ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೇ-ನೈಟ್ ಟೆಸ್ಟ್‌ಗೂ ಮುನ್ನ ವಿಶೇಷ ಮನವಿ ಮಾಡಿದ ವಿರಾಟ್ ಕೊಹ್ಲಿ ಪಡೆ

Virat Kohli asks for a special practice session | Oneindia Kannada
Virat Kohli and Co request for special practice session in Indore

ನವದೆಹಲಿ, ನವೆಂಬರ್ 12: ಕೋಲ್ಕತ್ತಾ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಚೊಚ್ಚಲ ಬಾರಿಗೆ ಡೇ ನೈಟ್ ಟೆಸ್ಟ್‌ನಲ್ಲಿ ಆಡಲಿವೆ. ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಪಡೆ ವಿಶೇಷ ಅಭ್ಯಾಸಕ್ಕೆ ಅವಕಾಶ ನೀಡುವಂತೆ ಮಧ್ಯಪ್ರದೇಶ್ ಕ್ರಿಕೆಟ್ ಅಸೋಸಿಯೇಷನ್‌ (ಎಮ್‌ಪಿಸಿಎ) ಅನ್ನು ಕೋರಿಕೊಂಡಿದೆ.

ವೇಗಿ ಜಸ್‌ಪ್ರೀತ್‌ ಬೂಮ್ರಾ ಹಿಂದಿಕ್ಕಿ ದಾಖಲೆ ಬರೆದ ಯುಜುವೇಂದ್ರ ಚಾಹಲ್!ವೇಗಿ ಜಸ್‌ಪ್ರೀತ್‌ ಬೂಮ್ರಾ ಹಿಂದಿಕ್ಕಿ ದಾಖಲೆ ಬರೆದ ಯುಜುವೇಂದ್ರ ಚಾಹಲ್!

ನವೆಂಬರ್ 22ರಿಂದ 26ರವರೆಗೆ ಕೋಲ್ಕತ್ತಾದಲ್ಲಿ ಡೇ ನೈಟ್ ಟೆಸ್ಟ್ ನಡೆಯುವುದರಲ್ಲಿದೆ. ಅದಕ್ಕೂ ಮುನ್ನ ಇಂದೋರ್‌ನಲ್ಲಿ ಎರಡೂ ತಂಡಗಳು ನವೆಂಬರ್ 14ರಿಂದ ಆರಂಭವಾಗಲಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳಲಿವೆ. ಮೊದಲನೇ ಟೆಸ್ಟ್‌ ನಡೆಯುವ ಇಂಡೋರ್‌ ಸ್ಟೇಡಿಯಂನಲ್ಲೇ ದ್ವಿತೀಯ ಟೆಸ್ಟ್‌ ಆಗಿ ನಡೆಯಲಿರುವ ಡೇ ನೈಟ್‌ ಟೆಸ್ಟ್‌ಗೆ ವಿಶೇಷ ಅಭ್ಯಾಸ ನಡೆಸಲು ಭಾರತ ವಿನಂತಿಸಿಕೊಂಡಿದೆ.

ಸಚಿನ್ ತೆಂಡೂಲ್ಕರ್ 30 ವರ್ಷಗಳ ದಾಖಲೆ ಮುರಿದ 15ರ ಹರೆಯದ ಶೆಫಾಲಿ!ಸಚಿನ್ ತೆಂಡೂಲ್ಕರ್ 30 ವರ್ಷಗಳ ದಾಖಲೆ ಮುರಿದ 15ರ ಹರೆಯದ ಶೆಫಾಲಿ!

ಭಾರತ ಕ್ರಿಕೆಟ್‌ ತಂಡ ಮಂಗಳವಾರ (ನವೆಂಬರ್ 12) 5 pmನಿಂದ 6 pm ವರೆಗೆ ಕೃತಕ ಬೆಳಕಿನ ಅಡಿ ಪಿಂಕ್‌ ಬಾಲ್‌ನಲ್ಲಿ ಅಭ್ಯಾಸ ನಡೆಸಲಿದೆ. ನಮ್ಮಲ್ಲಿ ತಂಡ ಹೀಗೆ ವಿನಂತಿಸಿಕೊಂಡಿದೆ. ನಾವಿದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲಿದ್ದೇವೆ,' ಎಂದು ಎಂಪಿಸಿಎ ಹೆಡ್ ಕ್ಯುರೇಟರ್ ಸಮಂದರ್ ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದಾರೆ.

ಟೀಮ್ ಇಂಡಿಯಾ ಪರ ಟಿ20ಐ ಇತಿಹಾಸ ನಿರ್ಮಿಸಿದ ವೇಗಿ ದೀಪಕ್ ಚಹಾರ್!ಟೀಮ್ ಇಂಡಿಯಾ ಪರ ಟಿ20ಐ ಇತಿಹಾಸ ನಿರ್ಮಿಸಿದ ವೇಗಿ ದೀಪಕ್ ಚಹಾರ್!

ಡೇ ನೈಟ್ ಟೆಸ್ಟ್ ವೇಳೆ ಎಸ್‌ಜಿ ಪಿಂಕ್‌ ಬಾಲ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ. ಇಲ್ಲೀವರೆಗೆ ನಡೆದ ಒಟ್ಟು 11 ಡೇ ನೈಟ್ ಟೆಸ್ಟ್ ಪಂದ್ಯಗಳಲ್ಲಿ ಬರೀ ಕೂಕಾಬುರ ಮತ್ತು ಡ್ಯೂಕ್ಸ್ ಪಿಂಕ್‌ ಬಾಲ್‌ಗಳನ್ನು ಬಳಸಲಾಗಿತ್ತು. ಭಾರತದಲ್ಲಿ 2016-18ರ ದುಲೀಪ್ ಟ್ರೋಫಿ ಸೀಸನ್‌ಗಳಲ್ಲಿ ಪಿಂಕ್‌ ಬಾಲ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಇವೂ ಕೂಕಾಬುರದಿಂದಲೇ ತಯಾರಾಗಿದ್ದವು.

Story first published: Tuesday, November 12, 2019, 11:49 [IST]
Other articles published on Nov 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X