ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕನಾಗಿ ಮತ್ತೊಂದು ದಾಖಲೆ ಮುರಿದ ವಿರಾಟ್ ಕೊಹ್ಲಿ

ಮತ್ತೊಂದು ದಾಖಲೆ ಮುರಿದ ವಿರಾಟ್ ಕೊಹ್ಲಿ..? | Oneindia Kannada
Virat Kohli 3rd captain in Test history to score 1000 away runs in a calendar year

ಪರ್ತ್, ಡಿಸೆಂಬರ್ 17: ಇಲ್ಲಿ ನಡೆಯುತ್ತಿರುವ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಅವರು ನಾಯಕರಾಗಿ ಮತ್ತೊಂದು ದಾಖಲೆ ಬರೆದಿದ್ದಾರೆ.

ಒಂದು ಕ್ಯಾಲೆಂಡರ್ ವರ್ಷದಲ್ಲಿ ಸಾವಿರ ರನ್ ಗಳಿಸಿದ ಭಾರತದ ಮೂರನೇ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಈ ಮುಂದೆ ಈ ಸಾಧನೆಯನ್ನು ಮಾಜಿ ಕ್ರಿಕೆಟಿಗರಾದ ಮೊಹಿಂದರ್ ಅಮರ್ ನಾಥ್ ಹಾಗೂ ರಾಹುಲ್ ದ್ರಾವಿಡ್ ಮಾಡಿದ್ದರು.

ನಾಯಕನಾಗಿ ಮತ್ತೊಂದು ದಾಖಲೆ ಮುರಿದ ವಿರಾಟ್ ಕೊಹ್ಲಿ ನಾಯಕನಾಗಿ ಮತ್ತೊಂದು ದಾಖಲೆ ಮುರಿದ ವಿರಾಟ್ ಕೊಹ್ಲಿ

ಕೊಹ್ಲಿಗಿಂತ ಮುಂಚೆ ಇದೇ ಸಾಧನೆಯನ್ನು ಈ ಮುಂಚೆ 10 ಮಂದಿ ಕ್ರಿಕೆಟರ್ ಗಳು ಮಾಡಿದ್ದಾರೆ. ಸಿಂಪ್ಸನ್, ವಿವ್ ರಿಚರ್ಡ್ಸ್, ಮೊಹಿಂದರ್ ಅಮರ್ ನಾಥ್, ರಾಹುಲ್ ದ್ರಾವಿಡ್, ಎಂ ಮೆಕ್ಕೆಂಜಿ, ಗ್ರಹಾಂ ಸ್ಮಿತ್, ಅಲೆಸ್ಟರ್ ಕುಕ್, ಹಶೀಂ ಅಮ್ಲ, ಯೂನಸ್ ಖಾನ್, ಅಜರ್ ಅಲಿ ಪಟ್ಟಿಯಲ್ಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ 6 ಶತಕ ಗಳಿಸಿದವರ ಪೈಕಿ ಕಳೆದ 70 ವರ್ಷಗಳಲ್ಲಿ ಸಚಿನ್ ಹಾಗೂ ಕೊಹ್ಲಿ ಮಾತ್ರ ಈ ಸಾಧನೆ ಮಾಡಿದ್ದಾರೆ.

ವಿದೇಶದಲ್ಲಿ ನಾಯಕರಾಗಿ 1000 ಪ್ಲಸ್ ರನ್ ಗಳಿಕೆ

ವಿದೇಶದಲ್ಲಿ ನಾಯಕರಾಗಿ 1000 ಪ್ಲಸ್ ರನ್ ಗಳಿಕೆ

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರಹಾಂ ಸ್ಮಿತ್ ಅವರು 11 ಟೆಸ್ಟ್ ಪಂದ್ಯಗಳಿಂದ 1212ರನ್, 2008 ಅತಿ ಹೆಚ್ಚು ರನ್ ಗಳಿಸಿದ ನಾಯಕರಾಗಿದ್ದಾರೆ. 2003ರಲ್ಲೂ 1000ಪ್ಲಸ್ ರನ್ ಗಳಿಸಿದ್ದರು.

ಮೂರನೇ ಭಾರತೀಯ ಆಟಗಾರ

ಮೂರನೇ ಭಾರತೀಯ ಆಟಗಾರ

ಕೊಹ್ಲಿ 19 ಇನ್ನಿಂಗ್ಸ್ ಗಳಿಂದ 1021 ಪ್ಲಸ್ ರನ್ ಗಳನ್ನು ಕಲೆ ಹಾಕಿದ್ದಾರೆ. ರಾಹುಲ್ ದ್ರಾವಿಡ್ 2002ರಲ್ಲಿ 18 ಇನ್ನಿಂಗ್ಸ್ ಗಳಲ್ಲಿ 1137ರನ್ ಗಳಿಸಿದ್ದರು. ಮೊಹಿಂದರ್ ಅಮರನಾಥ್ 1983ರಲ್ಲಿ 16 ಇನ್ನಿಂಗ್ಸ್ ಗಳಲ್ಲಿ 1065ರನ್ ಬಾರಿಸಿದ್ದರು.

ನಾಯಕರಾಗಿ ಕೊಹ್ಲಿ 2000ರನ್ ಗಳಿಕೆ

ನಾಯಕರಾಗಿ ಕೊಹ್ಲಿ 2000ರನ್ ಗಳಿಕೆ

ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾ ನೆಲದಲ್ಲಿ 10 ಟೆಸ್ಟ್ ಗಳಿಂದ 62.7ರನ್ ಸರಾಸರಿಯಂತೆ 1129ರನ್ ಕಲೆಹಾಕಿದ್ದಾರೆ.

ಇದಲ್ಲದೆ, ಕೊಹ್ಲಿ ಅವರು ಭಾರತ ಹಾಗೂ ವಿದೇಶಿ ನೆಲ ಎರಡರಲ್ಲೂ 2000 ಪ್ಲಸ್ ರನ್ ಕಲೆಹಾಕಿದ್ದಾರೆ. ಈ ಸಾಧನೆ ಮಾಡಿದ ಏಕೈಕ ಭಾರತೀಯ ನಾಯಕ ಎನಿಸಿಕೊಂಡಿದಾರೆ. ಆಸ್ಟ್ರೇಲಿಯಾ ವಿರುದ್ಧ ತ್ವರಿತವಾಗಿ 1000ರನ್ ಗಳಿಸಿದ್ದು ಕೂಡಾ ಕೊಹ್ಲಿ.

ಉತ್ತಮ ರನ್ ಸರಾಸರಿ ಟಾಪ್ 03

ಉತ್ತಮ ರನ್ ಸರಾಸರಿ ಟಾಪ್ 03

ಜನವರಿ 2017ರಿಂದ ಕನಿಷ್ಟ 500ಪ್ಲಸ್ ರನ್ ಗಳಿಸಿದ ಆಟಗಾರರ ಪೈಕಿ ಕೊಹ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ.

ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಅವರು 20 ಇನ್ನಿಂಗ್ಸ್ ಗಳಿಂದ 67.47ರನ್ ಸರಾಸರಿ ಹೊಂದಿದ್ದರೆ, ಕೊಹ್ಲಿ 37 ಇನ್ನಿಂಗ್ಸ್ ಗಳಿಂದ 66.02, ಸ್ಟೀವ್ ಸ್ಮಿತ್ 23 ಇನ್ನಿಂಗ್ಸ್ ಗಳಿಂದ 63.75ರನ್ ಸರಾಸರಿ ಹೊಂದಿದ್ದಾರೆ.

Story first published: Tuesday, December 18, 2018, 11:50 [IST]
Other articles published on Dec 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X