ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರವಿಶಾಸ್ತ್ರಿ ಜೊತೆ ಸೇರಿದ್ದ ಕೊಹ್ಲಿ ರೆಕ್ಕೆಯನ್ನು ಬಿಸಿಸಿಐ ಬೇಕಂತಲೇ ಮುರಿದಿದೆ ಎಂದ ಮಾಜಿ ಕ್ರಿಕೆಟಿಗ!

Virat Kohli and Ravi Shastri cornered BCCI officials so BCCI clipped Kohlis wing says Atul Wassan

ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವಿರಾಟ್ ಕೊಹ್ಲಿ ದಿಢೀರನೆ ಭಾರತ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡಿದ್ದಾರೆ. ಹೌದು, ತಂಡವನ್ನು ಅಚ್ಚುಕಟ್ಟಾಗಿ ಮುನ್ನಡೆಸಿದ್ದರೂ ಹಾಗೂ ಹೆಚ್ಚು ಗೆಲುವಿನ ಶೇಕಡಾಂಶವನ್ನು ಹೊಂದಿದ್ದರೂ ಸಹ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕಿದೆ. ಹಾಗೂ ತಂಡದ ಮತ್ತೋರ್ವ ಆಟಗಾರನಾದ ರೋಹಿತ್ ಶರ್ಮಾ ಹೆಗಲಿಗೆ ಭಾರತ ಏಕದಿನ ತಂಡದ ನಾಯಕತ್ವದ ಜವಾಬ್ದಾರಿಯನ್ನು ಬಿಸಿಸಿಐ ಹಾಕಿದೆ.

ದ.ಆಫ್ರಿಕಾ ಪ್ರವಾಸಕ್ಕೆ 18 ಆಟಗಾರರ ಟೆಸ್ಟ್ ತಂಡ ಪ್ರಕಟಿಸಿದ ಬಿಸಿಸಿಐ; ಕಳಪೆ ಆಟಗಾರರಿಗೆ ಮತ್ತೆ ಅವಕಾಶ!ದ.ಆಫ್ರಿಕಾ ಪ್ರವಾಸಕ್ಕೆ 18 ಆಟಗಾರರ ಟೆಸ್ಟ್ ತಂಡ ಪ್ರಕಟಿಸಿದ ಬಿಸಿಸಿಐ; ಕಳಪೆ ಆಟಗಾರರಿಗೆ ಮತ್ತೆ ಅವಕಾಶ!

ಹೌದು, ಮುಂಬರಲಿರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡವನ್ನು ಬುಧವಾರ ಪ್ರಕಟಿಸಿದ ಬಿಸಿಸಿಐ ಇದಕ್ಕೂ ಮುನ್ನ ಮಹತ್ವದ ಘೋಷಣೆಯೊಂದನ್ನು ಮಾಡುವುದರ ಮೂಲಕ ಭಾರತ ಏಕದಿನ ತಂಡಕ್ಕೆ ನೂತನ ನಾಯಕನನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿರುವುದಾಗಿ ತಿಳಿಸಿತು. ಈ ಮೂಲಕ ವಿರಾಟ್ ಕೊಹ್ಲಿ ಈ ವರ್ಷ ಎರಡನೇ ಬಾರಿಗೆ ಭಾರತ ತಂಡವೊಂದರ ನಾಯಕತ್ವವನ್ನು ಕಳೆದುಕೊಂಡಂತಾಯಿತು. ಹೌದು, ಮೊದಲಿಗೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವುದಕ್ಕೂ ಮುನ್ನವೇ ಘೋಷಣೆಯನ್ನು ಮಾಡಿದ್ದ ವಿರಾಟ್ ಕೊಹ್ಲಿ ಭಾರತ ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವದತ್ತ ಹೆಚ್ಚಿನ ಗಮನ ಹರಿಸುವ ಸಲುವಾಗಿ ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ಹೇಳಿಕೆ ನೀಡಿದ್ದರು.

