ಐತಿಹಾಸಿಕ ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ

ನಾಯಕನಾಗಿ ಟೆಸ್ಟ್ ನಲ್ಲಿ ರನ್ 5000 ರನ್ ಗಳಿಸಿದ ಭಾರತದ ಮೊದಲ ಬ್ಯಾಟ್ಸ್ ಮನ್ ಕೊಹ್ಲಿ | Omeindia Kannada
Virat Kohli achieves huge milestone in historic pink ball Test

ಕೋಲ್ಕತ್ತಾ, ನೆವೆಂಬರ್ 22: ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ-ಭಾರತ ನಡುವಿನ ಐತಿಹಾಸಿಕ ಚೊಚ್ಚಲ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಡೇ-ನೈಟ್‌ ಟೆಸ್ಟ್: ಕೀಪಿಂಗ್ ದಾಖಲೆ ನಿರ್ಮಿಸಿದ ಭಾರತದ ವೃದ್ಧಿಮಾನ್ ಸಹಾ

ಶುಕ್ರವಾರ (ನವೆಂಬರ್ 22) ಆರಂಭಗೊಂಡಿರುವ ಪಿಂಕ್‌ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಅರ್ಧ ಶತಕ ಬಾರಿಸಿರುವ ಕೊಹ್ಲಿ, ನಾಯಕನಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ 5000 ರನ್ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಆಗಿ ಇತಿಹಾಸ ಬರೆದಿದ್ದಾರೆ.

ಮಾನಸಿಕ ಒತ್ತಡಕ್ಕೆ ಮತ್ತೋರ್ವ ಕ್ರಿಕೆಟರ್ ವಿರಾಮ

ದ್ವಿತೀಯ ಟೆಸ್ಟ್ ಆಗಿ ನಡೆಯುತ್ತಿರುವ ಈ ಡೇ-ನೈಟ್‌ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಮುನ್ನಡೆ ಸಾಧಿಸಿದೆ.

ದಾಖಲೆಗೆ 32 ರನ್ ಬೇಕಿತ್ತು

ದಾಖಲೆಗೆ 32 ರನ್ ಬೇಕಿತ್ತು

ಕೋಲ್ಕತ್ತಾದಲ್ಲಿನ ಪಿಂಕ್‌ ಬಾಲ್ ಟೆಸ್ಟ್‌ಗೂ ಮುನ್ನ, ನಾಯಕನಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 5000 ರನ್ ಮೈಲಿಗಲ್ಲು ಸ್ಥಾಪಿಸಲು ಕೇವಲ 32 ರನ್‌ಗಳ ಅವಶ್ಯಕತೆಯುತ್ತು. ಶುಕ್ರವಾರ (ನವೆಂಬರ್ 22) ಮೊದಲ ದಿನದಾಟದಲ್ಲಿ 59 ರನ್ ಬಾರಿಸಿದ ಕೊಹ್ಲಿ ದಾಖಲೆ ಪೂರೈಸಿಕೊಂಡರು.

ವಿಶ್ವದ ಆರನೇ ಬ್ಯಾಟ್ಸ್‌ಮನ್

ವಿಶ್ವದ ಆರನೇ ಬ್ಯಾಟ್ಸ್‌ಮನ್

ನಾಯಕನಾಗಿದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ 5 ಸಾವಿರಕ್ಕೂ ಅಧಿಕ ರನ್ ಗಳಿಸಿದ ದಾಖಲೆ ಸಾಲಿನಲ್ಲಿ ಕೊಹ್ಲಿ, ವಿಶ್ವದ 6ನೇ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಗ್ರೇಮ್ ಸ್ಮಿತ್ (ದಕ್ಷಿಣ ಆಫ್ರಿಕಾ), ಅಲನ್ ಬಾರ್ಡರ್ (ಆಸ್ಟ್ರೇಲಿಯಾ), ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ), ಕ್ಲೈವ್ ಲಾಯ್ಡ್ (ವೆಸ್ಟ್ ಇಂಡೀಸ್), ಸ್ಟೀಫನ್ ಫ್ಲೆಮಿಂಗ್ (ನ್ಯೂಜಿಲೆಂಡ್) ಈ ದಾಖಲೆ ಸಾಲಿನಲ್ಲಿ ಇದ್ದಾರೆ.

ಯಾರ್ಯಾರು ಎಷ್ಟೆಷ್ಟು ರನ್

ಯಾರ್ಯಾರು ಎಷ್ಟೆಷ್ಟು ರನ್

ನಾಯಕರಾಗಿ ಟೆಸ್ಟ್‌ನಲ್ಲಿ 5 ಸಾವಿರಕ್ಕೂ ಹೆಚ್ಚು ರನ್ ಮೈಲಿಗಲ್ಲು ಸ್ಥಾಪಿಸಿರುವ ವಿಶ್ವದ ಆಟಗಾರರಲ್ಲಿ ಗ್ರೇಮ್ ಸ್ಮಿತ್ 8659 ರನ್ (193 ಇನ್ನಿಂಗ್ಸ್‌), ಅಲನ್ ಬಾರ್ಡರ್ 6623 ರನ್ (154 ಇನ್ನಿಂಗ್ಸ್), ರಿಕಿ ಪಾಂಟಿಂಗ್ 6542 ರನ್ (140 ಇನ್ನಿಂಗ್ಸ್), ಕ್ಲೈವ್ ಲಾಯ್ಡ್ 5233 ರನ್ (111 ಇನ್ನಿಂಗ್ಸ್), ಸ್ಟೀಫನ್ ಫ್ಲೆಮಿಂಗ್ 5156 ರನ್ (135 ಇನ್ನಿಂಗ್ಸ್‌), ವಿರಾಟ್ ಕೊಹ್ಲಿ 5000 ರನ್ (86 ಇನ್ನಿಂಗ್ಸ್‌) ರನ್ ದಾಖಲೆ ಹೊಂದಿದ್ದಾರೆ.

ಭಾರತಕ್ಕೆ ಸುಲಭ ಮುನ್ನಡೆ

ಭಾರತಕ್ಕೆ ಸುಲಭ ಮುನ್ನಡೆ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾ 30.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 106 ಬಾರಿಸಿತು. ಭಾರತ, ಶುಕ್ರವಾರ (ನವೆಂಬರ್ 22) ದಿನದಾಟದ ಅಂತ್ಯಕ್ಕೆ ಕೊಹ್ಲಿ 59, ಚೇತೇಶ್ವರ ಪೂಜಾರ 55 ರನ್‌ನೊಂದಿಗೆ 46 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 174 ರನ್ ಪೇರಿಸಿ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, November 22, 2019, 23:41 [IST]
Other articles published on Nov 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more