ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್-ಗಂಗೂಲಿ ದಾಖಲೆ ಮುರಿದ ವಿರಾಟ್ ಕೊಹ್ಲಿ-ಅಜಿಂಕ್ಯ ರಹಾನೆ ಜೋಡಿ

ನಾಯಕ, ಉಪನಾಯಕನ ಆಟಕ್ಕೆ ಬೆಚ್ಚಿಬಿದ್ದ ವೆಸ್ಟ್ ಇಂಡೀಸ್..? | Virat Kohli | Oneindia Kannada
Virat Kohli-Ajinkya Rahane break Sachin Tendulkar-Sourav Ganguly’s partnership record

ಆ್ಯಂಟಿಗುವಾ, ಆಗಸ್ಟ್ 25: ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಜೋಡಿಯ ಹೆಸರಿನಲ್ಲಿದ್ದ ಅಪರೂಪದ ದಾಖಲೆಯೊಂದನ್ನು ನಾಯಕ ವಿರಾಟ್ ಕೊಹ್ಲಿ-ಉಪನಾಯಕ ಅಜಿಂಕ್ಯ ರಹಾನೆ ಮುರಿದಿದ್ದಾರೆ. ಆ್ಯಂಟಿಗುವಾದಲ್ಲಿ ನಡೆಯುತ್ತಿರುವ ಭಾರತ-ವೆಸ್ಟ್ ಇಂಡೀಸ್ ಮೊದಲ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ಗಲ್ಲಿ ಉತ್ತಮ ಜೊತೆಯಾಟ ಕೊಹ್ಲಿ-ರಹಾನೆ ದಾಖಲೆ ಬರೆದಿದ್ದಾರೆ.

ನಾಯಕ ಕೊಹ್ಲಿ ಪುಸ್ತಕ ಓದುತ್ತಿರುವ ಫೋಟೋ ಸಕತ್ ವೈರಲ್ನಾಯಕ ಕೊಹ್ಲಿ ಪುಸ್ತಕ ಓದುತ್ತಿರುವ ಫೋಟೋ ಸಕತ್ ವೈರಲ್

ಆ್ಯಂಟಿಗುವಾದ ಸರ್‌ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಶನಿವಾರ (ಆಗಸ್ಟ್ 24) ನಡೆದ ಮೊದಲ ಟೆಸ್ಟ್‌ನ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ವಿರಾಟ್ 51, ಅಜಿಂಕ್ಯ ರಹಾನೆ 53 ರನ್ ನೊಂದಿಗೆ 104 ರನ್ ಜೊತೆಯಾಟ ನೀಡಿದ್ದು ದಾಖಲೆಗೆ ಕಾರಣವಾಗಿದೆ.

ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕೃಷ್ಣಪ್ಪ ಗೌತಮ್!ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕೃಷ್ಣಪ್ಪ ಗೌತಮ್!

ಕೊಹ್ಲಿ-ರಹಾನೆ ಜೊತೆಯಾಟದ ನೆರವಿನಿಂದ ಟೀಮ್ ಇಂಡಿಯಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ 260 ರನ್ ಮುನ್ನಡೆ ಸಾಧಿಸಿದೆ.

ಕೊಹ್ಲಿ-ರಾಹನೆ 9ನೇ ಶತಕ

ಕೊಹ್ಲಿ-ರಾಹನೆ 9ನೇ ಶತಕ

ಏಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಕೊಹ್ಲಿ-ರಾಹನೆ ಬಾರಿಸಿದ 9ನೇ ಶತಕವಾಗಿ ಆ್ಯಂಟಿಗುವಾ ಶತಕ ಗುರುತಿಸಿಕೊಂಡಿದೆ. ಅಷ್ಟೇ ಅಲ್ಲ, ಆ್ಯಂಟಿಗುವಾದ ಸರ್‌ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ 100+ ರನ್‌ ದಾಖಲಿಸಿದ 3ನೇ ಜೋಡಿಯಾಗಿ ಕೊಹ್ಲಿ-ರಹಾನೆ ಕಾಣಿಸಿಕೊಂಡಿದ್ದಾರೆ.

