ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ನಿರ್ಭೀತ ಆಟಕ್ಕೆ ಆ ಇಬ್ಬರು ಕಾರಣ ಎಂದ ಭರತ್ ಅರುಣ್

virat kohli and Ravi shastri are the reason for team indias fearless brand of cricket

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರ್ಣಾಯಕ ಗಾಬಾ ಪಂದ್ಯವನ್ನು ಅದ್ಭುತ ರೀತಿಯಲ್ಲಿ ಗೆದ್ದ ಟೀಮ್ ಇಂಡಿಯಾ ಸರಣಿಯನ್ನು 2-1 ಅಂತರದಿಂದ ಗೆದ್ದುಬೀಗಿದೆ. ಅಡಿಲೇಡ್ ಅಂಗಳದಲ್ಲಿ ನಡೆದ ಮೊದಲ ಪಂದ್ಯದಲ್ಲಿ 36 ರನ್‌ಗಳಿಗೆ ಆಲವಟ್ ಆಗಿ ಸೋಲು ಕಂಡ ಬಳಿಕ ಟೀಮ್ ಇಂಡಿಯಾ ಊಹಿಸಲಾಗದ ರೀತಿಯಲ್ಲಿ ತಿರುಗಿ ಬಿದ್ದು ತವರಿನಲ್ಲೇ ಆಸ್ಟ್ರೇಲಿಯಾಗೆ ಮುಖಭಂಗವನ್ನುಂಟು ಮಾಡಿತ್ತು.

ಟೀಮ್ ಇಂಡಿಯಾದ ಈ ನಿರ್ಭೀತ ಆಟಕ್ಕೆ ಇಬ್ಬರ ಪಾತ್ರ ಮಹತ್ವದ್ದು ಎಂದು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದ್ದಾರೆ. ಆ ಇಬ್ಬರು ಟೀಮ್ ಇಂಡಿಯಾದಲ್ಲಿ ನಿರ್ಭೀತವಾಗಿ ಬ್ರ್ಯಾಂಡ್‌ನ ಕ್ರಿಕೆಟ್‌ಅನ್ನು ಬೆಳೆಸಿದ್ದಾರೆ ಎಂದು ಭರತ್ ಅರುಣ್ ಹೇಳಿದರು.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಪ್ರೇಕ್ಷಕರಿಗೆ ಅವಕಾಶ ನೀಡಲು ಬಿಸಿಸಿಐ ಉತ್ಸಾಹಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಪ್ರೇಕ್ಷಕರಿಗೆ ಅವಕಾಶ ನೀಡಲು ಬಿಸಿಸಿಐ ಉತ್ಸಾಹ

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಮುಖ್ಯ ಕೋಚ್ ರವಿ ಶಾಸ್ತ್ರಿ ಈ ಇಬ್ಬರು ಟೀಮ್ ಇಂಡಿಯಾದ ನಿರ್ಭೀತ ಆಟಕ್ಕೆ ಕಾರಣಕರ್ತರು ಎಂದು ಭರತ್ ಅರುಣ್ ಹೇಳಿದ್ದಾರೆ. "ಈಗಿನ ಟೀಮ್ ಇಂಡಿಯಾ ತಂಡ ನಿಜವಾಗಿಯೂ ನಿರ್ಭೀತ ಮತ್ತು ಪ್ರಾಮಾಣಿಕವಾಗಿದೆ. ತಂಡ ಅದ್ಭುತವಾದ ಪ್ರದರ್ಶನ ನೀಡಲು ಈ ಗುಣಮಟ್ಟ ಅಗತ್ಯವಾಗಿದೆ. ಇಬ್ಬರು ಇದನ್ನು ಹೊತರುವಲ್ಲಿ ಪ್ರಮುಖ ಕಾರಣರಾಗಿದ್ದಾರೆ. ಅದು ರವಿ ಶಾಸ್ತ್ರಿ ಹಾಗೂ ವಿರಾಟ್ ಕೊಹ್ಲಿ" ಎಂದಿದ್ದಾರೆ ಭರತ್ ಅರುಣ್.

ರಹಾನೆ ತಂಡವನ್ನು ಮುನ್ನಡೆಸಿದ ರೀತಿಯನ್ನು ಪ್ರಶಂಸಿಸುತ್ತಾ ಭರತ್ ಅರುಣ್ ಈ ಮಾತುನ್ನು ಹೇಳಿದ್ದಾರೆ. "ಮೊದಲನೆಯದಾಗಿ ಆಸ್ಟ್ರೇಲಿಯಾದಲ್ಲಿ ತೋರಿದ ಶ್ರೇಷ್ಠವಾದ ಪ್ರದರ್ಶನಕ್ಕೆ ಅಜಿಂಕ್ಯ ರಹಾನೆಯನ್ನು ನಾನು ಅಭಿನಂದಿಸುತ್ತೇನೆ. ಆದರೆ ವಿರಾಟ್ ಕೊಹ್ಲಿಯ ವಿರುದ್ಧ ಬರೆಯುವವರಿಗೆ ಕೇವಲ ಒಂದು ಅಂಕಿಅಂಶವನ್ನು ನೀಡಲು ಬಯಸುತ್ತೇನೆ. ಕೊಹ್ಲಿ ಮುನ್ನಡೆಸಿದ 20 ಸರಣಿಯಲ್ಲಿ 14ರಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ. ಅದರರ್ಥ ಗೆಲುವಿನ ಪ್ರತಿಶತ 70ಕ್ಕಿಂತ ಹೆಚ್ಚಿದೆ" ಎಂದು ಕೊಹ್ಲಿ ನಾಯಕತ್ವವನ್ನು ಸಮರ್ಥಿಸಿಕೊಂಡಿದ್ದಾರೆ.

'ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾದ ಯೋಜನೆ ಸಿದ್ಧವಾಗಿದೆ''ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾದ ಯೋಜನೆ ಸಿದ್ಧವಾಗಿದೆ'

"ಎಲ್ಲಾ ಮಾದರಿಯನ್ನು ನೀಡವು ನೋಡಿದರೆ ವಿರಾಟ್ ಕೊಹ್ಲಿ ಸರ್ವಶ್ರೇಷ್ಠರಲ್ಲಿ ಓಬ್ಬರೆನಿಸುತ್ತಾರೆ. ಆಲ್‌ಬ್ಲ್ಯಾಕ್ಸ್ ತಂಡ(ನ್ಯೂಜಿಲೆಂಡ್ ರಗ್ಬಿ ತಂಡ) 80ರ ಪ್ರತಿಶತದಷ್ಟು ಗೆಲುವಿನ ಸರಾಸರಿ ಹೊಂದಿದೆ. ವಿರಾಟ್ ಕೊಹ್ಲಿ ಎಲ್ಲಾ ಕ್ರೀಡೆಗಳಲ್ಲಿ ಎರಡನೇ ಸ್ಥಾನದ ದಾಖಲೆಯನ್ನು ಹೊಂದುತ್ತಾರೆ. ಆದರೆ ಅವರನ್ನು ವಿರೋಧಿಸುವವರು ಖಲೆದ ಕೆಲ ವರ್ಷಗಳಲ್ಲಿ ಅವರು ಯಾವ ಬದಲಾವಣೆಯನ್ನು ತಂದಿದ್ದಾರೆ ಎಂಬುದನ್ನು ಮನರೆಯುತ್ತಾರೆ" ಎಂದು ಕೊಹ್ಲಿ ಪರವಾಗಿ ಮಾತನಾಡಿದ್ದಾರೆ.

Story first published: Sunday, January 24, 2021, 16:52 [IST]
Other articles published on Jan 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X