ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮನಸ್ತಾಪ ಬೆಳೆಸಿಕೊಳ್ಳಬಾರದು ಎಂದ ಮಾಜಿ ಕ್ರಿಕೆಟಿಗ

 Virat Kohli and Rohit Sharma can thrive together says Ramiz Raja
ರೋಹಿತ್, ಕೊಹ್ಲಿ ಮನಸ್ತಾಪ ಸರಿ ಅಲ್ಲ ಪಾಕಿಸ್ತಾನ ಆಟಗಾರ | oneindia Kannada

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರಂತಹ ಇಬ್ಬರು ಅತ್ಯುತ್ತಮ ಕ್ರಿಕೆಟಿಗರು ಒಂದೇ ತಂಡದಲ್ಲಿ ಇರುವುದು ಆ ತಂಡದ ಅದೃಷ್ಟವೇ ಸರಿ. ಈ ವಿಷಯದಲ್ಲಿ ಟೀಮ್ ಇಂಡಿಯಾ ತಂಡ ಬಹಳ ಅದೃಷ್ಟಶಾಲಿ ಎಂದರೆ ತಪ್ಪಾಗಲಾರದು.

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‌ನಲ್ಲಿ ಭಾರತದ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಇರ್ಫಾನ್ ಪಠಾಣ್!

ಆದರೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಆಗಾಗ ಕೇಳಿಬರುತ್ತಿವೆ. ಕಳೆದ ಆಸ್ಟ್ರೇಲಿಯ ಪ್ರವಾಸದ ಸಂದರ್ಭದಲ್ಲಿ ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ತಂಡಕ್ಕೆ ಆಯ್ಕೆಯಾಗಿಲ್ಲ ಎಂಬ ವಿಷಯವನ್ನು ಬಿಸಿಸಿಐ ತಿಳಿಸಿತ್ತು. ಈ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಜೊತೆ ಸಂಪರ್ಕದಲ್ಲಿಲ್ಲ ಎಂದು ಹೇಳಿದ್ದು ಎಲ್ಲರಲ್ಲಿಯೂ ಆಶ್ಚರ್ಯ ಮೂಡಿಸಿತ್ತು. ಇದೀಗ ಈ ಇಬ್ಬರ ಕುರಿತು ಪಾಕಿಸ್ತಾನದ ಮಾಜಿ ಆಟಗಾರ ರಮೀಜ್ ರಾಜಾ ಮಾತನಾಡಿದ್ದಾರೆ.

ಐಪಿಎಲ್ ಟೂರ್ನಿ ವಿಸ್ತರಿಸುವ ಬಿಸಿಸಿಐ ಕನಸಿಗೆ ಐಸಿಸಿ ತಣ್ಣೀರು

'ಪ್ರದರ್ಶನದ ವಿಚಾರವಾಗಿ ಇಬ್ಬರು ಆಟಗಾರರ ನಡುವೆ ಮನಸ್ತಾಪಗಳು ಉಂಟಾಗುವುದು ಸಹಜ. ಈ ರೀತಿಯ ಮನಸ್ತಾಪ ಉಂಟಾಗುವುದು ಕೆಟ್ಟದ್ದೋ ಅಥವಾ ಒಳ್ಳೆಯದೋ ಎಂಬುದು ನನಗೆ ತಿಳಿಯದು. ನಾನು ಕ್ರಿಕೆಟ್ ಆಡುವ ಸಂದರ್ಭದಲ್ಲಿ ಇಮ್ರಾನ್ ಖಾನ್ ನಾಯಕತ್ವದಲ್ಲಿ ಸಹ ಆಟಗಾರರ ಮಧ್ಯೆ ಮನಸ್ತಾಪಗಳು ಇರುತ್ತಿರಲಿಲ್ಲ. ಅದೇ ರೀತಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮನಸ್ತಾಪಗಳಿಲ್ಲದೇ ಒಟ್ಟಿಗೆ ಉತ್ತಮ ಆಟವನ್ನು ಆಡುವುದರ ಮೂಲಕ ತಂಡವನ್ನು ಇನ್ನಷ್ಟು ಬಲಪಡಿಸಬಹುದು' ಇದು ರಮೀಜ್ ರಾಜಾ ಅಭಿಪ್ರಾಯಪಟ್ಟಿದ್ದಾರೆ.

Story first published: Wednesday, June 9, 2021, 11:31 [IST]
Other articles published on Jun 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X