ಸಚಿನ್-ಗಂಗೂಲಿ ದಾಖಲೆ ಬದಿಗೆ

ಸಚಿನ್-ಗಂಗೂಲಿ ದಾಖಲೆ ಬದಿಗೆ

ಟೆಸ್ಟ್‌ ಕ್ರಿಕೆಟ್‌ನಲ್ಲಿ 3ನೇ ವಿಕೆಟ್‌ ಉರುಳಿದ ಬಳಿಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಜೊತೆಯಾಟದ ಶತಕ ಬಾರಿಸಿದ್ದು ಇದು 8ನೇ ಸಾರಿ. ಈ ಸಾಧನೆಗಾಗಿ ರಹಾನೆ-ಕೊಹ್ಲಿ ಜೋಡಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದೆ. 3 ವಿಕೆಟ್ ಉರುಳಿದ ಬಳಿಕ ಅತಿ ಹೆಚ್ಚು ಜೊತೆಯಾಟದ ಶತಕ ದಾಖಲೆ ಈ ಹಿಂದೆ ಸಚಿನ್-ಗಂಗೂಲಿ ಹೆಸರಿನಲ್ಲಿತ್ತು. ಈ ಜೋಡಿ 7 ಶತಕಗಳನ್ನು ಬಾರಿಸಿತ್ತು.

ಭಾರತ ಮುನ್ನಡೆ

ಭಾರತ ಮುನ್ನಡೆ

ಭಾರತದ ಮೊದಲ ಇನ್ನಿಂಗ್ಸ್‌ನಲ್ಲೂ ರಹಾನೆ 81 ರನ್ ಗಳಿಸಿದ್ದರು. ಜೊತೆಗೆ ಕೆಎಲ್ ರಾಹುಲ್ 44, ಹನುಮ ವಿಹಾರಿ 32, ರವೀಂದ್ರ ಜಡೇಜಾ 58 ರನ್ ಸೇರಿಸಿದ್ದರಿಂದ ಭಾರತ 96.4ನೇ ಓವರ್‌ಗೆ ಎಲ್ಲಾ ವಿಕೆಟ್ ಕಳೆದು 297 ರನ್ ಮಾಡಿತ್ತು. ವಿಂಡೀಸ್ 222 ರನ್ ಬಾರಿಸಿದ್ದರಿಂದ ಭಾರತ 75 ರನ್ ಮುನ್ನಡೆ ಸಾಧಿಸಿತ್ತು.

ರೋಚ್, ಇಶಾಂತ್ ಮಿಂಚು

ರೋಚ್, ಇಶಾಂತ್ ಮಿಂಚು

ದ್ವಿತೀಯ ಇನ್ನಿಂಗ್ಸ್‌ ಆಡುತ್ತಿರುವ ಭಾರತ 72 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 185 ರನ್ ಬಾರಿಸಿ ಶನಿವಾರ (ಆಗಸ್ಟ್ 24) 3ನೇ ದಿನದಾಂತ್ಯಕ್ಕೆ ಒಟ್ಟು 260 ರನ್ ಮುನ್ನಡೆಯಲ್ಲಿತ್ತು. ಪ್ರಥಮ ಇನ್ನಿಂಗ್ಸ್‌ನಲ್ಲಿ ವಿಂಡೀಸ್ ಪರ ಕೆಮರ್ ರೋಚ್ (4 ವಿಕೆಟ್), ಭಾರತ ಪರ ಇಶಾಂತ್ ಶರ್ಮಾ (5 ವಿಕೆಟ್) ಬೌಲಿಂಗ್‌ನಲ್ಲಿ ಮಿಂಚಿದ್ದರು.

Story first published: Sunday, August 25, 2019, 15:40 [IST]
Other articles published on Aug 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X