ಕೊಹ್ಲಿಯನ್ನು ನಾಯಕತ್ವದಿಂದ ಹೊರಹಾಕಿದ ಬೆನ್ನಲ್ಲೇ ರೋಹಿತ್‌ ಜೊತೆ ಕೈಜೋಡಿಸಲು ರಾಹುಲ್ ರೆಡಿಕೊಹ್ಲಿಯನ್ನು ನಾಯಕತ್ವದಿಂದ ಹೊರಹಾಕಿದ ಬೆನ್ನಲ್ಲೇ ರೋಹಿತ್‌ ಜೊತೆ ಕೈಜೋಡಿಸಲು ರಾಹುಲ್ ರೆಡಿ

ಆದರೆ ಇದೀಗ ಭಾರತ ಏಕದಿನ ತಂಡದ ನಾಯಕತ್ವವನ್ನು ಕೂಡ ವಿರಾಟ್ ಕೊಹ್ಲಿ ಕಳೆದುಕೊಂಡಿರುವುದು ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ದೊಡ್ಡಮಟ್ಟದ ಬೇಸರ ಉಂಟಾಗಲು ಕಾರಣವಾಗಿದೆ. ಹೌದು, ಧಿಡೀರನೆ ವಿರಾಟ್ ಕೊಹ್ಲಿಯನ್ನು ಬಿಸಿಸಿಐ ಬೇಕಂತಲೇ ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವಿರಾಟ್ ಕೊಹ್ಲಿ ಅಭಿಮಾನಿಗಳು ಆರೋಪ ಮಾಡುತ್ತಾ ಆಕ್ರೋಶ ಹೊರಹಾಕಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಅಭಿಮಾನಿಗಳ ಈ ಆಕ್ರೋಶದ ಕಿಚ್ಚಿಗೆ ಭಾರತದ ಮಾಜಿ ಕ್ರಿಕೆಟಿಗ ಅತುಲ್ ವಾಸನ್ ನೀಡಿರುವ ಹೇಳಿಕೆ ತುಪ್ಪ ಸುರಿದಂತಾಗಿದೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಭಾರತ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡಿರುವುದರ ಕುರಿತಾಗಿ ಅತುಲ್ ವಾಸನ್ ನೀಡಿರುವ ಹೇಳಿಕೆಯಾದರೂ ಏನು ಎಂಬುದರ ಕುರಿತ ಮಾಹಿತಿ ಈ ಕೆಳಕಂಡಂತಿದೆ ಓದಿ..

ರವಿಶಾಸ್ತ್ರಿ ಜೊತೆ ಸೇರಿದ ಕೊಹ್ಲಿಯ ರೆಕ್ಕೆಯನ್ನು ಬಿಸಿಸಿಐ ಬೇಕಂತಲೇ ಮುರಿದುಹಾಕಿದೆ ಎಂದ ಅತುಲ್

ರವಿಶಾಸ್ತ್ರಿ ಜೊತೆ ಸೇರಿದ ಕೊಹ್ಲಿಯ ರೆಕ್ಕೆಯನ್ನು ಬಿಸಿಸಿಐ ಬೇಕಂತಲೇ ಮುರಿದುಹಾಕಿದೆ ಎಂದ ಅತುಲ್

ವಿರಾಟ್ ಕೊಹ್ಲಿ ಭಾರತ ಏಕದಿನ ನಾಯಕತ್ವವನ್ನು ಕಳೆದುಕೊಂಡಿರುವುದರ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಅತುಲ್ ವಾಸನ್ ಇತ್ತೀಚೆಗೆ ನಡೆದ ಐಸಿಸಿ ಟೂರ್ನಿಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಟ್ರೋಫಿ ಗೆಲ್ಲಲಾಗದೇ ಇದ್ದದ್ದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು ಎಂದಿದ್ದಾರೆ. ಅಷ್ಟೇ ಅಲ್ಲದೆ ಕೋಚ್ ರವಿಶಾಸ್ತ್ರಿ ಜೊತೆ ಸೇರಿ ವಿರಾಟ್ ಕೊಹ್ಲಿ ಬಿಸಿಸಿಐಯನ್ನು ಮೂಲೆಗುಂಪು ಮಾಡಿದ್ದರು ಹೀಗಾಗಿಯೇ ಬಿಸಿಸಿಐ ಬೇಕಂತಲೇ ವಿರಾಟ್ ಕೊಹ್ಲಿಯ ರೆಕ್ಕೆಯನ್ನು ಮುರಿದು ಹಾಕಲು ನಿರ್ಧರಿಸಿದೆ. ಆದ್ದರಿಂದಲೇ ಇಷ್ಟೆಲ್ಲಾ ಜರುಗಿದೆ ಎಂದು ಅತುಲ್ ಹೇಳಿಕೆ ನೀಡಿದ್ದಾರೆ.

