ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಪಂದ್ಯವನ್ನು ಸೋಲುವಂತಿಲ್ಲ, '9pm for 9min' ಬಗ್ಗೆ ಕೊಹ್ಲಿ-ರೋಹಿತ್ ಸಂದೇಶ

Virat Kohli And Rohit Sharma Appeal To Nation To Show The Spirit

ಕೊರೊನಾವೈರಸ್ ಹಿನ್ನೆಲೆಯಲ್ಲಿ ಇಡೀ ಭಾರತ ಪ್ರಸ್ತುತ 21 ದಿನಗಳ ಲಾಕ್‌ಡೌನ್‌ನಲ್ಲಿದೆ. ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯಲು ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿವೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಕೂಡ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಕೊರೊನಾ ವೈರಸ್ ವಿಚಾರವಾಗಿ ಕಳೆದ ಶುಕ್ತವಾರ ವಿಡಿಯೋ ಸಂದೇಶವನ್ನು ನೀಡುತ್ತ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ವಿಶೇಷವಾದ ಕರೆಯೊಂದನ್ನು ನೀಡಿದರು. ಈ ಹೋರಾಟದಲ್ಲಿ ನೇರವಾಗೊ ಭಾಗಿಯಾದ ವೈದ್ಯಕೀಯ ಸಿಬ್ಬಂದಿಗಳಿಗೆ ಬೆಂಬಲವಾಗಿ ನಿಂತಿರುವುದಾಗಿ ತೋರಿಸಲು ಭಾನುವಾರದಂದು ದೀಪ ಬೆಳಗುವಂತೆ ಮನವಿ ಮಾಡಿದ್ದರು.

ಧೋನಿ ಮಗಳು ಜೀವಾ ಇಲ್ಲೊಬ್ಬರ ಕೆಲಸಕ್ಕೇ ಕಲ್ಲು ಹಾಕ್ತಿದ್ದಾಳಂತೆ!ಧೋನಿ ಮಗಳು ಜೀವಾ ಇಲ್ಲೊಬ್ಬರ ಕೆಲಸಕ್ಕೇ ಕಲ್ಲು ಹಾಕ್ತಿದ್ದಾಳಂತೆ!

ಈ ಮನವಿಗೆ ಟೀಮ್ ಇಂಡಿಯಾದ ನಾಯಕ ಉಪನಾಯಕರು ಸ್ಪಂದಿಸಿದ್ದು ತಮ್ಮ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಕೊಹ್ಲಿ-ರೋಹಿತ್ ವಿಶೇಷ ಸಂದೇಶಗಳು

ಕೊಹ್ಲಿ-ರೋಹಿತ್ ವಿಶೇಷ ಸಂದೇಶಗಳು

ದೇಶಕ್ಕೆ ಬಂದಿರುವ ಕಠಿಣ ಸಂದರ್ಭ ಎಂದು ಹೇಳಿ ಟೀಮ್ ಇಂಡಿಯಾದ ನಾಯಕ ಮತ್ತು ಉಪನಾಯಕರಿಬ್ಬರು ಟ್ವಿಟ್ಟರ್‌ನಲ್ಲಿ ವಿಶೇಷ ಸಂದೇಶವನ್ನು ಕೋರಿದ್ದಾರೆ. ಈ ಸಂದೇಶದಲ್ಲಿ ತಮ್ಮ ಅಭಿಮಾನಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಮನವಿಯನ್ನು ಪಾಲಿಸುವಂತೆ ಕೇಳಿಕೊಂಡಿದ್ದಾರೆ.

ಸಂಕಷ್ಟದ ಸಮಯವಿದು

ಸಂಕಷ್ಟದ ಸಮಯವಿದು

ವಿರಾಟ್ ಕೊಹ್ಲಿ ಅವರು ಕ್ರೀಡಾಂಗಣದ ಬಲವು ಅದರ ಅಭಿಮಾನಿಗಳಲ್ಲಿದ್ದರೆ ದೇಶದ ಶಕ್ತಿ ಅಲ್ಲಿನ ಜನರಲ್ಲಿದೆ ಎಂದು ಉಲ್ಲೇಖಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಭಾರತವು ಒಟ್ಟಾಗಿರುವುದನ್ನು ಜಗತ್ತಿಗೆ ತೋರಿಸಬೇಕಾದ ಸಮಯ ಇದು, ಮತ್ತು ಶೀಘ್ರದಲ್ಲೇ ಅದರಿಂದ ಹೊರಬರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟರು.

ನಾವು ಒಗ್ಗಟ್ಟಾಗಿರೋದನ್ನು ಸಾರೋಣ

ನಾವು ಒಗ್ಗಟ್ಟಾಗಿರೋದನ್ನು ಸಾರೋಣ

"ಕ್ರೀಡಾಂಗಣದ ಶಕ್ತಿ ಅದರಲ್ಲಿನ ಅಭಿಮಾನಿಗಳಲ್ಲಿದೆ. ದೇಶದ ಶಕ್ತಿ ಅದರ ಜನರಲ್ಲಿದೆ" ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ. ನಾವು ಒಟ್ಟಾಗಿದ್ದೇವೆಂದು ಜಗತ್ತಿಗೆ ತೋರಿಸಲು ಮತ್ತು ನಮ್ಮ ಆರೋಗ್ಯ ರಕ್ಷಕರ ಜೊತೆಗೆ ನಾವಿದ್ದೇವೆ ಎಂದು ತೋರಿಸಲು ಇಂದು ರಾತ್ರಿ 9 ನಿಮಿಷಗಳ ಕಾಲ ಬನ್ನಿ. ನಾವು ಒಗ್ಗಟ್ಟಾಗಿ ನಿಲ್ಲೋಣ ಎಂದಿದ್ದಾರೆ.

ಈ ಪಂದ್ಯದಲ್ಲಿ ಗೆಲ್ಲಲೇ ಬೇಕಿದೆ

ಈ ಪಂದ್ಯದಲ್ಲಿ ಗೆಲ್ಲಲೇ ಬೇಕಿದೆ

ತಮ್ಮ ನಾಯಕನಂತೆ ರೋಹಿತ್ ಶರ್ಮಾ ಕೂಡ ದೇಶದ ಜನರಿಗೆ ಜಾಗೃತಿ ಮೂಡಿಸಲು ಮುಂದೆ ಬಂದಿದ್ದಾರೆ. ಈ ಟೆಸ್ಟ್ ಪಂದ್ಯವನ್ನು ಗೆಲ್ಲುವುದು ರಾಷ್ಟ್ರಕ್ಕೆ ಎಷ್ಟು ಮುಖ್ಯ ಎಂದು ಹೇಳಿದರು. ಈ ಟೆಸ್ಟ್ ಪಂದ್ಯವನ್ನು ನಾವು ಗೆಲ್ಲಲೇ ಬೇಕಿದೆ ಅದರ ಮೇಲೆ ನಮ್ಮ ಬದುಕು ಅವಲಂಬಿತವಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

Story first published: Sunday, April 5, 2020, 13:57 [IST]
Other articles published on Apr 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X