ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದಲ್ಲಿ ಮಗು ಹೊಂದಲು ಕೊಹ್ಲಿ-ಅನುಷ್ಕಾಗೆ ಬ್ರೆಟ್‌ ಲೀ ಆಹ್ವಾನ

Virat Kohli and Anushka Sharma invited by Brett Lee to have their first baby in Australia

ಸಿಡ್ನಿ: ಟೀಮ್ ಇಂಡಿಯಾ ಸದ್ಯ ಆಸ್ಟ್ರೇಲಿಯಾದಲ್ಲಿದ್ದು ಟೆಸ್ಟ್ ಸರಣಿ ಆಡುತ್ತಿದೆ. ನಾಯಕ ವಿರಾಟ್ ಕೊಹ್ಲಿ ಕೂಡ ಆಸ್ಟ್ರೇಲಿಯಾದಲ್ಲಿದ್ದಾರೆ. ಮುಂದಿನ ತಿಂಗಳು ಕೊಹ್ಲಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿರುವುದರಿಂದ ಕೊಹ್ಲಿ ಈಗಾಗಲೇ ಬಿಸಿಸಿಐನಿಂದ ಪಿತೃತ್ವ ರಜೆ ಮಂಜೂರು ಮಾಡಿಕೊಂಡಿಕೊಂಡಿದ್ದಾರೆ.

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಗಮನ ಸೆಳೆದ ಬೂಮ್ರಾ3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಗಮನ ಸೆಳೆದ ಬೂಮ್ರಾ

ಪ್ರವಾಸಿ ಭಾರತ ಮತ್ತು ಆತಿಥೇಯ ಆಸ್ಟ್ರೇಲಿಯಾ ಮಧ್ಯೆ ಈಗ ಮೊದಲನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಇದರ ಮಧ್ಯೆ ಕ್ರಿಕೆಟ್‌ಗೆ ಹೊರತಾಗಿ ತಮಾಷೆಯ ಸಂಗತಿಗಳೂ ನಡೆಯುತ್ತಿದೆ. ಆಸ್ಟ್ರೇಲಿಯಾದಲ್ಲೇ ಮಗುವಿಗೆ ಜನ್ಮ ನೀಡುವಂತೆ ಕೊಹ್ಲಿ-ಅನುಷ್ಕಾ ದಂಪತಿಯನ್ನು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್‌ ಲೀ ಕೇಳಿಕೊಂಡಿದ್ದಾರೆ.

ಮಿಡ್‌-ಡೇ ಜೊತೆ ಮಾತನಾಡುತ್ತ ಬ್ರೆಟ್ ಲೀ ವಿರಾಟ್-ಅನುಷ್ಕಾರನ್ನು ಉದ್ದೇಶಿಸಿ, 'ಕೊಹ್ಲಿ ನೀವು ಬಯಸುವುದಾದರೆ, ಆಸ್ಟ್ರೇಲಿಯಾದಲ್ಲೇ ಮಗು ಹೊಂದಲು ನಿಮಗೆ ಆದರದ ಸ್ವಾಗತವಿದೆ. ಯಾಕೆಂದರೆ ನಾವು ನಿಮ್ಮನ್ನು ಒಪ್ಪಿಕೊಂಡಿದ್ದೇವೆ,' ಎಂದಿದ್ದಾರೆ. ಜನವರಿಯಲ್ಲಿ ಅನುಷ್ಕಾ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿದೆ.

ತೂತಾದ ಶೂ ಧರಿಸಿ ಮೈದಾನಕ್ಕಿಳಿದ ವೇಗಿ ಮೊಹಮ್ಮದ್ ಶಮಿ!ತೂತಾದ ಶೂ ಧರಿಸಿ ಮೈದಾನಕ್ಕಿಳಿದ ವೇಗಿ ಮೊಹಮ್ಮದ್ ಶಮಿ!

ಮಾತು ಮುಂದುವರೆಸಿದ ಲೀ, 'ನಿಮಗೆ ಪುಟಾಣಿ ಮಗಳು ಜನಿಸಿದರೆ ತುಂಬಾ ಖುಷಿ, ನಿಮಗೆ ಪುಟಾಣಿ ಮಗ ಜನಿಸಿದರೆ ಅದೂ ತುಂಬಾ ಖುಷಿ. ಮುಂದೊಂದು ದಿನ ಅವರು ಬ್ಯಾಗಿ ಗ್ರೀನ್ (ಆಸ್ಟ್ರೇಲಿಯನ್ ಕ್ರಿಕೆಟ್ ಕ್ಯಾಪ್) ಪಡೆಯಲಿದ್ದಾರೆ,' ಎಂದು ನಕ್ಕಿದ್ದಾರೆ. ಕೊಹ್ಲಿಗೆ ಮಗುವಾದರೆ ಅವರು ಆಸ್ಟ್ರೇಲಿಯಾ ಪರ ಆಡಲು ನಮ್ಮ ಆಹ್ವಾನವಿದೆ ಎಂಬರ್ಥದಲ್ಲಿ ಲೀ ತಮಾಷೆಯಾಗಿ ಹೀಗೆ ಹೇಳಿದ್ದಾರೆ.

Story first published: Saturday, December 19, 2020, 9:45 [IST]
Other articles published on Dec 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X