ ನಡೆಯಲಿದೆ. ಪಂದ್ಯ 1 pmಗೆ ಆರಂಭಗೊಳ್ಳಲಿದೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ ಸ್ಟಾರ್‌ ನಲ್ಲಿ ಪಂದ್ಯ ನೇರಪ್ರಸಾರಗೊಳ್ಳಲಿದೆ. ಮೈಖೇಲ್‌ ಕನ್ನಡದಲ್ಲೂ ನೀವು ಲೈವ್ ಸ್ಕೋರ್‌ ವೀಕ್ಷಿಸಬಹುದು.

Story first published: Wednesday, November 20, 2019, 12:18 [IST]
Other articles published on Nov 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X