ಎಲ್ಲ ಮಾದರಿಗೂ ಏಕೈಕ ನಾಯಕ ಸರಿಯಲ್ಲ ಎಂದು ಈ ಹಿಂದೆಯೇ ಹೇಳಿದ್ದೆ ಎಂದ ಅತುಲ್

ಎಲ್ಲ ಮಾದರಿಗೂ ಏಕೈಕ ನಾಯಕ ಸರಿಯಲ್ಲ ಎಂದು ಈ ಹಿಂದೆಯೇ ಹೇಳಿದ್ದೆ ಎಂದ ಅತುಲ್

ನಾಯಕತ್ವದ ಹಂಚಿಕೆಯ ಕುರಿತು ವಿಶೇಷವಾಗಿ ಮಾತನಾಡಿರುವ ಅತುಲ್ ವಾಸನ್ ಎಲ್ಲಾ ಮಾದರಿಯ ಕ್ರಿಕೆಟ್ ತಂಡಗಳಿಗೂ ಓರ್ವನೇ ನಾಯಕನಾಗಿರುವುದು ಯಾವುದೇ ದೇಶಕ್ಕೂ ಕೂಡ ಸರಿಯಲ್ಲ ಎಂಬುದನ್ನು ಈ ಹಿಂದೆಯೇ ಹೇಳಿದ್ದೆ ಎಂದಿದ್ದಾರೆ. ಇನ್ನೂ ಮುಂದುವರಿದು ಮಾತನಾಡಿದ ಅತುಲ್ ರೋಹಿತ್ ಶರ್ಮಾ ಐಪಿಎಲ್ ಟೂರ್ನಿಗಳಲ್ಲಿ ಟ್ರೋಫಿಗಳನ್ನು ಗೆಲ್ಲುವುದರ ಮೂಲಕ ತಾವು ಉತ್ತಮ ನಾಯಕ ಎಂಬುದನ್ನು ನಿರೂಪಿಸಿಕೊಂಡು ಟೀಮ್ ಇಂಡಿಯಾದ ನಾಯಕತ್ವವನ್ನು ಪಡೆದುಕೊಂಡಿದ್ದಾರೆ ಹಾಗೂ ವಿರಾಟ್ ಕೊಹ್ಲಿ ಯಾವುದೇ ಐಪಿಎಲ್ ಟ್ರೋಫಿಯನ್ನು ಹೊಂದಿಲ್ಲ ಎಂದು ಕೂಡ ಹೇಳಿದ್ದಾರೆ.

ಕೊಹ್ಲಿ ನಾಯಕತ್ವದ ಬಗ್ಗೆ ದಾಖಲೆಗಳೇ ಮಾತನಾಡುತ್ತವೆ

ಕೊಹ್ಲಿ ನಾಯಕತ್ವದ ಬಗ್ಗೆ ದಾಖಲೆಗಳೇ ಮಾತನಾಡುತ್ತವೆ

ಇಷ್ಟೆಲ್ಲಾ ಹೇಳಿಕೆಗಳನ್ನು ನೀಡಿರುವ ಮಾಜಿ ಕ್ರಿಕೆಟಿಗ ಅತುಲ್ ವಾಸನ್ ವಿರಾಟ್ ಕೊಹ್ಲಿಯ ನಾಯಕತ್ವವನ್ನು ಕೂಡ ಹೊಗಳಿದ್ದಾರೆ. ವಿರಾಟ್ ಕೊಹ್ಲಿ ಅನೇಕ ವರ್ಷಗಳ ಕಾಲ ಭಾರತ ತಂಡವನ್ನು ಮುನ್ನಡೆಸಿದ್ದು, ಆತನ ನಾಯಕತ್ವ ಎಂಥದ್ದು ಎಂಬುದನ್ನು ಆತ ನಾಯಕನಾಗಿ ಸಾಧಿಸಿರುವ ದಾಖಲೆಗಳೇ ಹೇಳುತ್ತವೆ ಎಂದಿದ್ದಾರೆ.

Virat Kohli ಅಭಿಮಾನಿಗಳು ಸಿಟ್ಟಿನಿಂದ ಮಾಡಿದ ಕೆಲಸ ಏನು ಗೊತ್ತಾ | Oneindia Kannada

Story first published: Thursday, December 9, 2021, 19:51 [IST]
Other articles published on Dec 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X